More

    ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಹಲವು ದಾಖಲೆ ಬರೆದ ಶಿಖರ್ ಧವನ್

    ಕೊಲಂಬೊ: ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್, ನಾಯಕನಾಗಿ ಆಯ್ಕೆ ಮೊದಲ ಏಕದಿನ ಪಂದ್ಯದಲ್ಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಶಿಖರ್ ಧವನ್ (35 ವರ್ಷ, 225 ದಿನ) ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ನಾಯಕತ್ವಕ್ಕೆ ಪದಾರ್ಪಣೆ ಮಾಡಿದ ಅತಿ ಹಿರಿಯ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಮೊಹಿಂದರ್ ಅಮರ್‌ನಾಥ್ (34 ವರ್ಷ, 37 ದಿನ) ಹೆಸರಿನಲ್ಲಿ ಈ ದಾಖಲೆಯಿತ್ತು. ಶಿಖರ್ ಧವನ್ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ 6ನೇ ಭಾರತೀಯ ಆಟಗಾರನಾಗಿದ್ದಾರೆ. ಅಜಿತ್ ವಾಡೇಕರ್, ರವಿಶಾಸ್ತ್ರಿ, ಸಚಿನ್ ತೆಂಡುಲ್ಕರ್, ಅಜಯ್ ಜಡೇಜಾ, ಎಂಎಸ್ ಧೋನಿ ಹಿಂದಿನ ಸಾಧಕರು.

    ಇದನ್ನೂ ಓದಿ: ರಿಷಭ್ ಪಂತ್‌ಗೆ ವೈರಸ್ ಹರಡಿದ್ದು ಯಾರಿಂದ ಗೊತ್ತೇ..?

    ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 25ನೇ ನಾಯಕ ಎನಿಸಿಕೊಂಡಿದ್ದಾರೆ. ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 6 ಸಾವಿರ ರನ್ (140 ಇನಿಂಗ್ಸ್) ಪೂರೈಸಿದ ವಿಶ್ವದ 4ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಹಾಶಿಂ ಆಮ್ಲ (123), ವಿರಾಟ್ ಕೊಹ್ಲಿ (136) ಹಾಗೂ ಕೇನ್ ವಿಲಿಯಮ್ಸನ್ (139) ಕ್ರಮವಾಗಿ ಮೊದಲ 3 ಸ್ಥಾನದಲ್ಲಿದ್ದಾರೆ. ಅಲ್ಲದೆ, ಶ್ರೀಲಂಕಾ ಎದುರು ಅತಿಕಡಿಮೆ ಇನಿಂಗ್ಸ್‌ನಲ್ಲಿ (17) ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಹಾಶಿಂ ಆಮ್ಲ (18) ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿದೆ ಸೆಕ್ಸ್ ನಿರೋಧಕ ಬೆಡ್!

    ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಪ್ರಮುಖ ಆಟಗಾರರ ಗೈರಿನಲ್ಲಿ ಶ್ರೀಲಂಕಾದಲ್ಲಿ ಕಣಕ್ಕಿಳಿದಿರುವ ಶಿಖರ್ ಧವನ್ ಸಾರಥ್ಯದ ಭಾರತದ ಯುವ ತಂಡ ಭರ್ಜರಿ ನಿರ್ವಹಣೆ ಮೂಲಕ ಶುಭಾರಂಭ ಕಂಡಿತು. ಬೌಲರ್‌ಗಳ ಸಂಘಟಿತ ಹೋರಾಟದ ಜತೆಗೆ ನಾಯಕ ಶಿಖರ್ ಧವನ್ (86*ರನ್, 95 ಎಸೆತ, 6 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯತ ಆಟದಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು.

    ಶುಭಾರಂಭ ಕಂಡ ಯುವ ಭಾರತ; ಶ್ರೀಲಂಕಾ ಎದುರು 7 ವಿಕೆಟ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts