More

    ಶುಭಾರಂಭ ಕಂಡ ಯುವ ಭಾರತ; ಶ್ರೀಲಂಕಾ ಎದುರು 7 ವಿಕೆಟ್ ಜಯ

    ಕೊಲಂಬೊ: ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಸಹಿತ ಪ್ರಮುಖ ಆಟಗಾರರ ಗೈರಿನಲ್ಲಿ ಶ್ರೀಲಂಕಾದಲ್ಲಿ ಕಣಕ್ಕಿಳಿದಿರುವ ಶಿಖರ್ ಧವನ್ ಸಾರಥ್ಯದ ಭಾರತದ ಯುವ ತಂಡ ಭರ್ಜರಿ ನಿರ್ವಹಣೆ ಮೂಲಕ ಶುಭಾರಂಭ ಕಂಡಿತು. ಬೌಲರ್‌ಗಳ ಸಂಘಟಿತ ಹೋರಾಟದ ಜತೆಗೆ ನಾಯಕ ಶಿಖರ್ ಧವನ್ (86*ರನ್, 95 ಎಸೆತ, 6 ಬೌಂಡರಿ, 1 ಸಿಕ್ಸರ್) ಜವಾಬ್ದಾರಿಯುತ ಆಟದಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿತು. ಕನ್ನಡಿಗ ರಾಹುಲ್ ದ್ರಾವಿಡ್ ಮಾರ್ಗದರ್ಶನದ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಗೆಲುವಿನ ಆರಂಭ ಕಂಡಿತು.

    ಇದನ್ನೂ ಓದಿ: ರಿಷಭ್ ಪಂತ್‌ಗೆ ವೈರಸ್ ಹರಡಿದ್ದು ಯಾರಿಂದ ಗೊತ್ತೇ..?

    ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 9 ವಿಕೆಟ್‌ಗೆ 262 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ 36.4 ಓವರ್‌ಗಳಲ್ಲಿ 3 ವಿಕೆಟ್‌ಗೆ 263 ರನ್ ಗಳಿಸಿ ಜಯದ ನಗೆ ಬೀರಿತು. 2ನೇ ಏಕದಿನ ಪಂದ್ಯ ಮಂಗಳವಾರ ನಡೆಯಲಿದೆ.

    ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿದೆ ಸೆಕ್ಸ್ ನಿರೋಧಕ ಬೆಡ್!

    ಶ್ರೀಲಂಕಾ: 9 ವಿಕೆಟ್‌ಗೆ 262 (ಅವಿಷ್ಕಾ ಫೆರ್ನಾಂಡೊ 33, ಭನುಕಾ ರಾಜಪಕ್ಷೆ 24, ಚರಿತಾ ಅಸಲಾಂಕ 38, ಚಮಿಕಾ ಕರುಣರತ್ನೆ 43*, ದೀಪಕ್ ಚಹರ್ 37ಕ್ಕೆ 2, ಯಜುವೇಂದ್ರ ಚಾಹಲ್ 52ಕ್ಕೆ 2, ಕುಲದೀಪ್ ಯಾದವ್ 48ಕ್ಕೆ 2), ಭಾರತ: 36.4 ಓವರ್‌ಗಳಲ್ಲಿ 3 ವಿಕೆಟ್‌ಗೆ 263 (ಶಿಖರ್ ಧವನ್ 86*, ಇಶಾನ್ ಕಿಶನ್ 59, ಪೃಥ್ವಿ ಷಾ 43, ಮನೀಶ್ ಪಾಂಡೆ 26, ಸೂರ್ಯಕುಮಾರ್ ಯಾದವ್ 31*, ಧನಂಜಯ್ ಡಿ ಸಿಲ್ವಾ 49ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts