More

    ಹಾಡು- ಕುಣಿತದೊಂದಿಗೆ ಬದುಕಿದ ಜನಪದರು

    ಶಿಗ್ಗಾಂವಿ: ಜನಪದರು ತಮ್ಮ ಬದುಕಿನುದ್ದಕ್ಕೂ ಕೃಷಿ ಕಾಯಕ ಮಾಡುತ್ತಲೇ ಜಾನಪದವನ್ನು ಜೀವನದ ಭಾಗವಾಗಿಸಿಕೊಂಡಿದ್ದರು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ್ ಹೇಳಿದರು.
    ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಉತ್ತರ ಕರ್ನಾಟಕ ಲೇಖಕಿಯರ ಸಂಘ ಸಹಯೋಗದಲ್ಲಿ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ‘ಹಳೇ ಬೇರು ಹೊಸ ಚಿಗುರು’ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಲೇಖಕಿಯರ ಸಂಘದಿಂದ ವಿಶ್ವವಿದ್ಯಾಲಯದಲ್ಲಿ ಇಂಥ ವಿಚಾರ ಸಂಕಿರಣ ಆಯೋಜಿಸಿರುವುದು ಖುಷಿ ತಂದಿದೆ ಎಂದರು. ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಬಸವರಾಜ ನೆಲ್ಲಿಸರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡಲು ಹೋಗಿ ನೈತಿಕ ಮೌಲ್ಯ ಹೇಳುವುದನ್ನು ಮರೆಯುತ್ತಿದ್ದೇವೆ. ಇದರಿಂದಾಗಿ ಇತ್ತೀಚೆಗೆ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಇಂದಿನ ಯುವ ಸಮೂಹ ಜನಪದದಿಂದ ವಿಮುಖವಾಗುತ್ತಿದೆ. ಹಳೇ ಬೇರು ಹೊಸ ಚಿಗುರಿಗೆ ಯಾವ ರೀತಿಯ ಚೈತನ್ಯ ತುಂಬಬೇಕು ಎಂಬ ನೆಲೆಯಲ್ಲಿ ಚಿಂತನ-ಮಂಥನವಾಗಬೇಕು ಎಂದರು. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, ಜನಪದ ಸಾಹಿತ್ಯವು ಮಹಿಳೆಯರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಜೋಗುಳ ಹಾಡುವ, ಕಥೆ ಹೇಳುವ, ಸೋಬಾನೆ ಹಾಡುವ ಮೂಲಕ ಜನಪದ ಸಾಹಿತ್ಯದ ಬೇರು ಗಟ್ಟಿಗೊಳಿಸುವ ಕಾರ್ಯವನ್ನು ಮಹಿಳೆಯರು ಅನಾದಿ ಕಾಲದಿಂದ ಮಾಡುತ್ತ ಬಂದಿದ್ದಾರೆ ಎಂದರು.
    ಸಹಾಯಕ ಪ್ರಾಧ್ಯಾಪಕಿ ಡಾ. ಅಭಿಲಾಷ ಎಚ್.ಕೆ., ‘ಜನಪದ ಸಾಹಿತ್ಯ ಪ್ರಕಾರಗಳ ಬೇರು-ಚಿಗುರು’ ಕುರಿತು ಉಪನ್ಯಾಸ ನೀಡಿದರು. ಡಾ. ಗಿರೇಗೌಡ ಅರಳಿಹಳ್ಳಿ, ಡಾ. ಚಂದ್ರಪ್ಪ ಸೊಬಟಿ, ಪ್ರತಿಭಾ ಪಾಟೀಲ, ಕಸ್ತೂರಿ ಬೀರಪ್ಪನವರ, ಶಾಲಿನಿ ಆರ್., ಸಂಧ್ಯಾ ದೀಕ್ಷಿತ್, ಸುಧಾ ಹುಲಗೂರ, ಡಾ. ವಿಶ್ವೇಶ್ವರಿ ಹಿರೇಮಠ, ಡಾ. ರಾಮು ಮೂಲಗಿ, ಗೋವಿಂದಪ್ಪ ತಳವಾರ, ಶಾಲಿನಿ ರಘುನಾಥ, ಶರೀಫ ಮಾಕಪ್ಪನವರ, ಡಾ. ರಾಜಶೇಖರ ಡೊಂಬರಮತ್ತೂರ, ಡಾ. ವಿಜಯಲಕ್ಷ್ಮೀ ಗೇಟಿಯವರ, ಡಾ. ಉಷಾ ಗದ್ದಿಗಿಮಠ, ಸುನೀತಾ ಮೂರಶಿಳ್ಳಿ, ಡಾ.ಕೆ. ಪ್ರೇಮಕುಮಾರ, ಡಾ. ಮಾಲತಿ ಪಟ್ಟಣಶೆಟ್ಟಿ, ಡಾ. ಪಾರ್ವತಿ ಹಾಲಬಾವಿ,ಶಕುಂತಲಾ ಸಿಂಧೂರ, ಡಾ. ಅರುಣಾ ಹಳ್ಳಿಕೇರಿ, ಡಾ.ವಿ. ಶಾರದಾ, ಡಾ. ವೀಣಾ ಸಂಕನಗೌಡ್ರ, ಡಾ. ಸುಜಾತಾ ಹಡಗಲಿ, ವಿವಿ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts