More

    ನಿಶ್ಚಿತಾರ್ಥದ ವೇಳೆ ಧರಿಸಿದ್ದ ಡ್ರೆಸ್​ನಿಂದ ಮತ್ತೆ ಟ್ರೋಲ್​ ಆದ ಆಮೀರ್​ ಪುತ್ರಿ​! ಬಿಕಿನಿ ಬರ್ತಡೇ ನೆನಪಿಸಿದ ನೆಟ್ಟಿಗರು

    ಮುಂಬೈ: ಬಾಲಿವುಡ್​ ನಟ ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಟ್ರೋಲಿಗರ ಫೇವರಿಟ್​ ಅಂತಾ ಕಾಣ್ಸುತ್ತೆ! ಏಕೆಂದರೆ, ಸದಾ ಒಂದಿಲ್ಲೊಂದು ವಿಚಾರಕ್ಕೆ ಟ್ರೋಲ್​ ಆಗುತ್ತಲೇ ಇರುತ್ತಾರೆ. ಈ ಹಿಂದೆ ಬಿಕಿನಿ ಧರಿಸಿ ಬರ್ತಡೇ ಆಚರಿಸುವ ಮೂಲಕ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಇದೀಗ ನಿಶ್ಚಿತಾರ್ಥದ ವೇಳೆ ಧರಿಸಿದ್ದ ಉಡುಗೆಯಿಂದ ಇರಾ ಮತ್ತೊಮ್ಮೆ ಟ್ರೋಲ್​ ಆಗಿದ್ದಾರೆ.

    ಕಳೆದ ಸೆಪ್ಟೆಂಬರ್​ನಲ್ಲಿ ಸೈಕ್ಲಿಂಗ್​ ಸ್ಪರ್ಧೆ ಸಮಯದಲ್ಲಿ ಬಾಯ್​ಫ್ರೆಂಡ್​ ನುಪುರ್​ ಶಿಖರೆ, ಇರಾ ಅವರಿಗೆ ಉಂಗುರ ನೀಡಿ ಮದುವೆ ಪ್ರಪೋಸ್​ ಮಾಡಿದ್ದರು. ಇದಕ್ಕೆ ಇರಾ ಕೂಡ ಒಪ್ಪಿಗೆ ನೀಡಿದ್ದರು. ಈ ವಿಡಿಯೋ ಸಹ ಟ್ರೋಲ್​ ಆಗಿತ್ತು. ಇದೀಗ ಇಬ್ಬರು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವೇಳೆ ಧರಿಸಿದ ಕೆಂಪು ಬಣ್ಣದ ಗೌನ್​ನಿಂದಾಗಿ ಇರಾ ಮತ್ತೊಮ್ಮೆ ಟ್ರೋಲಿಗರ ದಾಳಕ್ಕೆ ಸಿಲುಕಿದ್ದಾರೆ.

    ಶುಕ್ರವಾರ (ನ.18) ರಾತ್ರಿ ಇರಾ ಮತ್ತು ನುಪುರ್​ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಭಾವಿ ದಂಪತಿಗಳ ನಿಶ್ಚಿತಾರ್ಥ ಸಮಾರಂಭವನ್ನು ನಡೆಸಿದ್ದು ಆಮೀರ್ ಖಾನ್​, ಮಾಜಿ ಪತ್ನಿ ಕಿರಣ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಗಣ್ಯರು ಸೇರಿದ್ದರು.

    ನಿಶ್ಚಿತಾರ್ಥದ ದಿನದಂದು ಇರಾ ಖಾನ್ ಕೆಂಪು ಬಣ್ಣದ ಗೌನ್ ತೊಟ್ಟಿದ್ದರು. ನುಪುರ್​ ಅವರು ಕಪ್ಪು ಬಣ್ಣದ ಕೋಟ್​ ಧರಿಸಿದ್ದರು. ಇರಾ ಖಾನ್​ ಧರಿಸಿದ್ದ ಡ್ರೆಸ್​ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದಾರೆ. ಆಕೆ ಧರಿಸಿದ್ದ ಬಟ್ಟೆಯಿಂದ ಮುಜುಗರ ಅನುಭಿವಿಸಿದಂತೆ ಕಾಣುತ್ತಿದೆ. ಇಂತಹ ಒಳ್ಳೆಯ ಸಂದರ್ಭದಲ್ಲೂ ಇಂತಹ ಅಶ್ಲೀಲ ಉಡುಗೆಯನ್ನು ಯಾಕೆ ತೊಡಬೇಕು ಎಂದು ಕಾಮೆಂಟ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.

    ಬರ್ತಡೇಯಲ್ಲಿ ಧರಿಸಿದ್ದ ಹಾಗೇ ನಿಶ್ಚಿತಾರ್ಥಕ್ಕೂ ಬಿಕಿನಿ ಧರಿಸಬೇಕಿತ್ತು. ಇಷ್ಟೊಂದು ಅಶ್ಲೀಲವಾಗಿ ಡ್ರೆಸ್​ ಮಾಡಿಕೊಂಡು ಮುಜುಗರ ಅನುಭವಿಸುವುದು ಎಂಥಾ ಕರ್ಮ. ಇಂತಹ ಸಮಯದಲ್ಲೂ ಮೈತುಂಬಾ ಬಟ್ಟೆ ಧರಿಸಬೇಕು ಅಂತಾ ಅನಿಸುವುದಿಲ್ಲವೇ ಅಂತೆಲ್ಲಾ ಕಾಮೆಂಟ್​ ಮಾಡುವ ಮೂಲಕ ಕಾಲೆಳೆದಿದ್ದಾರೆ. (ಏಜೆನ್ಸೀಸ್​)

    ಬಾಯ್​ಫ್ರೆಂಡ್​ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡ ಆಮೀರ್​ ಖಾನ್​ ಮಗಳು…

    ನೇಮಕ, ಮುಂಬಡ್ತಿ ಬಂದ್: ಪ್ರಕ್ರಿಯೆಗಳಿಗೆ ತಾತ್ಕಾಲಿಕ ಬ್ರೇಕ್; ಹೊಸ ಮೀಸಲಾತಿ ಕಾರಣ

    ಕಾಲೇಜೊಂದರ ಕಾರ್ಯಕ್ರಮದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ ವಿದ್ಯಾರ್ಥಿಗಳು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts