More

    ಶೆಹಬಾಜ್​​ ಷರೀಫ್​ ಪ್ರಧಾನಿಯಾಗಿ ಅಧಿಕೃತಗೊಳಿಸಿದ ಪಾಕ್​ ಸಂಸತ್​

    ಇಸ್ಲಮಾಬಾದ್: ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಶೆಹಬಾಜ್​ ಷರೀಫ್​ ಅವರನ್ನು ಸೋಮವಾರ ಪಾಕ್​ ಸಂಸತ್​ ನಲ್ಲಿ ಅಧಿಕೃತ ಆಯ್ಕೆ ಮಾಡಲಾಯಿತು. ಇಮ್ರಾನ್​ ಖಾನ್​ ಅವರು ಪದಚ್ಯುತಗೊಂಡ ಬಳಿಕ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಾಗಿದೆ.

    ಮೊಹಮ್ಮದ್​ ಶೆಹಬಾಜ್​ ಷರೀಫ್​​ ಪರ 174 ಮತಗಳು ಪಡೆದು ಪಾಕಿಸ್ತಾನ್​ ಮುಸ್ಲಿಂ ಲೀಗ್​​ -ನವಾಜ್​ (ಪಿಎಂಎಲ್​​-ಎನ್​​)ಪಕ್ಷದಿಂದ ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದರು. 70 ವರ್ಷದ ಶೆಹಬಾಜ್​​ ಮೂರು ಬಾರಿ ಪ್ರಧಾನಿಯಾಗಿ ನವಾಜ್​ ಷರೀಫ್​ ಅವರ ಸಹೋದರರಾಗಿದ್ದಾರೆ.

    ಈ ನಡುವೆ ಇಮ್ರಾನ್​ ಖಾನ್ ಅವರ ಪಕ್ಷದ ಸದಸ್ಯರು ಸದನದಿಂದ ಹೊರನಡೆದಿದ್ದಾರೆ. ಈ ನಡುವೆಯೂ ಹೊಸ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಡೆದಿದೆ. ವಿಶೇಷವೆಂದರೆ ಪಾಕಿಸ್ತಾನದ 75ವರ್ಷಗಳ ಇತಿಹಾಸದಲ್ಲಿ ಈವರೆಗೂ ಯಾವೊಬ್ಬ ಪ್ರಧಾನಿಯೂ ಅವಧಿ ಪೂರ್ಣಗೊಳಿಸಿಲ್ಲ.

    ಶೆಹಬಾಜ್ ಯಾರು?: ನವಾಜ್ ಷರೀಫ್​ರಷ್ಟು ಪ್ರಭಾವಿ ಅಲ್ಲದ, ಮರಿಯಂ ನವಾಜ್ ರಷ್ಟು ಜನಪ್ರಿಯರೂ ಅಲ್ಲದ ಶೆಹಬಾಜ್ ಷರೀಫ್, ಪರಿಣತ ಆಡಳಿತಗಾರನೆಂದು ಹೆಸರು ಪಡೆದವರು. ವ್ಯಾಪಾರೋದ್ಯಮಿಗಳ ಕುಟುಂಬದಲ್ಲಿ ಜನಿಸಿದ ಶೆಹಬಾಜ್, ಉದ್ಯಮದ ಕಡೆಗೆ ಹೆಚ್ಚು ಒಲವುಳ್ಳವರಾಗಿದ್ದರು. 2017ರಲ್ಲಿ ನವಾಜ್ ಷರೀಫ್ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಭ್ರಷ್ಟಾಚಾರದ ಆರೋಪ ಹೊರಿಸಲಾಗಿತ್ತು. ಶೆಹಬಾಜ್ ಅಂದಿನಿಂದ ಪಿಎಂಎಲ್ ಎನ್​ನ ಅಧ್ಯಕ್ಷರಾಗಿ ಮತ್ತು ವಿಪಕ್ಷ ನಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನವಾಜ್ ಷರೀಫ್ ಅವರಂತೆ ಶೆಹಬಾಜ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ.

    ಶೆಹಬಾಜ್​ಗೆ ಪಾಕಿಸ್ತಾನ ಚುಕ್ಕಾಣಿ?: ಶಾಂತಿ ಮಂತ್ರದ ಜತೆಯಲ್ಲೇ ಕುತೂಹಲ ಕೆರಳಿಸಿದ ಕಾಶ್ಮೀರ ತಂತ್ರ

    ಮಾಂಸಾಹಾರಕ್ಕೆ ತಡೆ ಆರೋಪ: ಜೆಎನ್​ಯುನಲ್ಲಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಗಲಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts