More

    ಅಂತರಘಟ್ಟೆ ಜಾತ್ರೆಗೆ ಕುರಿ ವ್ಯಾಪಾರ ಜೋರು

    ಕಡೂರು: ತಾಲೂಕಿನ ಅಂತರಘಟ್ಟೆಯ ಶ್ರೀದುರ್ಗಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿಮಂಗಳವಾರ ನಡೆಯುವ ದೇವಿ ಬಾನಸೇವೆ ಅಮ್ಮನ ಹಬ್ಬದ ಹಿನ್ನಲೆಯಲ್ಲಿ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಕುರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
    ಈ ಬಾರಿ ಬಹುತೇಕ ತಾಲೂಕಿನ ಸುತ್ತಮುತ್ತಲ ಬಿಳುವಾಲ, ಬಾಸೂರು, ಗೌಡನಕಟ್ಟೆಹಳ್ಳಿ ಭಾಗದ ಕುರಿಗಳು ಹೆಚ್ಚಾಗಿ ಭರ್ಜರಿ ವ್ಯಾಪಾರ ನಡೆಸಿದರೆ, ಹೊಸದುರ್ಗ, ಚಿತ್ರದುರ್ಗ ಹಾಗೂ ರಾಣೆಬೆನ್ನೂರು ಭಾಗದಿಂದ ವಿಶೇಷ ತಳಿಗಳ ಟಗರು ಮರಿಗಳನ್ನು ಮಾರಾಟ ಜೋರಾಗಿತ್ತು. ಒಂದು ಕುರಿ ಬೆಲೆ 18 ಸಾವಿರದಿಂದ ಪ್ರಾರಂಭವಾಗಿ 45 ಸಾವಿರದವರೆಗೆ ಮಾರಾಟವಾಗುತ್ತಿದ್ದವು. ಕುರಿ ತೂಕದ ಆಧಾರದ ಮೇಲೆ ಖರೀದಿಸುವವರಿಗೆ ಬೆಲೆ ತುಸು ಹೆಚ್ಚು ಎಂದು ಕಂಡು ಬಂದರೂ ಚೌಕಾಸಿ ಮಾಡಿ ವಿಶೇಷ ತಳಿಯ ಕುರಿಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಪ್ರತಿ ಸೋಮವಾರದ ಸಂತೆಯಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ಕುರಿ ವ್ಯಾಪಾರ ಮುಗಿಯುತ್ತಿತ್ತು. ಹಬ್ಬದ ವಿಶೇಷತೆ ಅಂಗವಾಗಿ ಬೆಳಗ್ಗೆ 5 ಗಂಟೆಗೆ ಆರಂಭವಾದ ಕುರಿ ಸಂತೆ ವ್ಯಾಪಾರ ಸಂಜೆ ವರೆಗೂ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts