More

    ಜಡೆ ಮಠದ ಉತ್ತರಾಧಿಕಾರಿ ರುದ್ರದೇವರಿಗೆ ಷಟಸ್ಥಳ ಬ್ರಹ್ಮೋಪದೇಶ, ನಿರಂಜನ ಚರಪಟ್ಟಾಧಿಕಾರ

    ಸೊರಬ: ಯೋಗ ಪರಂಪರೆಯಲ್ಲಿ ರಾಜ ಪರಂಪರೆಯಂತೆ ಶಿವಯೋಗವು ಶ್ರೇಷ್ಠ ಪರಂಪರೆ. ಶಿವಯೋಗದಿಂದ ಸಾಧನೆ ಸಿದ್ಧಿಸುತ್ತದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಡಾ. ಶ್ರೀ ಗುರುಸಿದ್ದರಾಜ ಯೋಗಿಂದ್ರ ಸ್ವಾಮೀಜಿ ಹೇಳಿದರು.

    ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಹಮ್ಮಿಕೊಂಡಿದ್ದ ಮಠದ ಉತ್ತರಾಧಿಕಾರಿ ರುದ್ರ ದೇವರಿಗೆ ಷಟಸ್ಥಳ ಬ್ರಹ್ಮೋಪದೇಶ, ನಿರಂಜನ ಚರಪಟ್ಟಾಧಿಕಾರ ಮತ್ತು ಶೂನ್ಯ ಸಿಂಹಾಸನಾರೋಹಣ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
    ಅಧಿಕಾರಕ್ಕೆ ಹಂಬಲಿಸುವ ಕಾಲದಲ್ಲಿ ಬುದ್ಧಿ, ಸಾಮಥರ್ಯ್, ಕ್ರಿಯಾಶೀಲತೆ ಹೊಂದಿದ ಶ್ರೀ ಮಹಾಂತ ಸ್ವಾಮೀಜಿ ಉತ್ತರಾಧಿಕಾರಿಗೆ ಪಟ್ಟಾಧಿಕಾರ ನೀಡುವ ಮೂಲಕ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಹಣ, ಅಧಿಕಾರ ಮುಖ್ಯವಲ್ಲ ಗುರುಗಳನ್ನು ಗೌರವಿಸುತ್ತ ಬಡವರ, ದೀನ-ದಲಿತ ಏಳಿಗೆ ಬಯಸುವುದು ಮುಖ್ಯ. ಆ ನಿಟ್ಟಿನಲ್ಲಿ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ ರುದ್ರ ದೇವರು ಶ್ರೀ ಮಹಾಂತ ಸ್ವಾಮೀಜಿಗಳ ಮಾರ್ಗದರ್ಶದಲ್ಲಿಯೇ ನಡೆಯಬೇಕು ಎಂದರು.
    ಶೂನ್ಯ, ವಿರಕ್ತ ಪರಂಪರೆಗೆ 900 ವರ್ಷಗಳ ಇತಿಹಾಸ ಇದೆ. ಇದಕ್ಕೆ ಅಲ್ಲಮ ಪ್ರಭುಗಳು ಅಡಿಪಾಯ ಹಾಕಿದವರು. ಮಹೋನ್ನತ ಸಾಧಕರು, ಸಂತರು ಇನ್ನೊಬ್ಬರಿಗೆ ಜ್ಞಾನೋಪದೇಶ ಮಾಡುತ್ತಲೇ ಇರುತ್ತಾರೆ. ಆ ನಿಟ್ಟಿನಲ್ಲಿ ಸ್ವಾಮೀಜಿಗಳು ಬೆಳೆಯಬೇಕು. ಡಾ. ಶ್ರೀ ಮಹಾಂತ ಸ್ವಾಮೀಜಿ ಜಡೆ ಸಂಸ್ಥಾನ ಮಠದ ಅಭಿವೃದ್ಧಿ ಜತೆಗೆ ಭಕ್ತರ ಸಹಕಾರದೊಂದಿಗೆ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿ ಅವರ ನಿರ್ವಿಕಲ್ಪ ಸಮಾಧಿಗೆ ಶಿಲಾಮಠ ನಿರ್ಮಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
    ಡಾ. ಶ್ರೀ ಮಹಾಂತ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಶ್ರೀ ರುದ್ರದೇವರ ಪೂರ್ವಾಶ್ರಮದ ತಂದೆ ಮಹೇಶ್, ತಾಯಿ ನಿರ್ಮಲಾ ಅವರನ್ನು ಸನ್ಮಾನಿಸಲಾಯಿತು. ನೂತನ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ, ಕುಂಭಮೇಳವು ವಾದ್ಯಮೇಳಗಳೊಂದಿಗೆ ಜಡೆ ಗ್ರಾಮ ಮುಖ್ಯಬೀದಿಯಲ್ಲಿ ಜರುಗಿತು.
    ಮುಂಡರಗಿಯ ಡಾ. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹುಕ್ಕೇರಿಯ ಶ್ರೀ ಸದಾಶಿವ ಸ್ವಾಮೀಜಿ, ಮೂಡಿಯ ಶ್ರೀ ಸದಾಶಿವ ಸ್ವಾಮೀಜಿ, ಅಕ್ಕಿಆಲೂರಿನ ಶ್ರೀ ಶಿವಬಸವ ಸ್ವಾಮೀಜಿ, ಮೂಲೆಗದ್ದೆಯ ಶ್ರೀ ಚೆನ್ನಬಸವ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನೀಲಗುಂದದ ಶ್ರೀ ಚೆನ್ನಬಸವ ಸ್ವಾಮೀಜಿ, ಹೂವಿನ ಸಿಡ್ಲಿಯ ಶ್ರೀ ಚೆನ್ನವೀರ ಸ್ವಾಮೀಜಿ, ಅರಳಿಕಟೆಯ್ಟ ಶ್ರೀ ಶಿವಮೂರ್ತಿ ಸ್ವಾಮೀಜಿ, ತಿಪ್ಪಾಯಕೊಪ್ಪದ ಶ್ರೀ ಮಹಾಂತ ಸ್ವಾಮೀಜಿ, ಕುಂದುಗೋಳದ ಶ್ರೀ ಬಸವಣ್ಣ ಸ್ವಾಮೀಜಿ, ಆಡಿಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿ ಇತರರಿದ್ದರು.

    ಸಮಾಜಮುಖಿ ಕೆಲಸ
    ಡಾ. ಶ್ರೀ ಮಹಾಂತ ಸ್ವಾಮೀಜಿಗಳು ನನ್ನ ಗುರುಗಳು. ಅವರ ಆಶಯದಂತೆ ಸಮಾಜಮುಖಿಯಾಗಿ ಕೆಲಸ ಮಾಡುತ್ತೇನೆ. ಜಾತಿ ಮತ್ತು ರಾಜಕಾರಣವನ್ನು ಹೊರಗಿಟ್ಟು ಮಠಕ್ಕೆ ಬಂದಿದ್ದೇನೆ ಎಂದು ಜಡೆ ಸಂಸ್ಥಾನ ಮಠದ ಉತ್ತರಾಧಿಕಾರಿಯಾಗಿ 13ನೇ ಪೀಠಾಧಿಕಾರಿಯಾಗಿ ಅಧಿಕಾರ ಸ್ವೀಕಾರಮಾಡಿ ಮಾತನಾಡಿದ ಶ್ರೀ ರುದ್ರ ದೇವರು ಹೇಳಿದರು. ಸಂಸ್ಕಾರ ನೀಡುವ ಶಿಬಿರ ಹಮ್ಮಿಕೊಳ್ಳುವ ಮೂಲಕ ಮಠದ ಕೀರ್ತಿ ಹೆಚ್ಚಿಸುವೆ. ಮಠದ ಆಸ್ತಿ ನಂಬಿಕೊಂಡು ಬರಲಿಲ್ಲ. ಮಠದ ಭಕ್ತರ ಭಕ್ತಿ ನಂಬಿ ಬಂದಿದ್ದೇನೆ. ನಾನು ಹಾಕಿದ ಜೋಳಿಗೆ ಹಣ, ಧಾನ್ಯ ಬೇಡಲು ಅಲ್ಲ. ಯುವಕರ ದುಶ್ಚಟಗಳ ಕಿತ್ತು ಜೋಳಿಗೆಗೆ ಹಾಕಿಕೊಳ್ಳಲು ಎಂದು ಮಾರ್ಮಿಕವಾಗಿ ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts