More

    ಸ್ವಾಮೀಜಿಯಾಗಲು ಪದವಿ ಮುಖ್ಯವಲ್ಲ: ತರಳಬಾಳು ಶ್ರೀ

    ಸೊರಬ: ನೈತಿಕ ನಲೆಗಟ್ಟಿನಲ್ಲಿ ವ್ಯಕ್ತಿತ್ವ ರೂಪಗೊಂಡು ನಿರ್ಮೋಹಕನಾಗಿದ್ದು, ಆಧ್ಯಾತ್ಮದ ತುಡಿತ ಹೊಂದಿದವ ಗುರು ಆಗಬಲ್ಲ ಎಂದು ಸಿರಿಗೆರೆ ತರಳಬಾಳು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಗುರುವಾರ ಸಂಜೆ ಸಿದ್ಧವೃಷಭೇಂದ್ರ ಶಿವಯೋಗಿಗಳ ಶಿಲಾಮಠ ಲೋಕಾರ್ಪಣೆ, ಶ್ರೀ ಮಹಾಂತ ಸ್ವಾಮೀಜಿ ಪೀಠಾರೋಹಣ ರಜತೋತ್ಸವ, ತುಲಾಭಾರ, ಮಂಟಪ ಪೂಜೆ, ಶ್ರೀ ರುದ್ರದೇವರ ನಿರಂಜನ ಚರಪಟ್ಟಾಧಿಕಾರ, ಕಾರ್ಯಕ್ರಮ ಹಾಗೂ ಶ್ರೀ ಸಿದ್ಧವೃಷಭೇಂದ್ರ ಶಿವಯೋಗಿಗಗಳ ಜೀವನ ದರ್ಶನ ಪ್ರವಚನದ ಐದನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
    ಸ್ವಾಮೀಜಿ ಆಗಲು ಪದವಿ ಮುಖ್ಯವಲ್ಲ. ನೈತಿಕ ಮೌಲ್ಯಗಳು ಮತ್ತು ಆಧ್ಯಾತ್ಮದ ಒಲವು ಇರಬೇಕು. ಆಧ್ಯಾತ್ಮಿಕ ತುಡಿತದ ಪಥದಲ್ಲಿ ಸಾಗುವ ನಿರ್ಮೋಹಕ ವಿದ್ದಾಗ ಮಾತ್ರ ಭಕ್ತಯ ಮೂಲಕ ಸಾಕ್ಷಾತ್ ಶಿವನನ್ನು ಒಲಿಸಿಕೊಳ್ಳಲು ಸಾಧ್ಯವಿದೆ ಎಂದು ಭಕ್ತಿ ಭಂಡಾರಿ ಬಸವಣ್ಣ ತಮ್ಮ ವಚನದಲ್ಲಿ ವಿಶ್ಲೇಶಿಸಿದ್ದಾರೆ. ಮಠಗಳು ವ್ಯವಹಾರದ ಕೇಂದ್ರಗಳಾಗದೆ, ಅನುಭವ ಕೇಂದ್ರಗಳಾದಾಗ ಮಾತ್ರ ಭಕ್ತ ಸಮೂಹವನ್ನು ತನ್ನತ್ತ ಸೆಳೆದು ಹೆಚ್ಚಿನ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದರು.
    ಭಾವ ಜೀವಿ ಆಗಿರುವುದರ ಜತೆಗೆ ಭಕ್ತಿ ಭಂಡಾರವಾಗಿದ್ದ ಬಸವಣ್ಣನವರ ವಚನಗಳಲ್ಲಿ ದೇಶದ ಕಾನೂನಿನ ಪರಿಪೂರ್ಣ ಅಂಶಗಳನ್ನು ಅರಿಯಬಹುದಾಗಿದೆ. ಧರ್ಮದ ಪರಿಧಿಗೆ ಯಾವುದೇ ಪ್ರಾದೇಶಿಕ ಚೌಕಟ್ಟನ್ನು ನಿರ್ಮಿಸಿಕೊಳ್ಳದೇ ಬಸವಣ್ಣನವರು ಅನುಭವ ಮಂಟಪದಲ್ಲಿ ಸಾಮಾಜಿಕ, ಕೌಟುಂಬಿಕ ಚರ್ಚೆಗಳನ್ನು ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ದಿನನಿತ್ಯ ಮಕ್ಕಳಿಗೆ ವಚನ ಪಠಣದ ಜತೆಗೆ ಗ್ರಂಥಗಳ ಅಧ್ಯಯನ ಮಾಡಿಸುವುದರಿಂದ ಉತ್ತಮ ಸಂಸ್ಕಾರ ಮೂಡಿಸಲು ಸಾಧ್ಯವಿದೆ. ಹಣ, ಒಡವೆ, ಭೂಮಿ ಯಾವುದು ಮಠದ ಆಸ್ತಿಯಲ್ಲ. ನಿಜವಾದ ಭಕ್ತ ಸಮೂಹವೇ ಮಠದ ಆಸ್ತಿಯೆಂದು ಎಂದು ತಿಳಿಸಿದರು.
    ಬೆಂಗಳೂರಿನ ಅಮರೇಶ ಗವಾಯಿಗಳ ತಂಡದಿಂದ ಗಾಯನ ನಡೆಯಿತು.
    ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಬನವಾಸಿ ಹೊಳೆಮಠದ ಶ್ರೀ ನಾಗಭೂಷಣ ಸ್ವಾಮೀಜಿ, ಜಡೆಸಂಸ್ಥಾನ ಮಠದ ಶೀ ರುದ್ರದೇವರು, ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಮೂಲಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಶ್ರೀ ನಿರಂಜನ ದೇವರು, ಸಿದ್ದಲಿಂಗ ದೇವರು , ಆರ್.ಸಿ.ಪಾಟೀಲ್, ಬಸವರಾಜ್ ಬಾರಂಗಿ, ಬಸವನಗೌಡ, ನಾಗರಾಜ್ ಗೌಡ ಆಲಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts