More

    ಶಾಸ್ತ್ರಿ ಸರ್ಕಲ್ ಫ್ಲೈ ಓವರ್ ಏಪ್ರಿಲ್‌ಗೆ ಸಂಚಾರಕ್ಕೆ ಮುಕ್ತಿ

    ಕುಂದಾಪುರ: ಇಲ್ಲಿನ ಶಾಸ್ತ್ರಿ ವೃತ್ತದ ಬಳಿಯ ಫ್ಲೈಓವರ್ ನಿರೀಕ್ಷೆಯಂತೆ ಕಾಮಗಾರಿ ವೇಗ ಪಡೆದುಕೊಂಡಿದೆ. ಇದೇ ವೇಗದಲ್ಲಿ ಕೆಲಸ ನಡೆದರೆ ಏಪ್ರಿಲ್ ಹಾಗೂ ಬಸ್ರೂರು ಎಂಬಾಕ್ಮೆಂಟ್ ಮೇ ತಿಂಗಳಲ್ಲಿ ಸಂಚಾರಕ್ಕೆ ಮುಕ್ತವಾಗಬಹುದು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಕುಂದಾಪುರ ಬಸ್ರೂರು ಬಳಿ ಅಂಡರ್‌ಪಾಸ್ ಕಾಮಗಾರಿ ಶನಿವಾರ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಶಾಸ್ತ್ರಿ ಸರ್ಕಲ್ ಬಳಿಯಿರುವ ಮೇಲ್ಸೇತುವೆ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಹಾಗೂ ಬಸ್ರೂರು ಮೂರುಕೈ ಬಳಿಯಿರುವ ಅಂಡರ್‌ಪಾಸ್ ಕಾಮಗಾರಿ ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ಭರವಸೆಯನ್ನು ಅಧಿಕಾರಿಗಳು, ಇಂಜಿನಿಯರ್‌ಗಳು ಕೊಟ್ಟಿದ್ದಾರೆ. ಕೆಲಸದ ವೇಗ ನೋಡಿದರೆ ಕೊಟ್ಟ ಭರವಸೆ ಈಡೇರುವ ಆಶಾಭಾವ ಮೂಡುತ್ತದೆ ಎಂದು ಹೇಳಿದರು.
    ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ ಮಾತನಾಡಿ, ಅಂಡರ್‌ಪಾಸ್ ಹಾಗೂ ಮೇಲ್ಸೇತುವೆ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಇನ್ನೂ ಕುಂದಾಪುರದ ಜನರಿಗೆ ಕೆಲವೊಂದು ಅಡೆತಡೆಗಳಿದ್ದು, ಇದನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು. ಹೆದ್ದಾರಿ ಹೋರಾಟ ಸಮಿತಿಯ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಜಿ.ಕೆ. ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.

    ಬೆಂಗಳೂರು ಕಾರವಾರ ರೈಲ್ ಸಂಚಾರಕ್ಕೆ ಗ್ರೀನ್‌ಸಿಗ್ನಲ್ ಅಷ್ಟೇ ಅಲ್ಲ, ಮಾ.7ರಿಂದ ಡೆಮೋ ರೈಲು ಓಡಾಟ ಆರಂಭಿಸಲಿದೆ. ಕರಾವಳಿ ತೀರದ ಜನರ ಆಶೋತ್ತರಕ್ಕೆ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಸ್ಪಂದಿಸಿದ್ದರಿಂದ ಹಾಗೂ ರೈಲ್ವೆ ಹಿತರಕ್ಷಣಾ ಸಮಿತಿ ಹೋರಾಟದಿಂದ ಬಹುದಿನಗಳ ಕನಸು ಈಡೇರಿದೆ. ರೈಲ್ವೆ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟ ಸುರೇಶ್ ಅಂಗಡಿ ನಡೆ ಶ್ಲಾಘನೀಯ.
    -ಕೆ.ಜಯಪ್ರಕಾಶ್ ಹೆಗ್ಡೆ, ಮಾಜಿ ಸಂಸದ

    ಕುಂದಾಪುರ -ಕೆಎಸ್‌ಆರ್‌ಡಿಸಿ ಬಳಿ ಡೈವರ್ಶನ್ ನೀಡದಿದ್ದರೆ, ಸರ್ಕಾರಿ ಬಸ್‌ಗಳು ಸಂಗಮ ಬಳಿ ಡೈವರ್ಶನ್ ಪಡೆದು ಕೆಎಸ್‌ಆರ್‌ಟಿಸಿ ಸ್ಟ್ಯಾಂಡಿಗೆ ಬರಬೇಕಾಗುತ್ತದೆ. ಸ್ಟಾೃಂಡ್‌ನಿಂದ ಭಟ್ಕಳ ಹುಬ್ಬಳಿ ಕಡೆ ಹೋಗುವ ಬಸ್‌ಗಳು ಪುನಃ ಶಾಸ್ತ್ರಿ ವೃತ್ತಕ್ಕೆ ಬಂದು ಡೈವರ್ಶನ್ ಪಡೆದು ಮುಂದಕ್ಕೆ ಹೋಗಬೇಕು. ಈ ಎಲ್ಲ ಸಮಸ್ಯೆ ತಪ್ಪಿಸಲು ಡೈವರ್ಶನ್ ಸಹಕಾರಿಯಾಗಲಿದೆ.
    -ಕೆಂಚನೂರು ಸೋಮಶೇಖರ ಶೆಟ್ಟಿ, ಅಧ್ಯಕ್ಷ, ಹೆದ್ದಾರಿ ಹೋರಾಟ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts