More

    VIDEO: ಧೋನಿ ಸಿಡಿಸಿದ ಸಿಕ್ಸರ್ ಚೆಂಡನ್ನು ಕೊಂಡೊಯ್ದ ದಾರಿಹೋಕ..!

    ದುಬೈ: ರಾಜಸ್ಥಾನ ರಾಯಲ್ಸ್ ವಿರುದ್ಧ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗಿಳಿದ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಆರಂಭದಲ್ಲಿ ಮಂದಿಗತಿಯಲ್ಲಿ ಬ್ಯಾಟ್ ಬೀಸಿದ ಧೋನಿ, ಟಾಮ್ ಕರ‌್ರನ್ ಎಸೆದ ಕಡೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಇದರಲ್ಲಿ ಮಿಡ್ ವಿಕೆಟ್ ನತ್ತ ಬಾರಿಸಿದ ಸಿಕ್ಸರ್ ಶಾರ್ಜಾ ಸ್ಟೇಡಿಯಂನಿಂದ ಹೊರಗಡೆ ಹೋಗಿದೆ. ಶಾರ್ಜಾದ ಮುಖ್ಯರಸ್ತೆ ಬಿದ್ದ ಚೆಂಡನ್ನು ಸ್ಥಳೀಯ ನಿವಾಸಿ ಕೊಂಡೊಯ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಡೀನ್​ ಜೋನ್ಸ್​ ಭಾರತದಲ್ಲಿ ನಿಧನ

    ಶಾರ್ಜಾದ ಮುಖ್ಯರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಧೋನಿ ಹೊಡೆದ ಸಿಕ್ಸರ್‌ನ ಚೆಂಡನ್ನು ಮನೆಗೆ ಕೊಂಡೊಯ್ದಿದ್ದಾರೆ. ಆತ ಅದೃಷ್ಟವಂತ. ಧೋನಿ ಸಿಕ್ಸರ್ ಬಾರಿಸಿದ ಚೆಂಡು ಆತನ ಬಳಿಯಿದೆ ಎಂದು ಐಪಿಎಲ್‌ನ ಅಧಿಕೃತ ಟ್ವಿಟರ್‌ನಲ್ಲಿ ವಿಡಿಯೋ ಸಮೇತ ಪ್ರಕಟಿಸಲಾಗಿದೆ. ಕಡೇ ಓವರ್‌ನಲ್ಲಿ ಸಿಎಸ್‌ಕೆ ಜಯ ದಾಖಲಿಸಲು 38 ರನ್‌ಗಳ ಅವಶ್ಯಕತೆ ಇತ್ತು. ಈ ವೇಳೆ 12 ಎಸೆತಗಳಿಗೆ 9 ರನ್‌ಗಳಿಸಿ ಕ್ರೀಸ್‌ನಲ್ಲಿದ್ದ ಧೋನಿ, ಕಡೇ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು. 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ್ದ ಧೋನಿ, ಆರಂಭಿಕ ಹಂತದಲ್ಲಿ ಮಂದಗತಿ ಬ್ಯಾಟಿಂಗ್ ಮಾಡಿದ್ದಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್, ಧೋನಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

    ಶಾರ್ಜಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ, ಸಂಜು ಸ್ಯಾಮ್ಸನ್ (74ರನ್, 32 ಎಸೆತ, 1 ಬೌಂಡರಿ, 9 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 7 ವಿಕೆಟ್‌ಗೆ 216 ರನ್ ಪೇರಿಸಿತು. ಪ್ರತಿಯಾಗಿ ಸಿಎಸ್‌ಕೆ ಪ್ಲೆಸಿಸ್ (72ರನ್, 37 ಎಸೆತ, 1 ಬೌಂಡರಿ, 7 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 6 ವಿಕೆಟ್‌ಗೆ 200 ರನ್ ಗಳಿಸಲಷ್ಟೇ ಶಕ್ತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts