More

    ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್​ ಡೀನ್​ ಜೋನ್ಸ್​ ಭಾರತದಲ್ಲಿ ನಿಧನ

    ಮುಂಬೈ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟರ್, ಮಾಜಿ ಕ್ರಿಕೆಟ್​ ದಿಗ್ಗಜ ಡೀನ್​ ಜೋನ್ಸ್​ ಅವರು ಮುಂಬೈನಲ್ಲಿ, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಡೀನ್​ ಜೋನ್ಸ್​ ಅವರು ಸದ್ಯ ನಡೆಯುತ್ತಿರುವ ಐಪಿಎಲ್​ ನಲ್ಲಿ ವೀಕ್ಷಕ  ವಿವರಣೆಗಾರರಾಗಿದ್ದರು. ತನ್ನಿಮಿತ್ತ ಮುಂಬೈನಲ್ಲಿ ಇದ್ದರು. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
    ಜೋನ್ಸ್​ ಅವರು 1984 ರಿಂದ 1992ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತೊಡಗಿಕೊಂಡಿದ್ದರು. 52 ಟೆಸ್ಟ್​​ ಪಂದ್ಯಗಳನ್ನಾಡಿ 3,631 ರನ್​ (ಬ್ಯಾಟಿಂಗ್​ ಸರಾಸರಿ-46.55, 14 ಅರ್ಧ ಶತಕ ಮತ್ತು 11 ಶತಕ) ಹಾಗೂ 164 ಏಕದಿನ ಪಂದ್ಯಗಳಿಂದ 6068 ರನ್​​( ಬ್ಯಾಟಿಂಗ್​ ಸರಾಸರಿ 44.61, 7 ಶತಕ ಮತ್ತು 46 ಅರ್ಧಶತಕ) ಗಳಿಸಿದ್ದರು. 1987ರ ವಿಶ್ವಕಪ್ ವಿಜೇಶ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದರು.

    ಇಂದು ಡೀನ್ ಮರ್ವಿನ್ ಜೋನ್ಸ್ ಅವರು ಮುಂಬೈನಲ್ಲಿ ಮೃತಪಟ್ಟಿದ್ದನ್ನು ಸ್ಟಾರ್ ಇಂಡಿಯಾ ದೃಢಪಡಿಸಿದೆ. ಜೋನ್ಸ್​ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಈ ಸಂದರ್ಭದಲ್ಲಿ ಅವರೊಂದಿಗೆ ನಾವಿದ್ದೇವೆ. ಆಸ್ಟ್ರೇಲಿಯಾದ ಹೈಕಮಿಷನ್​ ಜತೆ ಸಂಪರ್ಕದಲ್ಲಿದ್ದು, ಎಲ್ಲ ಸಿದ್ಧತೆಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದೆ.

    ಡೀನ್​ ಜೋನ್ಸ್​ ಅವರು ‘ಪ್ರೊಫೆಸರ್ ಡಿಯಾನೊ’ ಎಂದೇ ಪ್ರಸಿದ್ಧರಾಗಿದ್ದರು. ತಮ್ಮ ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ಹೆಸರಾಗಿದ್ದರು. (ಏಜೆನ್ಸೀಸ್​)

    ಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts