More

    ಶರೀಫಜ್ಜನ ಜಾತ್ರಾ ಮಹೋತ್ಸವ ನಾಳೆಯಿಂದ

    ಶಿಗ್ಗಾಂವಿ: ಭಾವೈಕ್ಯದ ಹರಿಕಾರ ತತ್ವಪದಗಳ ಸಾರದ ಮೂಲಕ ಜೀವನದ ತಿರುಳು ಉಣಬಡಿಸಿದ ಕವಿ ಶರೀಫ ಸಾಹೇಬ ಹಾಗೂ ಗುರು ಗೋವಿಂದ ಭಟ್ಟರ ಜಾತ್ರಾ ಮಹೋತ್ಸವವು ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಮಾ. 18ರಿಂದ 20ರವರೆಗೆ ನಡೆಯಲಿದ್ದು, ಸಿದಟಛಿತೆಗಳು ಭರದಿಂದ ಸಾಗಿವೆ.

    ಶರೀಫ ಸಾಹೇಬರು ವ್ಯಕ್ತಿಯಲ್ಲ ಶಕ್ತಿ, ಕೇವಲ ಜನಪದ, ತತ್ವಪದಕಾರರಲ್ಲ, ಕಾಲಜ್ಞಾನಿಯೂ ಹೌದು! ವಿಜ್ಞಾನಿಯೂ ಹೌದು. ತತ್ವಪದಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಮೂಲಕ ಸಮಾಜದಲ್ಲಿ ಸಾಮರಸ್ಯ ಬಿತ್ತಿದವರು.

    ಕರ್ನಾಟಕವು ಶರಣರು, ದಾಸರು, ತತ್ವಪದಕಾರರು ಹಾಗೂ ಸರ್ವಧರ್ವಿುಯರು ಬದುಕಿ ಬಾಳಿದ ನಾಡು. ಇವರು ತಮ್ಮ ಬದುಕು, ಚಿಂತನೆ, ಸಾಹಿತ್ಯಗಳಿಂದ ಜನರ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಅಂಥ ಮಹಿಮಾ ಪುರುಷರಲ್ಲಿ ಕಳಸದ ಗುರು ಗೋವಿಂದ ಭಟ್ಟರು ಹಾಗೂ ಶಿಶುವಿನಹಾಳ ಶರೀಫರು ಪ್ರಮುಖರು. ಹುಲಗೂರ ಖಾದರಶಾ ಅವರ ವರ ಪ್ರಸಾದದಿಂದ ಜನಿಸಿದವರು. ಕಳಸದ ಗುರು ಗೋವಿಂದ ಭಟ್ಟರಿಂದ ವಿದ್ಯಾದಾನ ಪಡೆದು ಸಂತ ಶಿಖಾಮಣಿಯಾಗಿ ರೂಪುಗೊಂಡರು. ಧರ್ಮದಿಂದ ಮುಸಲ್ಮಾನರಾದರೂ ಶರೀಫರ ಜೀವನದ ಸಂದೇಶಗಳು ಸಾರ್ವಕಾಲಿಕವಾಗಿವೆ. ಯಾವ ಮತ ಪಂಥಕ್ಕೂ ಸೇರದ ಶರೀಫರ ಸಮಾಧಿ ಸರ್ವಧರ್ಮ ಹರಿಕಾರರ ಪ್ರವಾಸಿ ತಾಣವಾಗಿ ಸಮಾನತೆಯ ಸಂದೇಶ ಸಾರುತ್ತಿದೆ.

    ‘ಶಿಶುನಾಳಾಧೀಶ’ ಎಂಬ ಅಂಕಿತನಾಮದಿಂದ ಬರೆದ ಶರೀಫರ ತತ್ವಪದಗಳು ಇಂದಿಗೂ ಅವರನ್ನು ಜೀವಂತವಾಗಿರಿಸಿವೆ.

    ಸರ್ಕಾರ ಶರೀಫರ ಸ್ಮರಣೆಗಾಗಿ ಶಿಶುವಿನಹಾಳದ ಶರೀಫಗಿರಿಯಲ್ಲಿ ಆಧ್ಯಾತ್ಮಿಕ ಅಧ್ಯಯನ ಕೇಂದ್ರ, ಪ್ರವಾಸಿ ನಿಲಯ, ಬೃಹದಾಕಾರದ ಗ್ರಂಥಾಲಯ, ಕಲಾಭವನ, ಸಮುದಾಯ ಭವನ ನಿರ್ವಿುಸಿ ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಿದೆ.

    ಬಂಡಿ ಬಂದಾಗಲೇ ತೇರಿಗೆ ಚಾಲನೆ: ಪ್ರತಿ ವರ್ಷವೂ ಗ್ರಾಮದ ಬಸವೇಶ್ವರ ದೇವಸ್ಥಾನ ಮತ್ತು ಗುಡಗೇರಿ ಕಲ್ಮೇಶ್ವರ ದೇವಸ್ಥಾನದಿಂದ ಹಿರಿಯರ ಸಮ್ಮುಖದಲ್ಲಿ ವಿಶೇಷವಾಗಿ ಅಲಂಕೃತಗೊಂಡ ಬಂಡಿಗಳು ಬಂದ ನಂತರವೇ ರಥೋತ್ಸವಕ್ಕೆ ಚಾಲನೆ ನೀಡುವುದು ಸಂಪ್ರದಾಯವಾಗಿ ನಡೆದು ಬಂದಿದೆ.

    ಅನ್ನ ದಾಸೋಹ, ಭಜನಾ ಸೇವೆ

    ಹುಬ್ಬಳ್ಳಿಯ ಉದಯ ಬೇಕರಿ ಮಾಲೀಕರಾದ ವಿಶ್ವನಾಥಸಾ, ರಾಮಚಂದ್ರಸಾ ದಲಬಂಜನ ಸಹೋದರರು, ದಾವಣಗೆರೆ ಶಿಲ್ಪಿ ಗುರೂಜಿ, ಕುಂದಗೋಳದ ಗಣೇಶ ಗುಡಿ ಭಜನಾ ಸಂಘ, ಕಲ್ಮೇಶ್ವರ ಭಜನಾ ಸಂಘ, ಶಿರಗುಪ್ಪಿ ಗುರುಲಿಂಗೇಶ್ವರ ದಾಸೋಹ ಸಮಿತಿ, ಶಿರಗುಪ್ಪಿಯ ವಿರೂಪಾಕ್ಷಪ್ಪ ಬಳಿಗಾರ ದಾಸೋಹ ಸಮಿತಿ ಹಾಗೂ ಗೆಳೆಯರ ಬಳಗ, ಕೋಳಿವಾಡದ ಶರಣಬಸವೇಶ್ವರ ಸೇವಾ ಸಂಘ, ಹುಬ್ಬಳ್ಳಿಯ ಗಬ್ಬೂರು ಗಲ್ಲಿಯ ಯುವಕ ಮಂಡಳ, ಹುಬ್ಬಳ್ಳಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದವರಿಂದ ಅನ್ನ ದಾಸೋಹ ಸೇವೆ ಜರುಗಲಿದೆ. ಜಾತ್ರೆಗೆ ಬರುವ ಭಕ್ತರಿಗೆ ಹುಬ್ಬಳ್ಳಿ, ಹಾವೇರಿ, ಶಿಗ್ಗಾಂವಿ, ಸವಣೂರ, ಲಕ್ಷೆ್ಮೕಶ್ವರ, ಗುಡಗೇರಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

    19ರಂದು ಮಹಾ ರಥೋತ್ಸವ

    ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಗುರು ಗೋವಿಂದ ಭಟ್ಟರು ಹಾಗೂ ಸಂತ ಶರೀಫ ಸಾಹೇಬರ ಜಾತ್ರಾ ಮಹೋತ್ಸವವು ಮಾ. 18ರಿಂದ 20 ರವರೆಗೆ ನಡೆಯಲಿದೆ. ಮಾ. 18ರಂದು ಬೆಳಗ್ಗೆ 9 ಗಂಟೆಗೆ ಭಾವೈಕ್ಯ ಧ್ವಜಾರೋಹಣ ಜರುಗಲಿದೆ. ಸಂಜೆ 4 ಗಂಟೆಗೆ ಶಿಶುವಿನಹಾಳ ದೇವಸ್ಥಾನದಿಂದ ಶರೀಫಗಿರಿಗೆ ವಾದ್ಯ ವೈಭವಗಳೊಂದಿಗೆ ತೇರಿನ ಕಳಸದ ಮೆರವಣಿಗೆ ಜರುಗುವುದು. ಮಾ. 19ರಂದು ಸಂಜೆ 6 ಗಂಟೆಗೆ ಮಹಾರಥೋತ್ಸವ ಸಂಭ್ರಮದಿಂದ ನಡೆಯಲಿದ್ದು, 20ರಂದು ಕಡುಬಿನ ಕಾಳಗ ಜರುಗಲಿದೆ.

    ಗೋವಿಂದ ಭಟ್ಟರು ಮತ್ತು ಶರೀಫ ಅಜ್ಜನವರ ಸಮಾಧಿ ಭಾವೈಕ್ಯ ಸಾರುವ ಕೇಂದ್ರವಾಗಿದೆ. ಮಾನವೀಯ ಮೌಲ್ಯ ಸ್ಮರಿಸುವ ಶಾಂತಿ ಧಾಮವಾಗಿರುವುದಂತೂ ಸತ್ಯ. ವಿಶ್ವ ಕುಟುಂಬಿಯಾದ ಶರೀಫರ ಸಮಾಧಿಯ ಒಂದು ಪಕ್ಕದಲ್ಲಿ ಮುಸ್ಲಿಂ ಸಮಾಜದವರಿಂದ ಸಕ್ಕರೆ ಓದಿಸುವುದು, ಇನ್ನೊಂದು ಪಕ್ಕದಲ್ಲಿ ಹಿಂದು ಬಂಧುಗಳಿಂದ ಕಾಯಿ, ಕರ್ಪರ, ನೈವೇದ್ಯ ಸೇವೆ ನಡೆಯುತ್ತವೆ. ಭಾವೈಕ್ಯ ತಾಣವಾಗಿರುವ ಶರೀಫಗಿರಿಯಲ್ಲಿ ಅಜ್ಜನ ದರ್ಶನ ಪಡೆದು ಜಾತಿ, ಮತ, ಕುಲವೆಂದು ಬಡಿದಾಡುವ ಬದಲು ಶರಣರು ಹಾಗೂ ಸಂತರ ಮಾರ್ಗದರ್ಶನದಲ್ಲಿ ಜೀವನ ನಡೆಸುವ ಅವಶ್ಯವಿದೆ.

    | ಚನ್ನಬಸಪ್ಪ ಶಂಕ್ರಪ್ಪ ಬೆಟ್ಟದೂರ ಸದಸ್ಯರು, ಶರೀಫಗಿರಿ ಟ್ರಸ್ಟ್

    ಗುರು ಶಿಷ್ಯ ಪರಂಪರೆಯನ್ನು ಇಡೀ ವಿಶ್ವಕ್ಕೆ ಸಾರಿದ ಗುರು ಗೋವಿಂದ ಭಟ್ಟರು ಹಾಗೂ ಶರೀಫಜ್ಜನವರು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ಕಾರಣ ಅವರ ಜೀವನ ಸಾಧನೆ, ಪವಾಡಗಳು, ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು, ಅಧ್ಯಾತ್ಮ ಚಿಂತನೆಗಳು ಹಾಗೂ ಸಾಮಾಜಿಕ ಕಳಕಳಿಯ ಭಾವೈಕ್ಯ ಸಂದೇಶಗಳು ಇಂದಿಗೂ ಅಜರಾಮರವಾಗಿವೆ. ಇವುಗಳ ಬಗ್ಗೆ ಅರಿಯೋಣ-ಸಾಧಕರನ್ನು ಸ್ಮರಿಸೋಣ.

    | ಬಸವರಾಜ ಮಳಲಿ ಶರೀಫ ಗಿರಿ ಟ್ರಸ್ಟ್ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts