More

    2023-24 ಹಣಕಾಸು ವರ್ಷದಲ್ಲಿ ಹೂಡಿಕೆದಾರರನ್ನು ಶ್ರೀಮಂತಗೊಳಿಸಿದ ಔಷಧ ಕಂಪನಿಗಳ ಷೇರುಗಳು: ನಿಫ್ಟಿ ಫಾರ್ಮಾ ಸೂಚ್ಯಂಕ ಏರಿಕೆಯಾಗಿದ್ದೆಷ್ಟು?

    ಮುಂಬೈ: ಕಳೆದ ಒಂದು ವರ್ಷದಲ್ಲಿ ಷೇರು ಮಾರುಕಟ್ಟೆಗಳಲ್ಲಿ ಭಾರತೀಯ ಫಾರ್ಮಾ ಷೇರುಗಳು ಬಲವಾದ ಓಟವನ್ನು ಕಂಡಿವೆ. ಕಾರ್ಪೊರೇಟ್ ಡೇಟಾಬೇಸ್ ಎಸಿಇ ಇಕ್ವಿಟಿಯಿಂದ ಲಭ್ಯವಿರುವ ಮಾಹಿತಿ ಪ್ರಕಾರ, ನಿಫ್ಟಿ ಫಾರ್ಮಾ ಸೂಚ್ಯಂಕವು 12 ತಿಂಗಳ ಅವಧಿಯಲ್ಲಿ 58% ರಷ್ಟು ಏರಿಕೆಯಾಗಿದೆ.

    ಫಾರ್ಮಾ ಸೂಚ್ಯಂಕವು ಈಕ್ವಿಟಿ ಬೆಂಚ್‌ಮಾರ್ಕ್ ನಿಫ್ಟಿ 50 ಸೂಚ್ಯಂಕವನ್ನು ಗಮನಾರ್ಹವಾಗಿ ಮೀರಿಸಿದೆ, ನಿಫ್ಟಿ 30 ಸೂಚ್ಯಂಕವು ಈ ಅವಧಿಯಲ್ಲಿ 30% ಲಾಭ ನೀಡಿದೆ. ಈ ಅವಧಿಯಲ್ಲಿ ನಿಫ್ಟಿ ಫಾರ್ಮಾ ಸೂಚ್ಯಂಕ ವ್ಯಾಪ್ತಿಯ ಎಲ್ಲಾ 19 ಷೇರುಗಳು ಹೂಡಿಕೆದಾರರಿಗೆ ಧನಾತ್ಮಕ ಆದಾಯವನ್ನು ನೀಡಿವೆ. ಆಯ್ದ 4 ಷೇರುಗಳಂತೂ 100% ಕ್ಕಿಂತ ಹೆಚ್ಚು ಲಾಭ ಗಳಿಸಿವೆ. ಈ ಮೂಲಕ ಹೂಡಿಕೆದಾರರ ಹಣವನ್ನು ದುಪ್ಪಟ್ಟು ಮಾಡಿವೆ.

    ಫಾರ್ಮಾ ಸ್ಟಾಕ್‌ಗಳಲ್ಲಿ ಲುಪಿನ್ ಅತಿಹೆಚ್ಚು ಲಾಭ ಕೊಟ್ಟ ಷೇರು ಆಗಿದೆ. ಈ ಸ್ಟಾಕ್ ಮಾರ್ಚ್ 28, 2023 ರಂದು 659 ರೂಪಾಯಿಯಿಂದ ಮಾರ್ಚ್ 28, 2024 ರಂದು 146% ರಷ್ಟು ಏರಿಕೆಯಾಗಿ ರೂ 1,618 ಕ್ಕೆ ತಲುಪಿದೆ. ಈ ಷೇರು 2024ನೇ ಕ್ಯಾಲೆಂಡರ್​ ವರ್ಷದಲ್ಲಿ ಇದುವರೆಗೆ 22% ಏರಿಕೆಯಾಗಿದೆ. ಲುಪಿನ್ ಪ್ರಸ್ತುತ ಮಾರುಕಟ್ಟೆ ಬಂಡವಾಳ 73,722 ಕೋಟಿ ರೂ. ಮುಟ್ಟಿದೆ. ಒಂಬತ್ತು ತಿಂಗಳ ಅವಧಿಯಲ್ಲಿ (ಏಪ್ರಿಲ್​ನಿಂದ ಡಿಸೆಂಬರ್ 2023) ಅಥವಾ FY24 ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಈ ಕಂಪನಿಯ ಒಟ್ಟು ಆದಾಯ 14,761 ಕೋಟಿ ರೂಪಾಯಿ ಮತ್ತು ಲಾಭವು 1,567 ಕೋಟಿ ರೂಪಾಯಿ ಆಗಿದೆ.

    ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಷೇರುಗಳ ಬೆಲೆ ಒಂದು ವರ್ಷದ ಹಿಂದೆ 439 ರೂ.ಗಳಿಂದ 117% ರಷ್ಟು ಜಿಗಿದು 955 ರೂ. ತಲುಪಿದೆ. 2024ರ ಕ್ಯಾಲೆಂಡರ್​ ವರ್ಷದಲ್ಲಿ ಇದುವರೆಗೆ 12% ಏರಿಕೆ ಕಂಡಿದೆ. ಗ್ಲೆನ್​ಮಾರ್ಕ್ ಪ್ರಸ್ತುತ ಮಾರುಕಟ್ಟೆ ಬಂಡವಾಳ 26,948 ಕೋಟಿ ರೂ. ಆಗಿದೆ. 2023-24ರ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಈ ಕಂಪನಿಯು 457 ಕೋಟಿ ರೂಪಾಯಿ ನಷ್ಟವನ್ನು ಮತ್ತು 8,957 ಕೋಟಿ ರೂಪಾಯಿಗಳ ಒಟ್ಟು ಮಾರಾಟವನ್ನು ದಾಖಲಿಸಿದೆ.

    ಅರಬಿಂದೋ ಫಾರ್ಮಾ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ, ಮಾರ್ಚ್ 28, 2024 ರಂದು ಸ್ಟಾಕ್ ಬೆಲೆ ರೂ. 1,089 ಕ್ಕೆ ಮುಟ್ಟಿದೆ. ಇದು ವರ್ಷದಲ್ಲಿ 113% ಹೆಚ್ಚಳ ಕಂಡಿದೆ. ಈ ಕಂಪನಿಯ ಇತ್ತೀಚಿನ ಮಾರುಕಟ್ಟೆ ಬಂಡವಾಳ ರೂ. 63,835 ಆಗಿದೆ. 2024 ರ ಕ್ಯಾಲೆಂಡರ್​ ವರ್ಷದ ಮೊದಲ ಮೂರು ತಿಂಗಳಲ್ಲಿ ಸ್ಟಾಕ್ 1% ಗಳಿಸಿದೆ. 2023-24 ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ (ಏಪ್ರಿಲ್ ನಿಂದ ಡಿಸೆಂಬರ್ 2023) ಇದು ರೂ 21,213 ಕೋಟಿ ಮಾರಾಟ ಮತ್ತು ರೂ 2,266 ಕೋಟಿ ಲಾಭವನ್ನು ಗಳಿಸಿದೆ.

    ಜೈಡಸ್​ ಲೈಫ್​ಸೈನ್ಸಸ್​ (Zydus Lifesciences) 110% ವಾರ್ಷಿಕ ಆದಾಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 2024 ಕ್ಯಾಲೆಂಡರ್​ ವರ್ಷದಲ್ಲಿ ಈ ಷೇರಿನ ಬೆಲೆ 47% ಹೆಚ್ಚಳವಾಗಿದೆ, ಈಗ ಸ್ಟಾಕ್ ಬೆಲೆ ರೂ 1,014 ತಲುಪಿದೆ. ಮಾರುಕಟ್ಟೆ ಬಂಡವಾಳ ರೂ 1.02 ಲಕ್ಷ ಕೋಟಿ ಆಗಿದೆ. 2023-24ನೇ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ ಇದು 2,606 ಕೋಟಿ ರೂಪಾಯಿಗಳ ಲಾಭವನ್ನು ಮತ್ತು 13,655 ಕೋಟಿ ರೂಪಾಯಿಗಳ ಒಟ್ಟು ಮಾರಾಟವನ್ನು ದಾಖಲಿಸಿದೆ.

    ನ್ಯಾಟ್ಕೋ ಫಾರ್ಮಾ ಕಳೆದ ಒಂದು ವರ್ಷದಲ್ಲಿ 74% ಮತ್ತು ಈ ವರ್ಷದ ಮೊದಲ ಮೂರು ತಿಂಗಳಲ್ಲಿ 18% ಗಳಿಸಿದೆ. 2023-24ನೇ ಸಾಲಿನ ಮೊದಲ ಮೂರು ತ್ರೈಮಾಸಿಕಗಳಲ್ಲಿ ಇದು 1,002 ಕೋಟಿ ರೂಪಾಯಿಗಳ ಲಾಭವನ್ನು ಮತ್ತು 2,930 ಕೋಟಿ ರೂಪಾಯಿಗಳ ಒಟ್ಟು ಮಾರಾಟವನ್ನು ದಾಖಲಿಸಿದೆ. ಇದರ ಇತ್ತೀಚಿನ ಸ್ಟಾಕ್ ಬೆಲೆ ರೂ 954.4 ಮತ್ತು ಮಾರುಕಟ್ಟೆ ಬಂಡವಾಳ ರೂ 17,095 ಕೋಟಿ ಆಗಿದೆ.

    2023-24 ಹಣಕಾಸು ವರ್ಷದ ಒಂಬತ್ತು ತಿಂಗಳ ಅವಧಿಯಲ್ಲಿ 19 ಫಾರ್ಮಾ ಸ್ಟಾಕ್‌ಗಳ ಒಟ್ಟು ಆದಾಯವು 2.02 ಲಕ್ಷ ಕೋಟಿ ರೂಪಾಯಿ ಮತ್ತು ತೆರಿಗೆಯ ನಂತರದ ಲಾಭವು 30,683 ಕೋಟಿ ರೂಪಾಯಿಗಳಾಗಿದೆ. ಈ ಕಂಪನಿಯ ಆದಾಯವು 19% ರಷ್ಟು ಬೆಳೆದಿದೆ. ಲಾಭವು ವರ್ಷದಿಂದ ವರ್ಷಕ್ಕೆ 29% ಹೆಚ್ಚಾಗಿದೆ. ಸನ್ ಫಾರ್ಮಾ (ರೂ. 6,982 ಕೋಟಿ), ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ (ರೂ. 4,257 ಕೋಟಿ) ಮತ್ತು ಸಿಪ್ಲಾ (ರೂ. 3,221 ಕೋಟಿ) 2023-24ನೇ ಹಣಕಾಸು ವರ್ಷದಲ್ಲಿ ಇದುವರೆಗಿನ ಮೂರು ಅತ್ಯಂತ ಲಾಭದಾಯಕ ಫಾರ್ಮಾ ಕಂಪನಿಗಳಾಗಿವೆ.

    ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಸಾಧ್ಯ: ಈ ಎರಡು ಷೇರುಗಳಲ್ಲಿ ಹೂಡಿಕೆಗೆ ತಜ್ಞರ ಸಲಹೆ

     

    ಕೊನೆಯ ವಹಿವಾಟಿನಲ್ಲಿ ಗೂಳಿ ಅಬ್ಬರಿಸಿದ್ದೇಕೆ?: 2023-24 ಹಣಕಾಸು ವರ್ಷದಲ್ಲಿ ನಿಫ್ಟಿ 29%; ಬಿಎಸ್​ಇ 25%; ಸ್ಮಾಲ್​ಕ್ಯಾಪ್​ 70%; ಮಿಡ್​ಕ್ಯಾಪ್​ 60% ಗಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts