More

    ಶರವು ದೇವಳಕ್ಕೆ ಹೊರೆ ಕಾಣಿಕೆ ಮೆರವಣಿಗೆ

    ಮಂಗಳೂರು: ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಶ್ರೀ ಶರಭೇಶ್ವರ ಮತ್ತು ಮಹಾಗಣಪತಿ ದೇವರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮೇ 1ರಿಂದ 7ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಭಾನುವಾರ ವೈಭವದಿಂದ ನಡೆಯಿತು.


    ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಸಂಜೆ 4.30ಕ್ಕೆ ಸರಿಯಾಗಿ ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಟಿತು. ಪಿ.ವಿ.ಎಸ್ ಸಮೀಪದ ಗುರ್ಜಿ ಕಟ್ಟೆಯಿಂದ ಪೂರ್ಣಕುಂಭ ಸ್ವಾಗತ, ಬ್ಯಾಂಡ್-ವಾದ್ಯ, ಚೆಂಡೆ, ಸರ್ವವಾದ್ಯಗಳೊಂದಿಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 150ಕ್ಕೂ ಅಧಿಕ ಕ್ಷೇತ್ರ, ಸಂಘ ಸಂಸ್ಥೆಗಳಿಂದ ಆಗಮಿಸಿದ ಹೊರೆಕಾಣಿಕೆ ಮೆರವಣಿಗೆ ಸಾಗಿತು. ಹೊರೆಕಾಣಿಕೆ ಮೆರವಣಿಗೆಯನ್ನು ಶ್ರೀಕ್ಷೇತ್ರ ಕಟೀಲು ಪ್ರಧಾನ ಆರ್ಚಕ ವೇದಮೂರ್ತಿ ಹರಿನಾರಾಯಣ ಆಸ್ರಣ್ಣ ಉದ್ಘಾಟಿಸಿದರು. ಈ ಸಂದರ್ಭ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ, ಪೊಳಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪದ್ಮನಾಭ ಭಟ್, ಕಾವೂರು ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ ಐತಾಳ, ಕುಡುಪು ದೇವಸ್ಥಾನದ ಮೊಕ್ತೇಸರ ಭಾಸ್ಕರ್ ಕೆ., ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ, ಮೊಕ್ತೇಸರ ಮನೋಹರ ಸುವರ್ಣ, ವಾಮಂಜೂರು ಅಮೃತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ಕುರುಅಂಬಾ ದೇವಸ್ಥಾನದ ಮೊಕ್ತೇಸರ ಮಹಾಬಲ ಚೌಟ, ಉರ್ವಸ್ಟೋರ್ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್, ಕದ್ರಿ ಕ್ಷೇತ್ರದ ಕೃಷ್ಣ ಅಡಿಗ, ರವಿ ಅಡಿಗ, ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಗುಡ್ಡೆಕೊಪ್ಲ ಗಣೇಶ್ ಶೆಟ್ಟಿ, ಜಗದೀಶ್ ಗರೋಡಿ, ಸುಂದರ್ ಶೆಟ್ಟಿ, ಶಿವಾನಂದ ರಾವ್, ರಮಾನಂದ ಭಂಡಾರಿ, ಸುಭಾನಂದ ರಾವ್, ಅಶೋಕ್ ಡಿ.ಕೆ., ಶರವು ಗಣೇಶ್ ಭಟ್ ಉಪಸ್ಥಿತರಿದ್ದರು.
    ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts