More

    ನೋಡನೋಡುತ್ತಿದ್ದಂತೆಯೆ ಬಿತ್ತು 50 ಅಡಿ ಕಟೌಟ್​; ಪಕ್ಕದಲ್ಲಿದ್ದ ಜನ ಜಸ್ಟ್​ ಮಿಸ್​..!

    ಹೊಸಕೋಟೆ: ನಗರದ ಹೃದಯಭಾಗದಲ್ಲಿ ನಿಲ್ಲಿಸಿದ್ದ ಶಾಸಕ ಶರತ್ ಬಚ್ಚೇಗೌಡರ ಬೃಹತ್ ಕಟೌಟ್ ಗುರುವಾರ ಸಂಜೆ ಏಕಾಏಕಿ ಮಕಾಡೆ ಮಲಗಿದ್ದು ಬೀದಿ ಬದಿ ಹೋಟೆಲ್ ನಡೆಸುತ್ತಿದ್ದ ತಳ್ಳುಗಾಡಿ ಮೇಲೆ ಬಿದ್ದು ವಸ್ತುಗಳು‌ ಮಣ್ಣು ಪಾಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.‌ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ. ಕೋರ್ಟ್ ಮೇಲಿನ ನೀರಿನ ಸಿಂಟೆಕ್ಸ್, ಶೌಚಗೃಹದ ವಸ್ತುಗಳು ಜಖಂಗೊಂಡಿದ್ದು ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ.

    ಕಬ್ಬಿಣ ಮರ ಬಳಸಿದ್ದ ಕಟೌಟ್:
    ಶಾಸಕ ಶರತ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ‌ನ.೨ ರಂದು ಸುಮಾರು ೫೦ ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು. ಸುಮಾರು ೬೦ ಟನ್ ತೂಕದ ಕಬ್ಬಿಣ ಹಾಗೂ ಮರವನ್ನು ಬಳಸಲಾಗಿತ್ತು ಎನ್ನಲಾಗಿದೆ.

    ಪರ್ಮಿಷನ್ ಇಲ್ಲ:
    ನಗರದಲ್ಲಿ ಶಾಸಕರ ಕಟೌಟ್ ಹಾಕಲು ನಗರಸಭೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎನ್ನಲಾಗಿದೆ. ಕಟೌಟ್ ನಿಲ್ಲಿಸಿ ವಾರ ಕಳೆಸರೂ ತೆರವುಗೊಳಿಸಿಲ್ಲ. ತರವಿಗೆ ಮುಂದಾದರೆ ಶಾಸಕರ ಬೆಂಬಲಿಗರು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಾರೆ ಎಂದು ನಗರಸಭೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಕಟೌಟ್ ದುರಂತದ ಬಗ್ಹೆ ನಗರಸಭೆ ವತಿಯಿಂದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ‘ಶಾಸಕರ ಹುಟ್ಟುಹಬ್ಬ ಶುಭಾಶಯ ಕೋರುವ ಸಾವಿರಾರು ಕಟೌಟ್ ಬ್ಯಾನರ್ ಹಾಕಲಾಗಿತ್ತು ಇದಕ್ಕೆ ನಗರಸಭೆಯಿಂದ ಅನುಮತಿ ಪಡೆದಿಲ್ಲ.‌ಕಳೆದ ಮೂರು ದಿನದಿಂದ ಸಾಕಷ್ಟು ತರೆವು ಮಾಡಲಾಗಿದೆ. ದುರಂತ ನಡೆಸಿರುವ ಬೃಹತ್ ಕಟೌಟ್ ತರವಿಗೆ ಸೂಚಿಸಲಾಗಿತ್ತು. ಆದರೆ ಶಾಸಕರ ಬೆಂಬಲಿಗರ ಧಮಕಿಗೆ ಹೆದರಿ ಅಧಿಕಾರಿಗಳು ತೆರವಿಗೆ ಹಿಂಜರಿದಿದ್ದರು’ ಎಂದು ನಗರಸಭೆ ಅಧ್ಯಕ್ಷ ನಾಗರಾಜ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts