More

    ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ಶರನ್ನವರಾತ್ರಿ

    ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ಅ.15ರಿಂದ 24ರವರೆಗೆ ಶರನ್ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ. ದೇವಿಯ ಅವತಾರಗಳಲ್ಲಿ ಒಂದಾಗಿರುವ ಇಂದ್ರಾಣಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.

    ದಸರಾ ಅಂಗವಾಗಿ ಪ್ರತಿ ದಿನ ಸಂಜೆ 6.30ರಿಂದ ರಾಜ್ಯದ ಖ್ಯಾತನಾಮ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ದೇವಾಲಯದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ತಜ್ಞ ವೈದ್ಯ ಡಾ. ಗುರುದತ್ ಅ.15ರ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 15 ರಿಂದ 23ರವರೆಗೆ ಕ್ರಮವಾಗಿ ದೇವರನಾಮಗಳ ಗಾಯನ, ದೇವಿ ಕೀರ್ತನೆಗಳ ಗಾಯನ, ಹರಟೆ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ, ಸತ್ಸಂಗ, ಸುಗಮ ಸಂಗೀತ, ಸ್ತೋತ್ರ ಪಠಣ ನಡೆಯಲಿದೆ ಎಂದು ತಿಳಿಸಿದರು.
    10 ದಿನಗಳ ಕಾಲ ಪ್ರತಿದಿನ ಚಂಡಿಕಾಯಾಗ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಂಜೆ 5ರಿಂದ ಭಜನೆ, 6ರಿಂದ ಸೌಂದರ್ಯ ಲಹರಿ ಹಾಗೂ ಲಲಿತಾ ಸಹಸ್ರನಾಮ ಪಠಣ ಜರುಗಲಿದೆ. ಅ.25ರಂದು ಇಂದ್ರಾಣಿ ದೇವಿಯ ಮೂರ್ತಿಯನ್ನು ಪುರದಾಳು ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಹೇಳಿದರು.
    ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಚ್.ರಾಮಲಿಂಗಪ್ಪ, ಕಾರ್ಯದರ್ಶಿ ಕೆ.ರಮೇಶ್, ಪ್ರಮುಖರಾದ ಸುಜಯಾ ಪ್ರಸಾದ್, ಗೋಪಾಲ ನಾಯ್ಕ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts