ಶರಣರ ಆಶಯ ಬಿತ್ತುವ ಮತ್ತೆ ಕಲ್ಯಾಣ ಆಗಸ್ಟ್ 1 ರಿಂದ

blank

ಹೊಸದುರ್ಗ: ಬಸವಾದಿ ಶಿವಶರಣರ ಸಮ ಸಮಾಜದ ಆಶಯಗಳನ್ನು ಜನಮನದಲ್ಲಿ ಬಿತ್ತುವ ಸದುದ್ದೇಶದಿಂದ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶ್ರೀಗಳು 2019 ರಿಂದ ಆರಂಭಿಸಿರುವ ಮತ್ತೆ ಕಲ್ಯಾಣ ಕಾರ್ಯಕ್ರಮ ಈ ವರ್ಷ ಅರಸಿಕೆರೆ ಹಾಗೂ ತಿಪಟೂರು ತಾಲೂಕಿನ ಆಯ್ದ ಗ್ರಾಮಗಳಲ್ಲಿ ನಡೆಯಲಿದೆ.

ಆಗಸ್ಟ್ 1 ರಿಂದ 29 ದಿನ ಕಾರ್ಯಕ್ರಮ ನಡೆಯಲಿದ್ದು ಅರಿವು, ಆಚಾರಗಳಲ್ಲಿ ಸಮನ್ವಯತೆ ಸಾಧನೆ, ಅಂತರಂಗ-ಬಹಿರಂಗ ಶುದ್ಧಿ, ಜಾತಿ, ವರ್ಣ, ವರ್ಗ, ಲಿಂಗ ಭೇದ ರಹಿತ ಸಮಾಜ ನಿರ್ಮಾಣವೇ ಮತ್ತೆ ಕಲ್ಯಾಣದ ಆಶಯ.

ಕಾರ್ಯಕ್ರಮದ ಅಂಗವಾಗಿ ಪ್ರತಿ ದಿನ ಬೆಳಗ್ಗೆ ಇಷ್ಟಲಿಂಗ ದೀಕ್ಷೆ, ಶಾಲಾ, ಕಾಲೇಜು ಮಕ್ಕಳ ಜತೆ ವಚನ ಸಂವಾದ, ಸಂಜೆ ಆಯಾ ಗ್ರಾಮಗಳಲ್ಲಿ ಎಲ್ಲ ಜಾತಿ,ಮತ, ಪಂಥದವರ ಜತೆ ಸೇರಿ ಸಾಮರಸ್ಯ ನಡಿಗೆ ಆಯೋಜಿಸುತ್ತಿದ್ದು ಸ್ವಾಮೀಜಿ ಹೆಜ್ಜೆ ಹಾಕುವರು.

ನಿತ್ಯ ಸಂಜೆ 6 ಕ್ಕೆ ಪಂಡಿತಾರಾಧ್ಯರ ನೇತೃತ್ವದಲ್ಲಿ ಶರಣರ ತಾತ್ವಿಕ ಚಿಂತನಾ ಗೋಷ್ಠಿಗಳು ನಡೆಯಲಿವೆ. ನಾಡಿನ ಗಣ್ಯರು, ಚಿಂತಕರು, ಸ್ವಾಮೀಜಿಗಳು ವಚನ ಚಳವಳಿಯ ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡುವರು.

ಉದ್ಘಾಟನೆ :
ಆ. 1 ರಂದು ಅರಸಿಕೆರೆಯಲ್ಲಿ ಮತ್ತೆ ಕಲ್ಯಾಣಕ್ಕೆ ಚಾಲನೆ ದೊರೆಯಲಿದೆ. ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಉದ್ಘಾಟಿಸುವರು. ಕೂಡಲ ಸಂಗಮದ ಬಸವ ಧರ್ಮಪೀಠದ ಮಾತೆ ಗಂಗಾದೇವಿ ಉಪನ್ಯಾಸ ನೀಡುವರು. ಪಂಡಿತಾರಾಧ್ಯ ಶ್ರೀಗಳು ನೇತೃತ್ವ ವಹಿಸುವರು. ಆ.29 ರಂದು ತಿಪಟೂರಿನಲ್ಲಿ ಸಮಾರೋಪ ನಡೆಯಲಿದ್ದು, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್ ಸಮಾರೋಪ ನುಡಿ ನುಡಿಯುವರು. ತಿಪಟೂರು ಗುರುಕುಲಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಶ್ರೀಗಳು ಸಾನ್ನಿಧ್ಯ ವಹಿಸುವರು.

ಅರಸಿಕೆರೆ ತಾಲೂಕಿನಲ್ಲಿ
ಆ.1- ಅರಸಿಕೆರೆ, 4 – ರಾಮಪುರ, 5 -ಬಾಣಾವರ , 6- ಹಾರನಹಳ್ಳಿ ,7 -ಕಲ್ಲು ಸಾದರಹಳ್ಳಿ, 8- ಜಾವಗಲ್, 9 -ಕರಗುಂದ, 12- ಮಾಡಾಳು , 14- ದುಮ್ಮೇನಹಳ್ಳಿ, 15 -ಕುರುವಂಕ, 17- ಕಾಮಸಮುದ್ರ, 18- ಚಿಕ್ಕೂರು, 19 – ಗಂಡಸಿ, 21- ಡಿ.ಎಂ.ಕುರ್ಕೆ, 22- ನೇರ‌್ಲಿಗೆ, 23- ಬೆಳಗುಂಬ, 24- ಕೆ.ಶಂಕರನಹಳ್ಳಿ, 25- ಜಾಜೂರು, 28- ಹಿರೇಸಾದರಹಳ್ಳಿ

ತಿಪಟೂರು ತಾಲೂಕಿನಲ್ಲಿ
ಆ- 2- ಸ್ವಾರ್ಥಹಳ್ಳಿ, 11 – ಬಳವನೇರಲು, 13-ಮಸವನಘಟ್ಟ, 16- ಹೊನ್ನವಳ್ಳಿ, 20- ಹಿಂಡಸ್ಕೆರೆ, 26 -ಹಾಲ್ಕುರಿಕೆ, 27- ಬಿದರೆಗುಡಿ, 29- ತಿಪಟೂರು

Share This Article

ಪ್ರತಿದಿನ ಶುಂಠಿ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಶುಂಠಿಯು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಮಸಾಲೆಯಾಗಿದೆ. ಇದನ್ನು ಪ್ರಪಂಚದಾದ್ಯಂತ ಅಡುಗೆ ಮತ್ತು ಗಿಡಮೂಲಿಕೆಗಳ ಪರಿಹಾರಗಳಲ್ಲಿ ಬಳಸಲಾಗುತ್ತದೆ.…

ವ್ಯಾಯಾಮವು ದೇಹಕ್ಕೆ ಮಾತ್ರವಲ್ಲ ಮೆದುಳಿಗೂ ಮುಖ್ಯ; ಹೇಗೆ.. ಇಲ್ಲಿದೆ ಮಾಹಿತಿ | Health Tips

ವಯಸ್ಸು ಹೆಚ್ಚಾದಂತೆ ಸ್ಮರಣಶಕ್ತಿ ದುರ್ಬಲಗೊಳ್ಳುತ್ತದೆ. ಆದರೆ ಇಂದಿನ ಕಾಲದಲ್ಲಿ ಚಿಕ್ಕ ವಯಸ್ಸಿನಲ್ಲೇ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಅಥವಾ…

ಭಾರತದ ಈ 7 ನಗರಗಳಲ್ಲಿ ಮಾಂಸದೂಟ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶ | No Meat City

No Meat Cities: ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಪಾಕಪದ್ಧತಿಗಳ ದೇಶ. ಇಲ್ಲಿನ ಸಂಸ್ಕೃತಿ,…