More

    ಶಂಶುದ್ದೀನ್ ಖಾದ್ರಿ ಉರುಸು ಅದ್ದೂರಿ

    ಸಿಂಧನೂರು: ಹಿಂದು-ಮುಸ್ಲಿಂರ ಭಾವೈಕ್ಯತೆ ಸಂಕೇತವಾದ ಹಜರತ್ ಮೀರಾಂ ಸೈಯದ್ ಶಾಹ ಶಂಶುದ್ದೀನ್ ಖಾದ್ರಿ ಉರುಸು ತಾಲೂಕಿನ ಗೋಮರ್ಸಿ ಗ್ರಾಮದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು.

    ಇದನ್ನೂ ಓದಿ: ಮೆಹೆಬೂಬಸುಭಾನಿ ದರ್ಗಾ ಉರುಸು ಸಂಭ್ರಮ

    ಶುಕ್ರವಾರ ರಾತ್ರಿ ಧ್ವಜ ಕಾರ್ಯಕ್ರಮ ಸೇರಿ ಇನ್ನಿತರ ಧಾರ್ಮಿಕ ಕೈಂಕರ್ಯಗಳು ಜರುಗಿದವು. ಶನಿವಾರ ಬೆಳಗಿನ ಜಾವ 5ಗಂಟೆಯಿಂದ ಸೈಯದ್ ಖಾಸೀಂ ಖಾದ್ರಿ ಉರ್ಪ್ ಸರ್ಕಾರ್ ಪಾಷಾ ಸಾಹೇಬ್ ನೇತೃತ್ವದಲ್ಲಿ ಗಂಧ ಮೆರವಣಿಗೆ ಹಾಗೂ ಪೂಜಾ-ಪ್ರಾರ್ಥನೆಗಳು ನಡೆದವು. ಗೋಮರ್ಸಿ ಸೇರಿ ಸುತ್ತಮುತ್ತಲಿನ ಹಳ್ಳಿಗಳ ಭಕ್ತರು ದರ್ಗಾದಲ್ಲಿ ಸಕ್ಕರೆ ಒದಿಸಿ, ಭಕ್ತಿ ಸಮರ್ಪಿಸಿದರು.

    ಉರುಸಿನ ಅಂಗವಾಗಿ ರಾಜ್ಯ ಮಟ್ಟದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ನಡೆಯಿತು. ಸೈಯದ್ ಮುಸ್ತಫಾ ಖಾದ್ರಿ, ಸೈಯದ್ ಇಸ್ಮಾಯಿಲ್ ಖಾದ್ರಿ ಅತರ್‌ಬಾಬಾ ಜಾಗೀರ್‌ದಾರ್ ಗೋಮರ್ಸಿ, ಸೈಯದ್ ಅಬ್ದುಲ್ ಖಾದರ್ ಖಾದ್ರಿ ತಾಹೇರ್‌ಬಾಬಾ,ಸೈಯದ್ ಮೈನುದ್ದೀನ್ ಖಾದ್ರಿ ತೆಕ್ಕಲಕೋಟೆ, ಸೈಯದ್ ಷಾ ತಾಹೇರ್‌ಖಾದ್ರಿ ಜಂತಕಲ್, ಸೈಯದ್ ಹಾಜಂಖಾದ್ರಿ ಕಂಪ್ಲಿ,

    ಸೈಯದ್ ತುರಾಬ್ ಖಾದ್ರಿ ಕಂಪ್ಲಿ, ಸೈಯದ್ ಮತೀನ್ ಖಾದ್ರಿ ಕಂಪ್ಲಿ, ಖಾದರ್‌ಭಾಷಾ ತಾತನವರು ಗೋಮರ್ಸಿ, ಸೈಯದ್ ಸಜ್ಜಾದ್ ಖಾದ್ರಿ, ಸೈಯದ್ ಬಾಬಾ ಖಾದ್ರಿ, ಮುಖಂಡರಾದ ಮರೇಗೌಡ, ಬಸನಗೌಡ, ದೊಡ್ಡಬಸನಗೌಡ, ಶ್ರೀನಿವಾಸ, ಖಲೀಲ್‌ಪಾಷಾ, ಪೀರ್‌ಸಾಬ್ ಮುಜಾವಾರ್, ಬುಡ್ಡಾಸಾಬ್ ಮುಜಾವಾರ್, ಶಾಮೀದ್, ಶಾಹೀದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts