More

    ಶಕ್ತಿ ಯೋಜನೆ ಎಫೆಕ್ಟ್ , ಈ ಬಸ್‌ನಿಲ್ದಾಣ ಸಂಪೂರ್ಣ ಬಟ್ಟೆಮಯ

    ಬಣಕಲ್: ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಿದ್ದರಿಂದ ಪ್ರವಾಸಿ ತಾಣಗಳಿಗೆ ಬರುವ ಮಹಿಳಾ ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇವರು ಬಸ್‌ನಿಲ್ದಾಣದಲ್ಲಿ ಬಟ್ಟೆಗಳನ್ನು ಒಣಗಲು ಹಾಕಿರುವುದರಿಂದ ಸರ್ಕಾರಿ ಬಸ್ ನಿಲ್ದಾಣ ಸಂಪೂರ್ಣ ವಸಮಯವಾಗಿದೆ.
    ಈಗ ದಸರಾ ರಜೆ ಪ್ರಾರಂಭವಾಗಿರುವುದರಿಂದ ಹೊರನಾಡು, ಧರ್ಮಸ್ಥಳ, ಸುಬ್ರಹ್ಮಣ್ಯ, ಶೃಂಗೇರಿ ಮುಂತಾದ ಯಾತ್ರ ಸ್ಥಳಗಳಿಗೆ ಹೋಗುವ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಯಾತ್ರಾ ಸ್ಥಳಗಳಿಗೆ ಕೊಟ್ಟಿಗೆಹಾರ ಮೂಲಕ ಹಾದು ಹೋಗಬೇಕಾಗಿರುವುದರಿಂದ ಕೊಟ್ಟಿಗೆಹಾರ ಸರ್ಕಾರಿ ಬಸ್‌ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರು ಬಸ್‌ಗಾಗಿ ಕಾಯುವ ಸಮಯದಲ್ಲಿ ತಮ್ಮ ಬಟ್ಟೆಗಳನ್ನು ಬಸ್ ನಿಲ್ದಾಣದ ಕಾಂಪೌಂಡ್, ಕಲ್ಲುಬೆಂಚು, ಕಟ್ಟೆ ಮುಂತಾದ ಕಡೆ ಒಣ ಹಾಕುತ್ತಿದ್ದಾರೆ. ತಾವು ಪ್ರಯಾಣಿಸಬೇಕಾದ ಬಸ್ ಬಸ್ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಂತೆ ಒಣ ಹಾಕಿದ ಬಟ್ಟೆಗಳನ್ನು ತುಂಬಿಕೊಂಡು ಬಸ್ ಹತ್ತುತ್ತಿದ್ದಾರೆ.
    ಕೊಟ್ಟಿಗೆಹಾರದಿಂದ ಹೊರನಾಡಿಗೆ ಪ್ರತಿ ದಿನ ಬೆರಳೆಣಿಕೆಯ ಬಸ್‌ಗಳು ಮಾತ್ರ ಸಂಚರಿಸುವುದರಿಂದ ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೇ ಕಾಯಬೇಕಾಗಿರುವುದರಿಂದ ಮಹಿಳಾ ಪ್ರಯಾಣಿಕರು ಕಾಯುವ ಸಮಯದಲ್ಲಿ ತಮ್ಮ ಬಟ್ಟೆಗಳನ್ನು ತೊಳೆದು ಒಣ ಹಾಕುತ್ತಿದ್ದಾರೆ. ಸರ್ಕಾರಿ ಬಸ್‌ನಿಲ್ದಾಣದ ಸಂಚಾರ ನಿಯಂತ್ರಕರು ಬಟ್ಟೆ ಒಣ ಹಾಕದಂತೆ ತಿಳಿ ಹೇಳಿದರೂ ಬಟ್ಟೆ ಒಣ ಹಾಕುವುದು ಮುಂದುವರಿದಿದ್ದು, ನಿಲ್ದಾಣಾಧಿಕಾರಿಗಳಿಗೆ ಮಹಿಳಾ ಪ್ರಯಾಣಿಕರ ಈ ವರ್ತನೆ ತಲೆನೋವಾಗಿ ಪರಿಣಮಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts