More

    ನಿದ್ರಾಹೀನತೆಯನ್ನು ತಡೆಗಟ್ಟಲು ಶಕ್ತಿ ಮುದ್ರೆ

    ಶಕ್ತಿ ಮುದ್ರೆ ಹಠ ಯೋಗದ ಒಂದು ರೂಪವಾಗಿದೆ. ಶಕ್ತಿ ಮುದ್ರಾ ಅಥವಾ ಶಕ್ತಿ ಚಲನ ಮುದ್ರೆ ಎಂದು ಕರೆಯಲ್ಪಡುವ ಈ ಅಭ್ಯಾಸಗಳು ಆಂತರಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ತನ್ನ ಶಕ್ತಿ ಮತ್ತು ಉಗ್ರತೆಗೆ ಹೆಸರುವಾಸಿಯಾದ ದುರ್ಗಾದೇವಿಯ ಶಕ್ತಿಯನ್ನು ಈ ಮುದ್ರೆಯು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂದು ಹೇಳಲಾಗುತ್ತದೆ.

    Yogakshema vvaniನಿದ್ರಾ ಹೀನತೆಯಿಂದ ಬಳಲುತ್ತಿರುವವರಿಗೆ ಈ ಮುದ್ರೆ ಸಹಕಾರಿಯಾಗಿದೆ. ದೈಹಿಕ, ಮಾನಸಿಕ ಸಮಸ್ಯೆಗಳ ನಿಯಂತ್ರಣವಾಗುತ್ತದೆ. ಇಲ್ಲಿ ಶಕ್ತಿ ಎಂದರೆ ವಿದ್ಯುತ್ ಯಾ ಸಬಲೀಕರಣವಾಗುತ್ತದೆ. ಈ ಶಕ್ತಿ ಮುದ್ರೆ ನಿದ್ರೆಯ ಪ್ರಚೋದಕ ಮುದ್ರೆಯಾಗಿದೆ. ಈ ಮುದ್ರೆಯನ್ನು ಮಾಡಲು ನಿರ್ದಿಷ್ಟ ಸಮಯವಿಲ್ಲ. ನೀವು ಯಾವುದೇ ಸಮಯದಲ್ಲಿ ಮತ್ತು ಎಲ್ಲಿಯಾದರೂ ಮಾಡಬಹುದು. ಉತ್ತಮ ನಿದ್ರೆಗಾಗಿ, ಮಲಗುವ ಮುನ್ನ ನೀವು ಇದನ್ನು ಮಾಡಬಹುದು.

    ವಿಧಾನ : ಎರಡು ಕೈಗಳ ಕಿರು ಬೆರಳು ಮತ್ತು ಉಂಗುರ ಬೆರಳುಗಳ ತುದಿಯನ್ನು ಜೋಡಿಸಬೇಕು. ಹೆಬ್ಬೆರಳನ್ನು ಕೈ ಮಧ್ಯಕ್ಕೆ ಮಡಿಚಿ, ಉಳಿದ ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹೆಬ್ಬೆರಳ ಮೇಲೆ ಒತ್ತಿ ಇಡಿ. (ಚಿತ್ರದಲ್ಲಿರುವಂತೆ ಈ ಮುದ್ರೆಯನ್ನು ಗರಿಷ್ಠ 10-12 ನಿಮಿಷಗಳ ಕಾಲ ಒಂದೇ ವಿಸ್ತರಣೆಯಲ್ಲಿ ನಿರ್ವಹಿಸಬೇಕು.) ಶಕ್ತಿ ಮುದ್ರೆಯಲ್ಲಿ ಇಷ್ಟ ದೇವರ ಮಂತ್ರ 108 ಬಾರಿ ಪಠಿಸಿ.

    ಪ್ರಯೋಜನಗಳು: ನಿದ್ರಾಹೀನತೆಯನ್ನು ತಡೆಯುತ್ತದೆ. ನಿತ್ಯ ಅಭ್ಯಾಸದಿಂದ ನಿದ್ರೆಯು ಸುಧಾರಣೆಗೊಳ್ಳುತ್ತದೆ. ಕರುಳಿನಲ್ಲಿ ಉಂಟಾಗುವ ಸೆಳೆತವನ್ನು ಈ ಮುದ್ರೆಯ ಮೂಲಕ ನಿವಾರಿಸಬಹುದು. ಸ್ತ್ರೀಯರ ಮುಟ್ಟು ದೋಷ ನಿವಾರಣೆಗೆ ಸಹಕಾರಿ ಹಾಗೂ ಶಾಂತ ನಿದ್ರೆಗೆ ಈ ಮುದ್ರೆ ಉಪಕಾರಿಯಾಗಿದೆ. ಈ ಮುದ್ರೆಯಲ್ಲಿ ಉದರದ ಆರೋಗ್ಯವನ್ನು ಕಾಪಾಡಬಹುದು (ಪೆಲ್ವಿಕ್ ಭಾಗ ರಿಲ್ಯಾಕ್ಸ್ ಆಗುತ್ತದೆ). ಈ ಮುದ್ರೆಯಿಂದ ಸ್ತ್ರೀಯರ ಮಾಸಿಕ ದೋಷ ನಿವಾರಣೆಯಾಗಲು ಸಹಕಾರಿಯಾಗುತ್ತದೆ. ಈ ಮುದ್ರೆಯನ್ನು ಹೆಚ್ಚು ಹೊತ್ತು ಅಭ್ಯಾಸ ಮಾಡಿದರೆ ಉದಾಸೀನ ಆಲಸ್ಯ ಬರುತ್ತದೆ. ತುಂಬಾ ಹೊತ್ತು ಈ ಮುದ್ರೆ ಅಭ್ಯಾಸ ಮಾಡಿದರೆ ತಾಮಸಿಕ ಗುಣಗಳ ಪ್ರವೃತ್ತಿ ಹೆಚ್ಚಾಗಬಹುದು. ಕೆಲವೊಮ್ಮೆ ಮಲಗಿದಾಗ ರಾತ್ರಿ ತಕ್ಷಣ ನಿದ್ರೆ ಬರುವುದಿಲ್ಲ. ಏಕೆಂದರೆ ಆ ದಿನ ಮನಸ್ಸು ಮತ್ತು ಬುದ್ದಿಗೆ ಹೆಚ್ಚು ಕೆಲಸ ಕೊಡಲಾಗಿದೆ. ಯೋಚನೆಗಳು ಚಿಂತೆಗಳು ಬರುತ್ತಾ ಇರುತ್ತವೆ. ದೇಹ ದಣಿದಿರುವುದಿಲ್ಲ. ಆದ್ದರಿಂದ ದೈಹಿಕ ವ್ಯಾಯಾಮ, ಯೋಗಾಸನಗಳು ಅಥವಾ ಸಾಧ್ಯವಾದರೆ ಸೂರ್ಯ ನಮಸ್ಕಾರ ಮಾಡಿ. ದೇಹ ದಣಿದಾಗ ಸಹಜವಾಗಿ ರಾತ್ರಿ ನಿದ್ದೆ ಬರುತ್ತದೆ. ಮನಸ್ಸಿನ ಶಾಂತ ಸ್ಥಿತಿಗೆ ಧ್ಯಾನ ಮುದ್ರೆಗಳು ಇತ್ಯಾದಿ ಸಹಕಾರಿ.

    ಈ ಮುದ್ರೆಯೊಂದಿಗೆ ಕೆಲವು ನಿಯಮಗಳನ್ನು ಪಾಲಿಸಿ

    * ಮಲಗುವ ಕೋಣೆಯು ಸ್ವಚ್ಛವಾದ ಗಾಳಿ ಓಡಾಡುವಂತೆ ಇರಬೇಕು.

    * ಮನಸ್ಸಿಗೆ ಒಳ್ಳೆಯ ಆಹಾರ ನೀಡಬೇಕು. ಮನಸ್ಸಲ್ಲಿ ಎಂದೂ ಕೆಟ್ಟದ್ದನ್ನು ಬಯಸಬಾರದು.

    * ಯೋಗದ ಯಮ ನಿಯಮಗಳನ್ನು ಜೀವನದಲ್ಲಿ ಪಾಲಿಸಬೇಕು.

    * ದಿನ ಪೂರ್ತಿ ಮನಸ್ಸಿಗೆ, ಬುದ್ದಿಗೆ ಕೆಲಸ ಕೊಟ್ಟಾಗ ಹಾಗೂ ದೈಹಿಕ ಚಟುವಟಿಕೆ ಮಾಡದೇ ಇದ್ದಾಗ ರಾತ್ರಿ ನಿದ್ರೆ ಬರುವುದಿಲ್ಲ.

    * ಈ ಮುದ್ರೆಯನ್ನು ಮಾಡುವಾಗ ನಿಮ್ಮ ಕೈಯಲ್ಲಿರುವ ಬಳೆ, ಗಡಿಯಾರ ಅಥವಾ ಇತರ ಆಭರಣಗಳನ್ನು ತೆಗೆದು ಮಾಡಿದರೆ ಉತ್ತಮ. ಸಾಧ್ಯವಾದಷ್ಟು ನಿಮ್ಮ ದೇಹವನ್ನು ಹಗುರವಾಗಿರಿಸಿಕೊಳ್ಳಿ.

    * ಮೊಬೈಲ್, ಟಿ.ವಿ. ಅಥವಾ ರೇಡಿಯೋಗಳನ್ನು ಆಫ್ ಮಾಡಿ , ಈ ಮುದ್ರೆಯನ್ನು ಪ್ರಶಾಂತವಾದ ಸ್ಥಳದಲ್ಲಿ ಅಭ್ಯಾಸ ಮಾಡಿ.

    ಮುನ್ನೆಚ್ಚರಿಕೆಗಳು
    ನಿಮ್ಮ ಬೆರಳುಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಡಿ, ಅವುಗಳ ಮೇಲೆ ಮೃದುವಾದ ಒತ್ತಡವನ್ನು ಇರಿಸಿ. ಇಲ್ಲವಾದರೆ ನೀವು ಈ ಭಂಗಿಯಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ.

    (ಪ್ರತಿಕ್ರಿಯಿಸಿ: [email protected])

    15 ಸಾವಿರ ಕೊಟ್ರೆ 1 ಗಂಟೆಗೆ 55 ಸಾವಿರ ರೂ.!? ರೀಲ್ಸ್​ ಸ್ಟಾರ್​ ಅಮಲಾಳ ಹಗರಣ ಬಯಲು, ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts