More

    ಭಾರತ, ಮೋದಿ ವಿರುದ್ಧ ಅಫ್ರಿದಿ ಎಷ್ಟೇ ವಿಷ ಕಾರಿದ್ರೂ ಕಾಶ್ಮೀರ ಪಡೆಯಲಾಗದು: ಗೌತಮ್​ ಗಂಭೀರ್​​

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಶ್ಮೀರ ಕುರಿತು ಮಾತನಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್​ ಅಫ್ರಿದಿಗೆ ಟೀಮ್​ ಇಂಡಿಯಾ ಮಾಜಿ ಆಟಗಾರ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭೀರ್​ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅಫ್ರಿದಿ ಓರ್ವ ಜೋಕರ್​, ತನ್ನ ಹೇಳಿಕೆಗಳಿಂದ ಪಾಕ್​ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ಜರಿದಿದ್ದಾರೆ.

    ಇದನ್ನೂ ಓದಿ: ಪತ್ನಿ, ಮಗ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಶವವಾಗಿ ಬಿದ್ದಿದ್ದ ಡಿಎಸ್​ಪಿ: ಅಷ್ಟಕ್ಕೂ ನಡೆದಿದ್ದಾರೂ ಏನು?

    ಟ್ವೀಟ್​ ಮೂಲಕ ಕಿಡಿಕಾರಿರುವ ಗಂಭೀರ್​, 20 ಕೋಟಿ ಜನರೊಂದಿಗೆ ಪಾಕ್​ 7 ಲಕ್ಷ ಸೇನಾ ಬಲವನ್ನು ಹೊಂದಿದೆ ಎಂದು 16 ವರ್ಷದ ಹುಡುಗನ ಸಹ ಹೇಳುತ್ತಾನೆ. ಕಳೆದ 20 ವರ್ಷಗಳಿಂದ ಕಾಶ್ಮೀರವನ್ನು ಪಾಕ್​ ಭಿಕ್ಷೆ ಬೇಡುತ್ತಲೇ ಬಂದಿದೆ. ಅಫ್ರಿದಿ, ಇಮ್ರಾನ್​ ಖಾನ್​​ ಮತ್ತು ಬಾಜ್ವಾರಂತಹ ಜೋಕರ್​ಗಳು ಭಾರತ ಮತ್ತು ಪ್ರಧಾನಿ ಮೋದಿ ಅವರ ವಿರುದ್ಧ ವಿಷಕಾರುತ್ತಾ ಪಾಕ್​ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಆದರೆ, ಎಂದಿಗೂ ಕಾಶ್ಮೀರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಬಾಂಗ್ಲಾದೇಶ ನೆನಪಿದೆಯೇ? ಎಂದು ಟೀಕಾಸ್ತ್ರ ಪಯೋಗಿಸಿದ್ದಾರೆ.

    ಇದನ್ನೂ ಓದಿ: ಸೌದೆ ತರಲು ಹೋಗಿದ್ದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ವಿಡಿಯೋ ವೈರಲ್​ ಮಾಡಿದ ಕಾಮುಕರು

    ಇದಕ್ಕೂ ಮುನ್ನ ಅಫ್ರಿದಿ ಅವರು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯರಿಗೆ ನೆರವು ನೀಡಿ, ವಿಶ್ವವು ಜೀವಕಾರದ ರೋಗಕ್ಕೆ ಸಿಲುಕಿದೆ. ಆದರೆ, ಮೋದಿ ಹೃದಯ ಮತ್ತು ಮನಸ್ಸಿನಲ್ಲಿ ಅದಕ್ಕಿಂತಲೂ ಹೆಚ್ಚಿನ ಅಪಾಯಕಾರಿ ಏನಿದೆಯೋ ಎಂದು ಉದ್ಧಟತನದ ಹೇಳಿಕೆ ನೀಡಿದ್ದರು.

    ಇನ್ನು ಅಫ್ರಿದಿ ಹಾಗೂ ಗಂಭೀರ್​ ನಡುವಿನ ಕಿತ್ತಾಟ ಇದೇ ಮೊದಲೇನಲ್ಲ. ಕ್ರಿಕೆಟ್​ ಮೈದಾನದಲ್ಲೂ ಕಿತ್ತಾಡಿಕೊಂಡಿರುವ ಉಭಯ ಆಟಗಾರರು ಆಗಾಗ ಜಾಲತಾಣದಲ್ಲಿ ಒಬ್ಬರಿಗೊಬ್ಬರನ್ನು ಕಾಲೆಳೆಯುವ ಮೂಲಕ ಕಾದಾಟಕ್ಕೆ ಇಳಿಯುತ್ತಾರೆ. ಅಫ್ರಿದಿ ತನ್ನ ಆತ್ಮಚರಿತ್ರೆಯಲ್ಲಿ ಗಂಭೀರ್​ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದಕ್ಕೆ ಗಂಭೀರ್​ ಕೂಡ ಈ ಹಿಂದೆಯೇ ಟ್ವೀಟ್​ ಮೂಲಕವೇ ಉತ್ತರ ನೀಡಿದ್ದರು. (ಏಜೆನ್ಸೀಸ್​)

    ಇದನ್ನೂ ಓದಿ: ಗಂಡಿನ ವೀರ್ಯದಲ್ಲಿ ಕರೊನಾ: ಒಂದು ತಿಂಗಳು ಸೆಕ್ಸ್​ ಮಾಡ್ದಿದ್ರೆ ಒಳಿತು, ಇಲ್ಲದಿದ್ರೆ…!

    ಲಾಕ್​ಡೌನ್​ ಕಾಲ ಮುಗೀತು, ಕರೊನಾ ಕಟ್ಟಿ ಹಾಕುತ್ತಾ ಕಂಟೇನ್​ಮೆಂಟ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts