More

    5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?

    ಇಸ್ಲಾಮಾಬಾದ್​: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಪಾಕಿಸ್ತಾನದ ನೂತನ ಪ್ರಧಾನಿ ಆಗಲಿರುವ ಶಹಬಾಜ್​ ಷರೀಫ್​ ಮದುವೆಯ ವಿಷಯದಲ್ಲಿ ಇಮ್ರಾನ್​ ಖಾನ್​ಗಿಂತಲೂ ಮುಂದಿದ್ದು, ಅವರ ಕುರಿತ ಮತ್ತಷ್ಟು ಆಸಕ್ತಿಕರ ಅಂಶಗಳು ಈಗ ಮತ್ತೆ ಮುನ್ನೆಲೆಗೆ ಬಂದು ಹರಿದಾಡುತ್ತಿವೆ.

    ಪಾಕ್​ನ ಮಾಜಿ ಪ್ರಧಾನಿ ನವಾಜ್​ ಷರೀಫ್​ ಸಹೋದರ ಆಗಿರುವ ಶಹಬಾಜ್ ಷರೀಫ್​, ಒಟ್ಟು ಐದು ಮದುವೆಯಾಗಿದ್ದು, ಆ ಪೈಕಿ ಮೂವರಿಗೆ ವಿಚ್ಛೇದನ ನೀಡಿದ್ದು, ಸದ್ಯ ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ. ಮದುವೆ ಮಾತ್ರವಲ್ಲದೆ ಇವರ ಪ್ರೀತಿಯ ವಿಚಾರವೂ ಕೂಡ ಬಹಳಷ್ಟು ಆಸಕ್ತಿ ಮೂಡಿಸಿದ್ದು, ಸುದ್ದಿಯಲ್ಲಿದೆ.

    ಇಮ್ರಾನ್​ ಖಾನ್ ಮೂರು ಮದುವೆಯಾಗಿದ್ದರೆ, ಶಹಬಾಜ್​ ಐದು ಮದುವೆಯಾಗಿದ್ದಾರೆ. 1973ರಲ್ಲಿ ಮೊದಲಿಗೆ ನುಸ್ರತ್​ ಶಹಬಾಜ್​ರನ್ನು ಮದುವೆಯಾಗಿ 93ರ ವರೆಗೆ ಸಂಸಾರ ನಡೆಸಿದ ಶಹಬಾಜ್​, ಬಳಿಕ ಆಲಿಯಾ ಹನಿ ಎಂಬಾಕೆಯನ್ನು ಮದುವೆ ಆಗುತ್ತಾರೆ. ಅದರಲ್ಲೂ ಈ ಮದುವೆಗೆ ಸೋದರ ನವಾಜ್​ ಷರೀಫ್​ರ ಭಾರಿ ವಿರೋಧವಿದ್ದರೂ ಶಹಬಾಜ್ ಲೆಕ್ಕಿಸದೆ ಮದುವೆಯಾಗಿದ್ದರು. ನಂತರ ಡೈವೋರ್ಸ್ ಕೊಡುವಂತೆ ಒತ್ತಾಯಿಸಿದ್ದರೂ ಕೊಟ್ಟಿರಲಿಲ್ಲ. ಅದಾಗ್ಯೂ ಈ ಮದುವೆ ಬಾಳಿಕೆ ಬಂದಿದ್ದು ಒಂದೇ ವರ್ಷ.

    ಇದನ್ನೂ ಓದಿ: ಕೋಲಾರ ಏನೂ ಪಾಕಿಸ್ತಾನದಲ್ಲಿ ಇಲ್ಲ..; ಎಚ್ಚರಿಕೆ ನೀಡಿದ ಪ್ರಮೋದ್​ ಮುತಾಲಿಕ್​

    ನಂತರ ನಿಲೋಫರ್ ಖೋಸಾ ಎಂಬಾಕೆಯನ್ನು ಮದುವೆಯಾದರು. ಅದಾದ ಬಳಿಕ ರಹಸ್ಯವಾಗಿ 2003ರಲ್ಲಿ ತೆಹಮಾನಿಯಾ ದುರಾನಿ ಮತ್ತು 2012ರಲ್ಲಿ ಕಲ್ಸುಮ್​ ಹಯೀ ಎಂಬವರನ್ನು ಮದುವೆಯಾದರು. ಸದ್ಯ ಇವರು ನುಸ್ರತ್ ಮತ್ತು ತೆಹಮಾನಿಯಾ ದುರಾನಿ ಅವರೊಂದಿಗೆ ಸಂಸಾರ ನಡೆಸುತ್ತಿದ್ದಾರೆ. ಉಳಿದ ಮೂವರಿಗೆ ವಿಚ್ಛೇದನ ಕೊಟ್ಟಿರುತ್ತಾರೆ.

    ಪತ್ನಿಗೆಂದೇ ಕಟ್ಟಿಸಿದ್ದರು ಹನಿ ಬ್ರಿಡ್ಜ್​

    ಶಹಬಾಜ್​ ಷರೀಫ್ ತನ್ನ ಪತ್ನಿ ಆಲಿಯಾ ಹನಿಗೆಂದೇ ಪಂಜಾಬ್​ನಲ್ಲಿ ಫ್ಲೈಓವರ್ ಒಂದನ್ನು ನಿರ್ಮಿಸಿದ್ದು, ಅದು ಹನಿ ಬ್ರಿಡ್ಜ್​ ಎಂದೇ ಹೆಸರಾಗಿದೆ. ಅಷ್ಟಕ್ಕೂ ಇವರು ಈ ಸೇತುವೆ ಕಟ್ಟಿಸಿದ್ದೇಕೆ ಗೊತ್ತೇ? ಪತ್ನಿ ಮನೆಗೆ ಬರುವುದು ತಡ ಆಗಬಾರದು ಅಂತ.
    ಇನ್ನು 8 ವರ್ಷಗಳಿಂದ ಪ್ರೀತಿಸುತ್ತಿದ್ದ ತೆಹಮಾನಿಯಾಳನ್ನು ಕದ್ದುಮುಚ್ಚಿ ಮದುವೆಯಾಗಿದ್ದ ಶಹಬಾಜ್​, ಅದನ್ನು ಕುಟುಂಬ ಸದಸ್ಯರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದರು.

    ಇದಲ್ಲದೆಯೂ ಶಹಬಾಜ್ ಬಗ್ಗೆ ಮತ್ತಷ್ಟು ಆಸಕ್ತಿಕರ ಅಂಶಗಳಿವೆ. ಶಹಬಾಜ್​ ಕ್ಯಾನ್ಸರ್ ರೋಗಿಯಾಗಿದ್ದು, ಬಳಿಕ ಅದರಿಂದ ಗುಣವಾಗಿ ಚೇತರಿಸಿಕೊಂಡಿದ್ದರು. ಹಾಡುವುದನ್ನು ಇಷ್ಟಪಡುವ ಶಹಬಾಜ್​, ದಿನವೂ ಈಜುತ್ತಾರೆ ಮತ್ತು ತಿನ್ನುವುದರಲ್ಲೂ ಫಾಸ್ಟ್!​

    ಇದನ್ನೂ ಓದಿ: ಸ್ವಾಮೀಜಿ ಕಾರು ಅಪಘಾತ, ಚಾಲಕ ಸ್ಥಳದಲ್ಲೇ ಸಾವು; ಶ್ರೀಗಳು ಆಸ್ಪತ್ರೆಗೆ ದಾಖಲು..

    ಇನ್ನು ಇತ್ತೇಫಾಕ್ ಗ್ರೂಪ್​ ಹೆಸರಿನಲ್ಲಿ ಉದ್ಯಮ ಹೊಂದಿರುವ ಶಹಬಾಜ್​ ಶತಕೋಟಿ ಲೆಕ್ಕದ ವಹಿವಾಟು ಹೊಂದಿದ್ದಾರೆ. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯೂ ಆಗಿದ್ದ ಶಹಬಾಜ್​, ಪ್ರಧಾನಿ ಆಗುವಂತೆ ಮುಷ್ರಫ್​ರಿಂದ ಕರೆ ಬಂದರೂ ಸಹೋದರನಿಗಾಗಿ ಅದನ್ನು ತ್ಯಾಗ ಮಾಡಿದ್ದರು. ಶಹಬಾಜ್ ಐವರು ಸಹೋದರರನ್ನು ಹೊಂದಿದ್ದಾರೆ.

    ‘ಅಮೆರಿಕ ಸಾಕು, ಊರಲ್ಲಿ ಸೆಟ್ಲ್​ ಆಗೋಣ..’ ಎಂದು ಬಂದ ಮಹಿಳೆಗೆ ಮೋಸ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts