More

    ಭಾರಿ ಮಳೆಗೆ ಗಿರಿ ಜಿಲ್ಲೆ ತತ್ತರ

    ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಭರ್ಜರಿ ಎಂಟ್ರಿ ಕೊಟ್ಟಿದ್ದು, ಭಾನುವಾರ ತಡರಾತ್ರಿ ಧಾರಾಕಾರ ಸುರಿದ ಹಿನ್ನೆಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಮೂರು ದಿನಗಳಿಂದ ಜಿಲ್ಲೆಯಲ್ಲಿ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದು, ಭಾನುವಾರ ರಾತ್ರಿ ಶಹಾಪುರದಲ್ಲಿ ಸುರಿದ ಮಳೆ ರಾಜ್ಯದಲ್ಲೇ ದಾಖಲೆ ನಿಮರ್ಿಸಿದೆ. ಶಹಾಪುರ ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿ153 ಮಿ.ಮೀ ಮಳೆಯಾಗಿದೆ.

    ಯಾದಗಿರಿ ನಗರದ ಪ್ರಮುಖ ಬಡಾವಣೆಗಳಲ್ಲಿ ನೀರು ಹೊಕ್ಕಿದ್ದರಿಂದ ಜನತೆ ತೊಂದರೆ ಅನುಭವಿಸಿದರು. ಸಕರ್ಾರಿ ಪದವಿ ಕಾಲೇಜು ಆವರಣದಲ್ಲಿ ನೀರು ಹೊಕ್ಕರೆ, ತರಕಾರಿ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡಿತು. ಸತತ ನಾಲ್ಕು ಗಂಟೆ ಭರ್ಜರಿ ಮಳೆಯಾಗಿದು, ಗ್ರಾಮೀಣ ಭಾಗದ ರೈತರ ಜಮೀನಿನಲ್ಲಿ ನೀರು ನಿಂತಿದ್ದರಿಂದ ಆತಂಕ ಪಡುವಂತಾಗಿದೆ.

    ಮುಂಗಾರು ಹಂಗಾಮಿನ ಹಿನ್ನೆಲೆಯಲ್ಲಿ ರೈತರು ಈಗಾಗಲೇ ಹೆಸರು ಬಿತ್ತನೆ ಮಾಡಿದ್ದಾರೆ. ಸಸಿ ಮೊಳಕೆ ಹೊಡೆಯುವ ಹಂತಕ್ಕೆ ಬಂದರೆ, ಒಂದೆರಡು ವಾರದ ಹಿಂದಷ್ಟೆ ಹತ್ತಿ ಬೀಜ ಊರಿದ್ದಾರೆ. ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಳಗೊಂಡು ಎಲ್ಲಿ ಬೆಳೆ ಹಾಳಾಗುತ್ತದೋ ಎಂಬ ಆತಂಕ ಅನ್ನದಾತರನ್ನು ಕಾಡುತ್ತಿದೆ.

    ಇನ್ನು ಮಳೆಗೆ ನಗರದ ಮುಖ್ಯ ರಸ್ತೆಯಲ್ಲಿ ಹೆಚ್ಚಿನ ನೀರು ಹರಿದಿದ್ದರಿಂದ ಕೆಲವರ ಮನೆಯೊಳಗೆ ಚರಂಡಿ ನೀರು ಹೊಕ್ಕಿದೆ. ಹಳೇ ಪ್ರವಾಸಿ ಮಂದಿರದಲ್ಲಿ ನೀರು ನಿಂತು ಕೆರೆಯಾಗಿ ಮಾರ್ಪಟ್ಟಿತು. ಹೊಸ ಬಡಾವಣೆಯಲ್ಲಿ ಸಿಸಿ ರಸ್ತೆ ಇಲ್ಲದೆ ತಾತ್ಕಾಲಿಕ ರಸ್ತೆಗಳು ಕೆಸರು ಕೊಚ್ಚೆಯಾದವು. ಮಣ್ಣಿನಲ್ಲಿ ಬೈಕ್ ಸಿಕ್ಕಿಬಿದ್ದು ಸವಾರರು ಹೈರಾಣ ಆಗುವಂತಾಯಿತು.

    ಚರಂಡಿಯಲ್ಲಿನ ಕಸಕಡ್ಡಿ ರಸ್ತೆಗೆ ಬಂದು ದುನರ್ಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ. ಕನಕ ವೃತ್ತದ ಮುಖ್ಯ ರಸ್ತೆಯಲ್ಲಿ ಚರಂಡಿ ಒಳಗಿನಿಂದ ಸತ್ತ ಪ್ರಾಣಿಗಳ ದೇಹ ತೇಲಿ ಬಂದು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿತ್ತು.

    ಜನತೆಗೆ ಒಂದೆಡೆ ಕರೊನಾ ಭೀತಿ ಕಾಡುತ್ತಿದ್ದರೆ, ಮತ್ತೊಂದೆಡೆ ಭೀಕರ ಮಳೆಯಿಂದ ನಿತ್ಯ ಜೀವನಕ್ಕೂ ತೊಂದರೆ ಅನುಭವಿಸುವಂತಾಗಿದೆ. ಭಾನುವಾರದ ಮಳೆಯಂತೂ ಕಳೆದ ವರ್ಷ ಎದುರಾಗಿದ್ದ ನೆರೆ ಸನ್ನಿವೇಶ ನೆನಪಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts