More

    ಕಳುವಾಗಿದೆಯಾ ಶಾರುಖ್​​ ಖಾನ್​ ಮನೆಯ 25 ಲಕ್ಷ ರೂ.ಬೆಲೆಯ ನೇಮ್​​ಪ್ಲೇಟ್​? ಗೊಂದಲಕ್ಕೊಳಗಾದ ಅಭಿಮಾನಿಗಳಿಂದ ಫೋಟೋ ವೈರಲ್​​

    ಮುಂಬೈ: ಬಾಲಿವುಡ್​ ಬಾದ್​​ ಶಾ ಎಂದೇ ಕರೆಸಿಕೊಳ್ಳುವ ಶಾರುಖ್​ ಖಾನ್​​ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಅವರ ಮನೆಯ ಬಳಿ ಪ್ರತಿನಿತ್ಯ ಬರುತ್ತಿರುತ್ತಾರೆ.

    ಶಾರುಖ್​ನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದ ಅಭಿಮಾನಿಗಳು ಅವರ ಮನೆಯ ಮೇಲೂ ಒಂದು ಕಣ್ಣಾಯಿಸುವುದು ಸಾಮಾನ್ಯ. ದೊಡ್ಡ ಸ್ಟಾರ್​ ನಟನ ಮನೆ ಎಂದರೆ ಸಾಮಾನ್ಯವೇ… ಶಾರುಖ್​​ನಷ್ಟೇ ಅವರ ಮನೆಯೂ ಅಷ್ಟೇ ಜನಪ್ರಿಯತೆಯನ್ನು ಪಡೆದಿದೆ.

    ಹೀಗೆ ಶಾರೂಕ್​​ ಮನೆ ಮುಂದೆ ಹೋದ ಕೆಲ ಅಭಿಮಾನಿಗಳಿಗೆ ಶಾಕ್​ ಕಾದಿತ್ತು. ಅದೇನೆಂದರೆ ಮನೆಯ ನೇಮ್​​ಪ್ಲೇಟ್​ ಇಲ್ಲದಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ. ಇದನ್ನು ಕದ್ದಿದ್ದಾರೋ.. ಅಥವಾ ಬೇಕೆಂತಲೇ ತೆಗೆದಿದ್ದಾರೆಯೇ ಎಂಬ ವಾದ-ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

    ಶಾರುಖ್​​ ಮನೆಯ ಹೆಸರು ಮನ್ನತ್​​, ಇದರ ನೇಮ್​​ಪ್ಲೇಟ್​​ ಬೆಲೆ ಕೇಳಿದರೆ ಮಧ್ಯಮ ವರ್ಗದವರು ಒಂದು ಮನೆಯನ್ನೇ ಕಟ್ಟಿಕೊಳ್ಳಬಹುದು. ಇದರ ಬೆಲೆ ಬರೋಬ್ಬರಿ 25 ಲಕ್ಷವಂತೆ. ಇಷ್ಟು ಭಾರೀ ಮೊತ್ತದ ನೇಮ್​​ಪ್ಲೇಟ್​​ ಅನ್ನು ಇತ್ತೀಚೆಗೆ ತೆಗೆಯಲಾಗಿದೆ. ಯಾವ ಕಾರಣಕ್ಕೆ ತೆಗೆಯಲಾಗಿದೆ ಎಂಬುದರ ಬಗ್ಗೆ ಶಾರುಖ್​ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts