More

    ಬಾಲಿವುಡ್​​ನಲ್ಲಿ ಮತ್ತೆ ಕರೊನಾ ಸ್ಫೋಟ: ಶಾರುಖ್​​,ಕತ್ರಿನಾಗೆ ಪಾಸಿಟಿವ್!

    ಮುಂಬೈ: ಬಾಲಿವುಡ್​ ತಾರೆಯರಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಕ್ಷಯ್​ ಕುಮಾರ್​, ಕಾರ್ತಿಕ್​ ಆರ್ಯನ್​ ಬಳಿಕ ಇನ್ನಿಬ್ಬರು ಖ್ಯಾತ ತಾರೆಯರೂ ಸೇರಿಕೊಂಡಿದ್ದಾರೆ.

    ಕರೊನಾ ದೃಢವಾಗಿರುವುದರಿಂದಲೇ ಐಫಾ ಅವಾರ್ಡ್​ನಲ್ಲಿ ಕತ್ರಿನಾ ಭಾಗವಹಿಸಿಲ್ಲ. ತನ್ನ ಪತಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತರೂ ಕತ್ರಿನಾ ಕಾರ್ಯಕ್ರಮಕ್ಕೆ ಹಾಜರಾಗದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಇದೀಗ ಕತ್ರಿನಾಗೂ ಕರೊನಾ ಸೋಂಕು ತಗುಲಿರುವುದರಿಂದ ಪಾಲ್ಗೊಂಡಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.

    ಮೇ 25 ರಂದು ನಡೆದ ನಿರ್ಮಾಪಕ ಕರಣ್​ ಜೋಹರ್​ ಅವರ 50ನೇ ಹುಟ್ಟುಹಬ್ಬ ಪಾರ್ಟಿಯಲ್ಲೇ ಕರೊನಾ ತಗುಲಿರಬಹುದು ಎಂದು ಹೇಳಲಾಗಿದೆ. ಇನ್ನು ಶಾರುಖ್​ಗೆ ಕರೊನಾ ತಗುಲಿರುವ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಟ್ವೀಟ್​ ಮೂಲಕ ತಿಳಿಸಿದ್ದು, ಈ ರಾಜ್ಯದ ರಾಯಭಾರಿಯಾಗಿರುವ ಶಾರುಖ್​ ಅವರು ಶೀಘ್ರ ಗುಣಮುಖರಾಗಲೆಂದು ಅವರು ಪ್ರಾರ್ಥಿಸಿದ್ದಾರೆ.

    ಸದ್ಯ ಇಬ್ಬರು ತಾರೆಯರು ಅವರವರ ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್​ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಕರಣ್ ಜೋಹರ್​ ಬರ್ತ್​ ಡೇ ಪಾರ್ಟಿಯಲ್ಲಿ ಪಾಲ್ಗೊಂಡ 50 ಬಾಲಿವುಡ್​ ಮಂದಿಗೆ ತಗುಲಿತಾ ಕರೊನಾ?: ಇಲ್ಲಿದೆ ಉತ್ತರ

    20 ಲಕ್ಷ ರೂ. ಬೆಲೆಯ ಗೌನ್​ ಧರಿಸಿ ಮಿಂಚಿದ ಐರಾವತ ಬೆಡಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts