More

    ಎಸ್‌ಜಿಎಸ್‌ಎಸ್ ಎಚ್.ಆರ್ ಕನ್ಸಲ್ಟನ್ಸಿ ಪ್ರಕರಣ; ಸಿಐಡಿ ತನಿಖೆಗೆ ವಹಿಸಲು ಆಗ್ರಹ

    ಧಾರವಾಡ: ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರಿ ಕೊಡಿಸುವುದಾಗಿ ನಂಬಿಸಿ, ಸಾವಿರಾರು ಯುವಕರಿಂದ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮÁಡಿರುವ ನಗರದ ಎಸ್‌ಜಿಎಸ್‌ಎಸ್ ಎಚ್.ಆರ್ ಕನ್ಸಲ್ಟನ್ಸಿಯ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ಸಿಐಡಿ ತನಿಖೆಗೆ ವಹಿಸಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆಗ್ರಹಿಸಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮÁತನಾಡಿದ ಅವರು, ಈ ಬಗ್ಗೆ ಹಿಂದಿನ ಸರ್ಕಾರದ ಅವಽಯಲ್ಲಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಉಪನಗರ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ೫ ಪ್ರಕರಣಗಳು ದಾಖಲಾಗಿವೆ. ಈ ಸಂಬAಧ ಕನ್ಸಲ್ಟನ್ಸಿಯ ರಾಘವೇಂದ್ರ ಕಟ್ಟಿ ಎಂಬುವರನ್ನು ಉಪನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಎದೆ ನೋವು ಎಂದು ಹೇಳಿ ರಾಘವೇಂದ್ರ ಕಟ್ಟಿ ಹುಬ್ಬಳಿಯ ಕಿಮ್ಸ್ಗೆ ದಾಖಲಾಗಿ ನಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು. ಅಲ್ಲದೆ, ಹೈಕೋರ್ಟ್ ಮೊರೆ ಹೋಗಿ ಎಲ್ಲ ಪ್ರಕರಣಗಳಿಗೆ ವಿಚಾರಣೆ ನಡೆಸದಂತೆ ತಡೆಯÁಜ್ಞೆ ಪಡೆದಿದ್ದರು. ಹೈಕೋರ್ಟ್ನಲ್ಲಿ ಪ್ರಕರಣ ಇರ್ತಥ್ಯಗೊಳ್ಳದಿರುವುದರಿಂದ ಅರ್ಜಿಯನ್ನು ಜೂ. ೭ರಂದು ವಜಾಗೊಳಿಸಿದೆ. ನಂತರ ಈವರೆಗೆ ವಿಚಾರಣೆ ಆರಂಭಿಸಿಲ್ಲ. ಇದಾದ ಬಳಿಕ ಹಲವರು ಪ್ರಕರಣ ದಾಖಲಿಸಲು ಪ್ರಯತ್ನಿಸಿದರೂ ಪ್ರಯೋಜನ ಆಗಿಲ್ಲ ಎಂದರು.
    ಧಾರವಾಡ ಅಷ್ಟೆ ಅಲ್ಲದೆ, ಹಲವು ಜಿಲ್ಲೆಗಳಲ್ಲಿ -Á್ರಂಚೈಸಿ ತೆರೆದು ಹತ್ತಾರು ಎಜೆಂಟರ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಆದ್ದರಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ಕೌಂಟರ್ ತೆರೆದು ದೂರುಗಳನ್ನು ಸ್ವೀಕರಿಸಬೇಕು. ಪ್ರಕರಣಕ್ಕೆ ತಡೆಯÁಜ್ಞೆ ಇದೆ ಎಂದು ಹೇಳಿ ದೂರು ಸ್ವೀಕರಿಸದೆ ವಾಪಸ್ ಕಳುಹಿಸಲಾಗುತ್ತಿದೆ. ಹಣ ಕಳೆದುಕೊಂಡು ಅನ್ಯಾಯವಾದವರ ವಿರುದ್ಧವೇ ಪ್ರಕರಣ ದಾಖಲಿಸಿ ನ್ಯಾಯÁಲಯಕ್ಕೆ ಹಾಜರಾಗುವಂತೆ ಮÁಡುತ್ತಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ಒಪ್ಪಿಸಬೇಕು.
    ಸುದ್ದಿಗೋಷ್ಠಿಯಲ್ಲಿ ನೊಂದ ಅಭ್ಯರ್ಥಿಗಳಾದ ಶಿವರಾಜ, ವೆಂಕಟೇಶ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts