More

    ಬಿಬಿಎಂಪಿ ಲೆಕ್ಕಾಧೀಕ್ಷಕಿಗೆ ಮೂವರು ಗುತ್ತಿಗೆದಾರರಿಂದ ಲೈಂಗಿಕ ಕಿರುಕುಳ

    ಬೆಂಗಳೂರು: ಅಕ್ರಮವಾಗಿ ಹಣ ಸಂಪಾದನೆ ಮಾಡುವ ಹಟಕ್ಕೆ ಇಳಿದವರು ಯಾವ ಮಟ್ಟಕ್ಕೆ ಬೇಕಾದರೂ ಹೋಗ್ತಾರೆ. ಕೊಲೆ, ಸುಲಿಗೆ, ಬೆದರಿಕೆ, ಹಲ್ಲೆ… ಇನ್ನೂ ಮುಂದುವರಿದು ಲೈಂಗಿಕ ದೌರ್ಜನ್ಯದಂತಹ ಹೀನ ಕೃತ್ಯಕ್ಕೂ ಕೈ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ.

    ಅಕ್ರಮವಾಗಿ ಗುತ್ತಿಗೆ ಬಿಲ್​ಗಳನ್ನು ಪಾಸ್​ ಮಾಡಿಸಿಕೊಳ್ಳುವ ದುರುದ್ದೇಶದಿಂದ ಮೂವರು ಗುತ್ತಿಗೆದಾರರು ಬಿಬಿಎಂಪಿ ಲೆಕ್ಕಾಧೀಕ್ಷಕಿಯೊಬ್ಬರ ಪೋಟೋಗಳನ್ನು ಅಹಸ್ಯಕರವಾಗಿ ತಿರುಚಿ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿರಿ ಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!

    ಬಿಬಿಎಂಪಿ ಗುತ್ತಿಗೆದಾರರಾದ ಗಿರೀಶ್​, ಪ್ರಮೋದ್​ ಮತ್ತು ಅಜಯ್​ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ಫ್ರೇಜರ್​ಟೌನ್​ ನಿವಾಸಿ 37 ವರ್ಷದ ಬಿಬಿಎಂಪಿ ಲೆಕ್ಕಾಧೀಕ್ಷಕಿ ದೂರು ದಾಖಲಿಸಿದ್ದಾರೆ.

    ದೂರುದಾರ ಮಹಿಳೆ ಕೆಲ ವರ್ಷಗಳಿಂದ ಬಿಬಿಎಂಪಿ ಲೆಕ್ಕಾಧೀಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಈ ವೇಳೆ ಗಿರೀಶ್​, ಪ್ರಮೋದ್​, ಅಜಯ್​ ಅವರ ಪರಿಚಯವಾಗಿತ್ತು. ಆರೋಪಿಗಳು ಕೆಲಸದ ನಿಮಿತ್ತ ಆಗಾಗ ದೂರುದಾರರ ಕಚೇರಿಗೆ ಬಂದು ಹೋಗುತ್ತಿದ್ದರು. ಒಳ್ಳೆಯ ಸ್ನೇಹಿತರಂತೆ ಮಾತನಾಡಿ ಲೆಕ್ಕಾಧೀಕ್ಷಕಿ ಜತೆ ಮೊಬೈಲ್​ನಲ್ಲಿ ಫೋಟೋಗಳನ್ನು ತೆಗೆದುಕೊಂಡಿದ್ದರು.

    ಬಿಬಿಎಂಪಿ ಗುತ್ತಿಗೆಗೆ ಸಂಬಂಧಿಸಿದ ಹಲವಾರು ಬಿಲ್ಲುಗಳನ್ನು ನಗದೀಕರಿಸಿಕೊಂಡು ತಮ್ಮ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರ ಇಎಸ್​ಐ, ಪಿಎಸ್​, ಜಿಎಸ್​ಟಿ ಪಾವತಿ ಮಾಡುವುದಿಲ್ಲ ಎಂದಿದ್ದಲ್ಲದೇ ಗುತ್ತಿಗೆ ಬಿಲ್​ಗಳನ್ನು ಪಾಸ್​ ಮಾಡದಿದ್ದರೆ ನಿಮ್ಮ ಜತೆಯಲ್ಲಿ ಈ ಹಿಂದೆ ತೆಗೆದ ಪೋಟೊಗಳನ್ನು ಅಹಸ್ಯಕರವಾಗಿ ಮಾರ್ಪಡಿಸುವುದಾಗಿ ಬೆದರಿಕೆ ಒಡ್ಡಿದ್ದರು.
    ಇದಾದ ಕೆಲ ಸಮಯದ ನಂತರ ಆರೋಪಿ ಗಿರೀಶ್​ಗೂ ತನಗೂ ಅಕ್ರಮ ಸಂಬಂಧವಿದೆ ಎಂಬ ರೀತಿಯಲ್ಲಿ ಪೋಟೊಗಳನ್ನು ಮಾರ್ಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣಬೆದರಿಕೆ ಹಾಕಿದ್ದಾರೆ. ಜತೆಗೆ ಮೊಬೈಲ್​ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾರೆ.

    ಈ ಫೋಟೋಗಳನ್ನು ಬಳಸಿಕೊಂಡು ಅಕ್ರಮ ಸಂಬಂಧದ ಕಥೆಕಟ್ಟಿ ಕಚೇರಿಯಲ್ಲಿ ಕೆಲಸ ನಿರ್ವಹಿಸದಂತೆ ಮಾಡುತ್ತೇವೆ ಎಂಬುದಾಗಿ ಬೆದರಿಸಿದ್ದಾರೆ. ಗುತ್ತಿಗೆ ಬಿಲ್ಲುಗಳನ್ನು ಅಕ್ರಮವಾಗಿ ನಗದೀಕರಣ ಮಾಡಿಕೊಳ್ಳುವ ದುರುದ್ದೇಶದಿಂದ ಲೈಂಗಿಕ ಕಿರುಕುಳ ನೀಡಿ ಮಾನಸಿಕವಾಗಿ ಒತ್ತಡ ಹೇರಿದ್ದಾರೆ ಎಂದು ಲೆಕ್ಕಾಧೀಕ್ಷಕಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಪ್ರಕರಣದ ತನಿಖೆ ಆರಂಭಿಸಿದ್ದು, ಸಂಬಂಧಿಸಿದ ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸಮಾಧಿಯಲ್ಲಿ ಕೊಳೆಯುತ್ತಿದ್ದ ಕರ್ನಾಟಕ ಮೂಲದ ಮಗು ಶವ ತೆಗೆಸಿ ಬೇರೆಡೆಗೆ ದೂಡಿದ್ರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts