More

    3 ತಿಂಗಳ ಕಂದನ ಮೇಲೆ ಕಾಮುಕನ ಕ್ರೌರ್ಯ, ಮಗು ಸ್ಥಿತಿ ಗಂಭೀರ

    ಆಗ್ರಾ: ಮೂರು ತಿಂಗಳ ಮಗುವಿನ ಮೇಲೆ 17 ವರ್ಷದ ಕಾಮುಕನೋರ್ವ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಇಟಾ ಜಿಲ್ಲೆಯ ಬಾಗ್ವಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಗುವಿನ ತಾಯಿ ಎಮ್ಮೆಗಳನ್ನು ಕಟ್ಟಲು ಹೊರ ಹೋದಾಗ ಈ ಘಟನೆ ನಡೆದಿದೆ. ಬಾಗ್ವಾಲ ಪ್ರದೇಶದ ನಿವಾಸಿಯಾಗಿರುವ 17 ವರ್ಷದ ಕಾಮುಕ, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ನಂತರ ತಾಯಿ ಮನೆಗೆ ಬಂದಾಗ, ತನ್ನ ಮಗು ಅಳುತ್ತಿರುವುದನ್ನು ಕಂಡು ಸಮಾಧಾನ ಮಾಡಿದ್ದಾಳೆ.

    ಈ ವೇಳೆ ಮಗುವಿನ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
    ಈ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸೆಕ್ಷನ್ 376 ಮತ್ತು ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ, ಕಾಮುಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಕಾಬುಲ್‌ ವಿಮಾನ ನಿಲ್ದಾಣದಲ್ಲಿ ಶೂಟ್‌ಔಟ್‌: ಐವರ ಸಾವು- ಪ್ರಾಣ ಉಳಿಸಿಕೊಳ್ಳಲು ಬಂದು ಹೆಣವಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts