More

    ಜಾಲತಾಣದಲ್ಲಿ ಯುವತಿಯರ ಫೋಟೋ ಜತೆಗೆ ಫೋನ್​ ನಂಬರ್: ಭಯಾನಕ ಜಾಲ ಭೇದಿಸಿದ ಪೊಲೀಸರು!

    ಹೈದರಾಬಾದ್​: ಆನ್​ಲೈನ್​ ಬಳಸಿಕೊಂಡು ಹೈಟೆಕ್​ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಹೈದರಾಬಾದಿನ ರಾಚಕೊಂಡ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ತಡೆಗಟ್ಟುವ ಬಂಧನ ಕಾಯ್ದೆ (ಪಿ.ಡಿ. ಆ್ಯಕ್ಟ್​) ಅಡಿ ಪ್ರಕರಣ ದಾಖಲಿಸಿದ್ದಾರೆ.

    ವೇಶ್ಯಾವಾಟಿಕೆ ದಂಧೆಯ ಕಿಂಗ್​ಪಿನ್​ ಅಂಜಲಿ ಪರ ಕೆಲಸ ಮಾಡುತ್ತಿದ್ದ ಸಾದನಲಾ ದೇವಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದಿನ ಅನೇಕ ಮಾನವ ಕಳ್ಳಸಾಗಾಣೆ ಪ್ರಕರಣಗಳಲ್ಲಿಯೂ ಈಕೆ ಪ್ರಮುಖ ಆರೋಪಿಯಾಗಿದ್ದಾಳೆಂದು ರಾಚಕೊಂಡ ಪೊಲೀಸರು ಮಾಹಿತಿ ನೀಡಿದ್ದಾರೆ.

    ಈ ಗ್ಯಾಂಗ್​​ ಜೀವನ ಸುಧಾರಣೆಗೆ ಕೆಲಸ ನೀಡುತ್ತೇವೆಂದು ಏಜೆಂಟ್​ಗಳ ಮೂಲಕ ನಂಬಿಸಿ ಪಶ್ಚಿಮ ಬಂಗಾಳದಿಂದ ಯುವತಿಯರನ್ನು ಕರೆತಂದು ಹೈದರಾಬಾದಿನ ಬಲ್ಕಂಪೇಟ್​ನ ಲಾಡ್ಜ್​ವೊಂದರ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರು. ಬಳಿಕ ಯುವತಿಯರ ಫೋಟೋಗಳನ್ನು ತೆಗೆದು ಮೊಬೈಲ್​ ನಂಬರ್​ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿತ್ತು. ಅಲ್ಲದೆ, ಗ್ರಾಹಕರನ್ನು ಆನ್​ಲೈನ್​ ಚಾನೆಲ್​ ಮತ್ತು ವಾಟ್ಸ್​ಆ್ಯಪ್​ಗಳ ಮೂಲಕ ಸಂಪರ್ಕಿಸಿನ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಇಂಜಿನಿಯರ್​ ವಿದ್ಯಾರ್ಥಿಗಳಿಂದ ಕಡಿಮೆ ವೆಚ್ಚದ ಇ-ಬೈಕ್​ ಸಂಶೋಧನೆ: ಗಂಟೆಗೆ ಎಷ್ಟು ಕಿ.ಮೀ ಚಲಿಸಬಲ್ಲದು?

    ಕಿಂಗ್​ಪಿನ್​ ಅಂಜಲಿ ದಂಧೆಯ ಹಣವನ್ನು ಆನ್​ಲೈನ್​ ಮೂಲಕವೇ ಸ್ವೀಕರಿಸುತ್ತಿದ್ದಳು. ಆರೋಪಿ ಸಾದನಲಾ ಯುವತಿಯರನ್ನು ಗ್ರಾಹಕರ ಸ್ಥಳಕ್ಕೆ ಕರೆದೊಯ್ದು ಬಿಟ್ಟು ಬರುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪ್ರತಿ ಗ್ರಾಹಕರ ಬಳಿ 10,000 ರೂ. ಪಡೆಯುತ್ತಿದ್ದ ಕಿಂಗ್​ಪಿನ್​ಗಳು ಯುವತಿಯರಿಗೆ ದಿನವೊಂದಕ್ಕೆ 1,500 ರಿಂದ 2000 ಕೊಡುತ್ತಿದ್ದರು. ಗ್ಯಾಂಗ್​ನ ಸದಸ್ಯರು ಸುಲಭವಾಗಿ ಹಣ ಸಂಪಾದಿಸುತ್ತಿದ್ದರು. ಬಡತನ, ನಿರ್ಗತಿಕರು, ಅನಾಥರು, ಬಡ ಕೂಲಿ ಕಾರ್ಮಿಕರು, ತೀವ್ರ ಖಿನ್ನತೆಗೆ ಒಳಗಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಹೆಚ್ಚಿನ ಹಣವನ್ನು ನೀಡುವುದಾಗಿ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ನೂಕುತ್ತಿದ್ದರು.

    ಇದೀಗ ವೇಶ್ಯಾವಾಟಿಕೆ ಜಾಲವನ್ನು ಭೇದಿಸಲಾಗಿದ್ದು, ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಗ್ರಾಮದ ಮಧ್ಯೆದಲ್ಲಿಯೇ ಯುವಕನ ಬರ್ಬರ ಹತ್ಯೆ: ಬೆಳ್ಳಂಬೆಳಗ್ಗೆಯೇ ಬೆಚ್ಚಿಬಿದ್ದ ಗ್ರಾಮಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts