More

    ಕಾಂಪೌಂಡ್‌ಗೆ ನುಗ್ಗಿದ ಒಳಚರಂಡಿ ನೀರು

    ಚಿಕ್ಕಮಗಳೂರು: ನಗರದ ಗೌರಿಕಾಲುವೆ ಸಮೀಪ ಆಜಾದ್ ರಸ್ತೆಯಲ್ಲಿ ಮಳೆಯಿಂದಾಗಿ ಯುಜಿಡಿ ಪೈಪ್‌ಲೈನ್ ತುಂಬಿಕೊಂಡ ಪರಿಣಾಮ ರಸ್ತೆಯ ಹಲವು ಮನೆಯ ಕಾಂಪೌಂಡ್‌ಗಳಿಗೆ ಕೊಳಚೆ ನೀರು ನುಗ್ಗಿದೆ.
    ಈ ಬಗ್ಗೆ ನಗರಸಭೆ ಅಧ್ಯಕ್ಷರು ಹಾಗೂ ನಗರಸಭೆ ಆಯುಕ್ತರಿಗೆ ದೂರು ಸಲ್ಲಿಸಿದರೂ ನಗರಸಭೆ ಸಿಬ್ಬಂದಿ ನಾಲ್ಕೈದು ದಿನಗಳ ಬಳಿಕ ಬಂದು ಯುಜಿಡಿಯನ್ನು ಅರ್ಧಂಬರ್ಧ ಸ್ವಚ್ಛಗೊಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮಳೆ ಹೆಚ್ಚಾದರೆ ಮತ್ತೊಮ್ಮೆ ಯುಜಿಡಿ ನೀರು ರಸ್ತೆಯ ಮೇಲೆ ಹರಿದು ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಸ್ಥಳೀಯರಯ ಅಸಮಾಧಾನ ವ್ಯಕ್ತಪಡಿಸಿದರು.
    ಈ ರಸ್ತೆಯಲ್ಲಿ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಸಂಚರಿಸುತ್ತಿದ್ದು ಯುಜಿಡಿ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ನಗರದಲ್ಲಿ ಕೋಟ್ಟಿಗಟ್ಟಲೇ ಹಣವನ್ನು ವ್ಯಯಿಸಿ ಅಮೃತ ಯೋಜನೆ ಜಾರಿಗೆ ತಂದಿದ್ದರೂ ಸಾರ್ವಜನಿಕರ ಗೋಳಾಟ ತಪ್ಪಿಲ್ಲ ಎಂದು ದೂರಿದ್ದಾರೆ.
    ಆ ನಿಟ್ಟಿನಲ್ಲಿ ನಗರಸಭೆ ಆಡಳಿತ ಹಾಗೂ ಆಯುಕ್ತರು ಯುಜಿಡಿ ನೀರು ರಸ್ತೆ ಮೇಲೆ ಹರಿಯುವುದನ್ನು ತಪ್ಪಿಸಿ, ಶಾಶ್ವತ ಕ್ರಮಕೈಗೊಳ್ಳಬೇಕು. ಮುಂದೆ ಮಳೆ ಮುನ್ಸೂಚನೆ ಇರುವುದರಿಂದ ತ್ವರಿತ ಗತಿಯಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಮೀಲ್ ಅಹಮದ್ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts