More

    ವಿದ್ಯಾರ್ಥಿಗಳಲ್ಲಿ ಭಾವೈಕ್ಯ ಮೂಡಿಸುವ ಸೇವಾದಳ

    ಹಿರೇಕೆರೂರ: ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯ, ಶಿಸ್ತು, ಕ್ರಿಯಾಶೀಲತೆ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ ದಿ. ನಾ.ಸು. ಹರ್ಡಿಕರ್ ಅವರು ಭಾರತ ಸೇವಾದಳ ಸ್ಥಾಪಿಸಿದ್ದಾರೆ ಎಂದು ಭಾರತ ಸೇವಾದಳ ಕೇಂದ್ರ ಸಮಿತಿ ಉಪಾಧ್ಯಕ್ಷ ಕೆ.ಡಿ. ದೀವಿಗಿಹಳ್ಳಿ ಹೇಳಿದರು.

    ಪಟ್ಟಣದ ಗುರುಭವನದಲ್ಲಿ ಬುಧವಾರ ಆಯೋಜಿಸಿದ್ದ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರಿಗೆ ಒಂದು ದಿನದ ಮಿಲಾಪ್ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಭಾರತ ಸೇವಾದಳದ ಜಿಲ್ಲಾ ಉಪಾಧ್ಯಕ್ಷ ಎನ್. ಸುರೇಶಕುಮಾರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆರಂಭದಲ್ಲೇ ದೇಶಭಕ್ತಿ, ಶಿಸ್ತು ಬೆಳೆಸಬೇಕು. ಹಾಗಾದಾಗ ಮಾತ್ರ ದೇಶಾಭಿಮಾನ ಮೂಡಿಸಲು ಸಾಧ್ಯ. ದೇಶಕ್ಕೆ ವಿಪತ್ತು ಸಂಭವಿಸಿದಾಗ ಸೇವಾದಳ ಟ್ರೂಪ್​ಗಳು ದೇಶ ಸೇವೆ ಮಾಡುವಂತಹ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

    ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಬಿ.ವಿ. ಸೊರಟೂರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರೇವಣಸಿದ್ದಪ್ಪ, ಪಿ.ಬಿ. ನಿಂಗನಗೌಡ್ರ, ಎಸ್.ಆರ್. ಅಣ್ಣಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಪತ್ತಿನ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕೋಶಾಧ್ಯಕ್ಷ ಸಿ.ಎಸ್. ಚಳಗೇರಿ, ಕಾರ್ಯದರ್ಶಿ ಎಸ್.ಎಸ್. ಕೋರಿಗೌಡ್ರ, ಮಲ್ಲೇಶಪ್ಪ ಕೌಜಲಗಿ, ನಾಗರಾಜ ಹೊಸಮನಿ, ಟಿ.ಎಸ್. ಸಾಲಿ, ಜೆ.ಬಿ. ಮರಿಗೌಡ್ರ, ಎಸ್.ಎಚ್. ಕಟ್ಟಿಮನಿ, ಪ್ರೌಢಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಎಸ್.ವಿ. ಪಾಟೀಲ, ಗಾಲೀಬ್ ಸಿ ಫೀರಜಾದೆ ಇದ್ದರು. ಶಿಕ್ಷಕ ಮಹೇಶ್ ಮರಿಗೌಡ್ರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts