More

    ಕನಸು ನನಸಾಗಿಸಲು ವ್ಯಕ್ತಿತ್ವ ರೂಪಿಸಿಕೊಳ್ಳಿ

    ಅಳವಂಡಿ: ಶಿಸ್ತು, ಗುರಿ ಮುಟ್ಟುವ ಛಲ ಇದ್ದರೆ ಮಾತ್ರ ಶಿಕ್ಷಣದಲ್ಲಿ ಯಶಸ್ಸು ಲಭಿಸಲಿದೆ ಎಂದು ಕಸಾಪ ಮುಂಡರಗಿ ತಾಲೂಕು ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ಹೇಳಿದರು. ಗ್ರಾಮದ ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ದೈನಂದಿಕ ಚಟುವಟಿಕೆಯ ಸಮಾರೋಪ ಹಾಗೂ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಕನಸು ನನಸಾಗಿಸಲು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಶಿಕ್ಷಣದ ಉದ್ದೇಶ ಈಡೇರಲು ಜೀವನದಲ್ಲಿ ನೈತಿಕತೆ, ಹೃದಯವಂತಿಕೆ, ಗುಣವಂತಿಕೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

    ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕರ್ನಾಟಕ ವಿದ್ಯಾವರ್ಧಕ ಸಮಿತಿ ಅಧ್ಯಕ್ಷ ಬುಜಂಗಸ್ವಾಮಿ ಇನಾಮದಾರ, ವ್ಯವಸ್ಥಾಪಕ ಪ್ರಕಾಶಸ್ವಾಮಿ ಇನಾಮದಾರ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ನಿವೃತ್ತ ಪ್ರಾಚಾರ್ಯರಾದ ಡಿ.ಜಿ.ಲಕ್ಕನಗೌಡರ, ಎ.ಟಿ.ಕಲ್ಮಠ, ಎಂ.ಎಸ್.ಹೊಟ್ಟಿನ, ಪ್ರಮುಖರಾದ ಶಂಕರಪ್ಪ ಕಲಾದಗಿ, ವೆಂಕಣ್ಣ ಕಲಾದಗಿ, ಶಂಕ್ರಪ್ಪ ಕ್ವಾಗಳಿ, ಎಸ್.ಎಸ್.ಅಂಗಡಿ, ಎಚ್.ಮಹಾನಂದಿ, ನವೀನ ಇನಾಮದಾರ, ಅಂಬರೀಶ, ನೀಲಪ್ಪ, ಮಲ್ಲಪ್ಪ, ದೇವಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts