More

    ಸೇವಾದಳ ಶತಮಾನೋತ್ಸವ, ಚುನಾವಣೆಗೂ ತಯಾರಿ

    ಬೆಂಗಳೂರು: ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮಾವೇಶವನ್ನು ನವೆಂಬರ್ 9ರಂದು ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾದ್ದು, ಮುಂದಿನ ದಿನಗಳಲ್ಲಿ ಸೇವಾದಳ ಯಾವ ರೀತಿ ಕೆಲಸ ಮಾಡಬೇಕು, ಲೋಕಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಮಾಡಬೇಕು ಎಂದು ಈ ಈ ವೇದಿಕೆಯಲ್ಲಿ ಚರ್ಚೆಯಾಗಲಿದೆ.
    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಇದೇ ತಿಂಗಳ 28ರಂದು ಸೇವಾದಳ ನೂರು ವರ್ಷಗಳನ್ನು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಮೂಲಕ ಸೇವಾದಳದ ಇತಿಹಾಸದ ಬಗ್ಗೆ ದೇಶಕ್ಕೆ ಸಂದೇಶ ರವಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸೇವಾದಳದ 3 ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
    ಸಮಾವೇಶವನ್ನು ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಾದ ಲಾಲ್ ಜಿ ಧ್ವಜಾರೋಹಣ ಮಾಡಲಿದ್ದಾರೆ ಎಂದು ಹೇಳಿದರು.
    ಸೇವಾದಳ ಅಧ್ಯಕ್ಷ ರಾಮ ಚಂದ್ರಪ್ಪ ಮಾತನಾಡಿ, ಸೇವಾದಳ 1923ರಲ್ಲಿ ಸ್ಥಾಪನೆಯಾಗಿದ್ದು, ಹರ್ಡಿಕರ್ ಅವರು ಜೈಲಿನಲ್ಲಿ ಈ ಸಂಘಟನೆ ಆರಂಭಿಸಿದರು. ಆರಂಭದಲ್ಲಿ ಹಿಂದುಸ್ಥಾನಿ ಸೇವಾದಳ ಎಂದು ಸ್ಥಾಪನೆಯಾಗುತ್ತದೆ. ನಂತರ 1930-31ರಲ್ಲಿ ಗಾಂಧಿಜಿ, ನೆಹರೂ ಸೇರಿದಂತೆ ಅನೇಕ ನಾಯಕರು ಸೇವಾದಳವನ್ನು ಕಾಂಗ್ರೆಸ್‌ಗೆ ವಿಲೀನ ಮಾಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಸೇವಾದಳ ಕಾಂಗ್ರೆಸ್ ವಿಭಾಗವಾಗಿ ಸಂಘಟನೆ ಮಾಡಿಕೊಂಡು ಬಂದಿದೆ ಎಂದರು.
    ಬ್ರಿಟೀಷರ ಹಿಂಸೆ ತಾಳಲಾರದೆ ಹುಟ್ಟುಕೊಂಡ ಸಂಘಟನೆ ಇದಾಗಿದೆ. ನಾನು ಇದರ ಅಧ್ಯಕ್ಷನಾಗಿ 2 ವರ್ಷಗಳಾಗಿದ್ದು, ಈ ಅವಧಿಯಲ್ಲಿ ರಾಜ್ಯಮಟ್ಟದ ಜಿಲ್ಲಾಮಟ್ಟದ ಪದಾಧಿಕಾರಿಗಳ ನೇಮಕ ಮಾಡಿ ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಶತಮಾನೋತ್ಸವಕ್ಕೆ 3-5 ಸಾವಿರ ಸೇವಾದಳದ ಸೇನಾನಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts