More

    ಕೊಡಕಣಿ ಗ್ರಾಮದ ಭೂ ಹಕ್ಕು ಸಮಸ್ಯೆ ಇತ್ಯರ್ಥಪಡಿಸಿ

    ಶಿವಮೊಗ್ಗ:ಸೊರಬ ತಾಲೂಕು ಕೊಡಕಣಿ ಗ್ರಾಮದ ಭೂ ಹಕ್ಕಿನ ಸಮಸ್ಯೆ ಬಗೆಹರಿಸಬೇಕು ಹಾಗೂ ಈ ಗ್ರಾಮವನ್ನು ಸೊರಬ ಪುರಸಭೆ ವ್ಯಾಪ್ತಿಗೆ ಸೇರಿಸಬೇಕೆಂದು ಒತ್ತಾಯಿಸಿ ಮಲೆನಾಡು ರೈತರ ಹೋರಾಟ ಸಮಿತಿ ಹಾಗೂ ಕೊಡಕಣಿ ಗ್ರಾಮಸ್ಥರು ಗುರುವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 17 ವರ್ಷ ಕಳೆದಿದ್ದರೂ ನಮಗೆ ಹಕ್ಕು ಪತ್ರ ನೀಡಿಲ್ಲ. ಇಲ್ಲಿ 600ಕ್ಕೂ ಹೆಚ್ಚು ಮನೆಗಳಿವೆ. ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದರೆ ಏಕಪಕ್ಷೀಯವಾಗಿ ರೈತರ ಅರ್ಜಿಗಳನ್ನು ವಜಾ ಮಾಡಲಾಗಿದೆ. ಅರ್ಜಿದಾರರಿಗೆ ನೈಜವಾಗಿ ನ್ಯಾಯ ನೀಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದ್ದರು ಆದೇಶ ಪಾಲನೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ದಾಖಲೆಗಳನ್ನು ಒದಗಿಸಲು ನಮಗೆ ನೆರವಾಗುವುದನ್ನು ಬಿಟ್ಟು ಅರ್ಜಿಗಳನ್ನು ವಜಾ ಮಾಡಿದ್ದಾರೆ. ಕೊಡಕಣಿ ಗ್ರಾಮದ ಸರ್ವೆ ನಂಬರ್ 4, 16, 116, 158, 133, 50ರಲ್ಲಿ ಗ್ರಾಮದ ರೈತರಿಗೆ ಸುಮಾರು 300 ಹಕ್ಕು ಪತ್ರ ನೀಡಿದ್ದು, ಅವುಗಳನ್ನು ಉಪ ವಿಭಾಗಾಧಿಕಾರಿ ಏಕಪಕ್ಷೀಯವಾಗಿ, ರಾಜಕೀಯ ಒತ್ತಡದಿಂದ ವಜಾ ಮಾಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿ ತಡೆಯಾಜ್ಞೆ ನೀಡಬೇಕೆಂದು ಆಗ್ರಹಿಸಿದರು.
    ಸ್ಥಳೀಯ ಗ್ರಾಪಂ ಅಧ್ಯಕ್ಷ ಶ್ರೀಧರ್, ಪ್ರಮುಖರಾದ ತೀ.ನ.ಶ್ರೀನಿವಾಸ್, ಶಿವಪ್ಪ, ತೇಜಪ್ಪ, ನೆಹರು, ಶಿವಪ್ಪ, ಬಸವರಾಜ್, ನಾಗರಾಜ್, ಪಾಲಾಕ್ಷಪ್ಪ ಇತರರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts