More

    ಕೇಂದ್ರೀಯ ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪ; ಪ್ರತಿಪಕ್ಷಗಳಿಗೆ ಸುಪ್ರೀಂ ಕೋರ್ಟ್​ನಲ್ಲಿ ಹಿನ್ನಡೆ

    ನವದೆಹಲಿ: ಕೇಂದ್ರ ಸರ್ಕಾರವು ಸರ್ಕಾರಿ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರ ವಿರುದ್ಧ ದ್ವೇಷ ರಾಜಕಾರಣಕ್ಕಾಗಿ ಬಳಸುತ್ತಿದೆ ಎಂದು ಆರೋಪಿಸಿ ವಿಪಕ್ಷಗಳು ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.

    ವಿಪಕ್ಷಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್​ ಡಿ.ವೈ.ಚಂದ್ರಚೂಡ್​, ಜೆ.ಬಿ.ಪರ್ದಿವಾಲಾ ಅವರಿದ್ದ ದ್ವಿ ಸದಸ್ಯ ಪೀಠವು ಅರ್ಜಿದಾರರಿಗೆ ಧಾವೆಯನ್ನು ಹಿಂಪಡೆಯುವಂತೆ ಸೂಚಿಸಿ ಅರ್ಜಿ ವಜಾ ಮಾಆಡಿದೆ.

    ವಿಪಕ್ಷಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್​ ಮನು ಸಿಂಘ್ವಿ ಕಳೆದ 7 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ(ED) ವಿಪಕ್ಷಗಳ ನಾಯಕರ ಮೇಲೆ ಧಾಖಲಿಸಿರುವ ಪ್ರಕರಣಗಳ ಸಂಖ್ಯೆಯಲ್ಲಿ ಶೇ.06ರಷ್ಟು ಹೆಚ್ಚಿದೆ. ಶಿಕ್ಷೆಯ ಪ್ರಮಾಣ ಶೇ.23ರಷ್ಟು ಹೆಚ್ಚಿದ್ದು CBI-ED ಶೇ.95ರಷ್ಟು ಪ್ರಕರಣಗಳನ್ನು ವಿರೋಧ ಪಕ್ಷಗಳ ನಾಯಕರ ಮೇಲೆ ದಾಖಲಿಸಿವೆ. ಇದು ದ್ವೇಷ ರಾಜಕಾರಣದ ಫಲ ಎಂದು ಆರೋಪಿಸಿದ್ದಾರೆ.

    ಇದನ್ನೂ ಓದಿ: ರಾಮನವಮಿ ವೇಳೆ ಘರ್ಷಣೆ; ಹನುಮ ಜಯಂತಿಗೆ ಕಟ್ಟೆಚ್ಚೆರ ವಹಿಸುವಂತೆ ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

    ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಪೀಠವು ಇದರಿಂದ ತನಿಖೆ ಇಂದ ವಿರೋಧ ಪಕ್ಷಗಳ ನಾಯಕರು ವಿನಾಯ್ತಿಯನ್ನು ಕೋರುತ್ತಿದ್ದಾರೆಯೇ. ಇದರಿಂದ ನಾಗರೀಕರಿಗೆ ಯಾವುದಾದರು ವಿಶೇಷ ಹಕ್ಕಿನ ಬಗ್ಗೆ ಪ್ರಸ್ತಾಪಿಸುತ್ತಿದ್ದೀರಾ ಎಂದು ವಿಪಕ್ಷಗಳ ವಕೀಲರನ್ನು ಪ್ರಶ್ನಿಸಿದ್ಧಾರೆ.

    ಇದಕ್ಕೆ ಉತ್ತರಿಸಿದ ಅಭಿಷೇಕ್​ ಮನು ಸಿಂಘ್ವಿ ಇದರಿಂದ ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಅಥವಾ ವಿನಾಯ್ತಿಯನ್ನು ಕೋರಿ ಅರ್ಜಿ ಸಲ್ಲಿಸಿಲ್ಲ. ಯಾವುದೇ ಪಕ್ಷಪಾತವನ್ನು ಮಾಡದೆ ಕಾನೂನನ್ನು ಎಲ್ಲರಿಗೂ ಅನ್ವಯವಾಗುವಂತೆ ಸರ್ಕಾರ ಕಾರ್ಯ ನಿರ್ವಹಿಸಬೇಕು. ವಿಪಕ್ಷಗಳನ್ನು ಬಲಹೀನಗೊಳಿಸಲು ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆಯನ್ನುಂಟು ಮಾಡಿದೆ ಎಂದು ಸಿಂಘ್ವಿ ದ್ವಿಸದಸ್ಯ ಪೀಠಕ್ಕೆ ತಿಳಿಸಿದ್ದರು.

    ವಿಪಕ್ಷಗಳು ಸಲ್ಲಿಸಿರುವ ಅರ್ಜಿಯೂ ಮೂಲಭೂತವಾಗಿ ರಾಜಕಾರಣಿಗಳ ಪರವಾಗಿದೆ ಇದರಲ್ಲಿ ನಾಗರೀಕರ ಹಿತಾಸಕ್ತಿಯ ಬಗ್ಗೆ ಗಣನೆಗೆ ತೆಗೆದುಕೊಂಡಿಲ್ಲ. ಸುಪ್ರೀಂ ಕೋರ್ಟ್​ ಈ ವಿಚಾರವಾಗಿ ರಾಜಕಾರಣಿಗಳಿಗಾಗಿ ವಿಶೇಷ ಮಾರ್ಗಸೂಚಿಯನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ ಅರ್ಜಿದಾರರಿಗೆ ದಾವೆಯನ್ನು ಹಿಂಪಡೆಯುವಂತೆ ದ್ವಿಸದಸ್ಯ ಪೀಠ ಸೂಚಿಸಿ ಅರ್ಜಿಯನ್ನು ವಜಾ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts