More

    ನಿಶ್ಚಿತ ಗುರಿ ಹೊಂದಿ ತಲುಪಲು ಪ್ರಯತ್ನಿಸಿ

    ಅಳವಂಡಿ: ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ನಿಶ್ಚಿತ ಗುರಿ ಹೊಂದಿ ತಲುಪಲು ಪ್ರಯತ್ನಿಸಿ ಎಂದು ಹಿರೇಸಿಂದೋಗಿ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿ ಹನುಮಂತಪ್ಪ ಅಂಡಗಿ ತಿಳಿಸಿದರು.

    ಇದನ್ನೂ ಓದಿ: ಪಾಕಿಸ್ತಾನ ಸೆಮೀಸ್​ ತಲುಪಲು ಸುಲಭ ಉಪಾಯ ಹೇಳಿಕೊಟ್ಟ ವಾಸಿಂ ಅಕ್ರಮ್​; ವ್ಯಾಪಕ ಟೀಕೆಗೆ ಗುರಿ

    ಸಮೀಪದ ಮುರ್ಲಾಪುರದಲ್ಲಿ 133ನೇ ವರ್ಷದ ಆದಿಶಕ್ತಿ ಪುರಾಣ ಪ್ರವಚನದ ಮುಕ್ತಾಯ ಸಮಾರಂಭ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀದೇವಿ ಮತ್ತು ನಾಡೋಜ ಡಾ.ಅನ್ನದಾನೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಧಾರ್ಮಿಕ ಸಭೆಯಲ್ಲಿ ಬುಧವಾರ ಮಾತನಾಡಿದರು.

    ಜಾನಪದದಲ್ಲಿ ಗ್ರಾಮೀಣ ಸೊಗಡು ಹಾಗೂ ಮಾನವೀಯ ಮೌಲ್ಯಗಳು ಅಡಗಿವೆ. ಕಾರಣ ಎಲ್ಲರೂ ಜಾನಪದ ಹಾಡುಗಳನ್ನು ಆಲಿಸಿ. ಯುವಕರು ಉನ್ನತ ಭವಿಷ್ಯ ರೂಪಿಸಿಕೊಳ್ಳಲು ಕನಸು ಕಾಣಬೇಕು ಅದರಂತೆ ಸಾಧನೆ ಮಾಡಬೇಕು. ಸಾಧಕರನ್ನು ಸಮಾಜ ಗೌರವಿಸುತ್ತದೆ.

    ಮೊಬೈಲ್ ಅನ್ನು ಜ್ಞಾನವೃದ್ಧಿ, ಒಳ್ಳೆದಕ್ಕಾಗಿ ಬಳಸಿ. ಮಹಿಳೆಯರು ಧಾರವಾಹಿಗಳನ್ನು ನೋಡುವುದನ್ನು ಕಡಿಮೆ ಮಾಡಿ. ಇವುಗಳಿಂದ ಸಮಯ ವ್ಯರ್ಥ. ಸಂಗೀತ, ನಾಟಕ, ಬಯಲಾಟ, ಜಾನಪದ ಹಾಡುಗಳನ್ನು ಆಲಿಸಿ. ಇವು ಮನಸನ್ನು ಉಲ್ಲಾಸಿತಗೊಳಿಸುತ್ತವೆ ಎಂದರು.

    ಬೆಳಗ್ಗೆ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ, ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು. ಶ್ರೀದೇವಿ ಉತ್ಸವ ಮೂರ್ತಿ ಹಾಗೂ ಅಡವಿ ಮಲ್ಲನಕೇರಿ ಶ್ರೀಚನ್ನಮಲ್ಲಿಕಾರ್ಜುನ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ, ಮಹಿಳೆಯರ ಕಳಶ, ಕುಂಭ, ಡೊಳ್ಳು, ಭಜನೆ, ನಂದಿಕೋಲು ಸಕಲ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನವನ್ನು ತಲುಪಿತು.

    ಪುರಾಣ ಪಠಣಕಾರ ಶ್ರೀ ಪ್ರವೀಣಸ್ವಾಮಿ ಹುಲಕಂತಿಮಠ, ಪ್ರವಚನಕಾರ ಶ್ರೀಕುಮಾರಸ್ವಾಮಿ ಹಿರೇಮಠ, ಸಂಗೀತಕಾರ ಯಂಕಣ್ಣ ವರಕನಹಳ್ಳಿ, ತಬಲಾ ವಾದಕ ಮೌನೇಶ ಬಡಿಗೇರ, ಆದಿಶಕ್ತಿ ಪುರಾಣ ಸಮಿತಿ, ಅನ್ನದಾನೇಶ್ವರ ಭಜನಾ ಸಂಘ, ಗಜಾನನ ಯುವಕ ಸಂಘ, ಗ್ರಾಮದ ಸಕಲ ಸದ್ಭಕ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts