More

    ಸೇವೆ ಕಾಯಂಗೊಳಿಸಲು ಆಗ್ರಹ

    ಬೆಳಗಾವಿ: ಸೇವೆ ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ನೇತೃತ್ವದ ನೌಕರರು ಸೋಮವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ರಾಜ್ಯ ಸರ್ಕಾರಿ ಇಲಾಖೆಗಳಲ್ಲಿ, ನಿಗಮ-ಮಂಡಳಿಗಳಲ್ಲಿ, ಜಿಪಂಗಳಲ್ಲಿನ ಹೊರಗುತ್ತಿಗೆ ನೌಕರರ ನೇಮಿಸುವ ಪದ್ಧತಿ ಸಂಪೂರ್ಣ ರದ್ದುಪಡಿಸಬೇಕು. ಜತೆಗೆ ಹೊರಗುತ್ತಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಕಾಯಂಗೊಳಿಸಬೇಕು. ಕಾಯಂ ನೌಕರರಂತೆ ಸಮಾನ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ವೇತನ, ಸೌಲಭ್ಯಗಳನ್ನೂ ಕಲ್ಪಿಸುವ ಕಾನೂನು ಎಲ್ಲ ಕಡೆ ಜಾರಿಯಲ್ಲಿದೆ. ಆದರೆ, ಕರ್ನಾಟಕದಲ್ಲಿ ಜಾರಿಗೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹೊರಗುತ್ತಿಗೆ ಕೈಬಿಡಿ: ಬಿಸಿಎಂ ಹಾಸ್ಟೆಲ್‌ಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 4000 ನೌಕರರನ್ನು ಕೆಲಸದಿಂದ ತೆಗೆಯುವಂತೆ ಇಲಾಖೆ ಆದೇಶ ನೀಡಿರುವುದು ಸರಿಯಲ್ಲ. ತಕ್ಷಣದಿಂದಲೇ ಸೇವೆ ವಿಸ್ತರಿಸಲು ಕ್ರಮ ಜರುಗಿಸಬೇಕು. ಜತೆಗೆ ಹೊರಗುತ್ತಿಗೆ ನೌಕರರು ನಿರ್ವಹಿಸುತ್ತಿರುವ ಕೆಲಸದಲ್ಲಿಯೇ ಅವರನ್ನು ಕಾಯಂಗೊಳಿಸಬೇಕು. ಹೊರಗುತ್ತಿಗೆ ನೇರ ನೇಮಕಾತಿ ತಕ್ಷಣದಿಂದಲೇ ಕೈಬಿಡಬೇಕು ಎಂದು ಆಗ್ರಹಿಸಿದರು. ಮಂಡಳದ ಅಧ್ಯಕ್ಷ ಕೆ.ಎಸ್. ಶರ್ಮಾ, ಎಸ್.ಕೆ. ಮಾದರ, ಮಾರುತಿ ಎನ್., ಲಕ್ಷ್ಮಣ, ಶಿವಪ್ಪ ಎಂ.ಎಸ್. ಇತರರು ಇದ್ದರು.

    ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಿ

    ಅರ್ಹ ದಿನಗೂಲಿ ನೌಕರರಿಗೆ ಅನುಕಂಪ ಆಧಾರದ ನೌಕರಿ ಸೌಲಭ್ಯ ವಿಸ್ತರಿಸಬೇಕು. ಇದು ಪೂರ್ವಾನ್ವಯವಾಗಬೇಕು. ಈ ಸೌಲಭ್ಯ ಕಾಯಂ ನೌಕರರಿಗೆ ಇದೆ. ಇದರಿಂದ ಅಧಿಸೂಚಿಸಿದ ಕ್ಷೇಮಾಭಿವೃದ್ಧಿ ನೌಕರರು ವಂಚಿತರಾಗಬಾರದು. ದಿನಗೂಲಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳು ಹೊರಗುತ್ತಿಗೆ ನೌಕರರಿಗೆ ಸಿಗಬೇಕು ಎಂದು ಮನವಿ
    ಮೂಲಕ ವಿನಂತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts