More

    ಅಮೆರಿಕದ ಕಂಪನಿಗಿಂತ ಹತ್ತು ಪಟ್ಟು ಕಡಿಮೆ ಬೆಲೆಗೆ ಕರೊನಾ ಲಸಿಕೆ ನೀಡಲಿದೆ ಭಾರತೀಯ ಸಂಸ್ಥೆ

    ನವದೆಹಲಿ: ಕರೊನಾ ಸಂಶೋಧನೆಯಲ್ಲಿ ಬಹುತೇಕ ಕಂಪನಿಗಳು ಅಂತಿಮ ಹಂತದ ಪ್ರಕ್ರಿಯೆಯಲ್ಲಿವೆ. ಮಾನವರ ಮೇಲಿನ ಪ್ರಯೋಗದಲ್ಲಿ ಮೂರನೇ ಹಂತದಲ್ಲಿದ್ದು, ವರ್ಷಾಂತ್ಯಕ್ಕೆ ಹತ್ತಾರು ಕಂಪನಿಗಳ ಲಸಿಕೆ ಮಾರುಕಟ್ಟೆಯಲ್ಲಿ ಇರಲಿವೆ.

    ಕೆಲ ಸಂಸ್ಥೆಗಳು ಆಯಾ ದೇಶಗಳ ಪೂರ್ಣ ಆರ್ಥಿಕ ಸಹಕಾರದಲ್ಲಿ ಸಂಶೋಧನೆ ನಡೆಸುತ್ತಿವೆ. ಹೀಗಾಗಿ ಅಂಥ ದೇಶಗಳಿಗೆ ಕಡಿಮೆ ಬೆಲೆಯಲ್ಲಿ ಲಸಿಕೆ ನೀಡಿದರೂ ಉಳಿದ ದೇಶಗಳು ಹೆಚ್ಚಿನ ಬೆಲೆ ನೀಡಲೇಬೇಕಾಗುತ್ತದೆ.

    ಇದನ್ನೂ ಓದಿ; ಪಾಮಿರ್​ ಪರ್ವತ ಶ್ರೇಣಿಯೆಲ್ಲ ತನ್ನದೇ..! ಚೀನಾ ವಿಸ್ತರಣಾ ದಾಹಕ್ಕೆ ಕೊನೆಯೇ ಇಲ್ಲ; ತಜಕಿಸ್ತಾನ್​ಗೆ ಆತಂಕ 

    ಅಮೆರಿಕದ ಮಾಡೆರ್ನಾ ಕಂಪನಿ ಕರೊನಾ ಲಸಿಕೆ ಬೆಲೆಯನ್ನು 2,400 ರೂ.ಗಳಿಂದ 2,800 ರೂ.ವರೆಗೆ ನಿಗದಿ ಪಡಿಸಿದೆ. ಆದರೆ, ಭಾರತದ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಇದರ ಹತ್ತುಪಟ್ಟಿಗಿಂತಲೂ ಕಡಿಮೆ ಬೆಲೆಗೆ ಲಸಿಕೆಯನ್ನು ಉತ್ಪಾದಿಸಿ ನೀಡಲಿದೆ.

    ಜಗತ್ತಿನಲ್ಲಿಯೇ ಅತಿದೊಡ್ಡ ಲಸಿಕೆ ಉತ್ಪಾದನಾ ಘಟಕ ಎನಿಸಿರುವ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾಗೆ ಬಿಲ್​ ಆ್ಯಂಡ್​ ಮೆಲಿಂಡಾ ಗೇಟ್​ ಪ್ರತಿಷ್ಠಾನದಿಂದ ಭಾರಿ ಪ್ರಮಾಣದ ಹಣಕಾಸು ನೆರವು ದೊರೆಯುತ್ತಿದೆ. ಈ ಕಾರಣಕ್ಕಾಗಿ ಪ್ರತಿ ಡೋಸ್​ಗೆ 225 ರೂ. ದರದಲ್ಲಿ (ಅಂದಾಜು 3 ಡಾಲರ್​) ಭಾರತ ಹಾಗೂ ಆರ್ಥಿಕವಾಗಿ ಹಿಂದುಳಿದ 100 ದೇಶಗಳಿಗೆ ಕರೊನಾ ಲಸಿಕೆ ಪೂರೈಸಲಿದೆ.

    ಇದನ್ನೂ ಓದಿ; ಗುಜರಾತ್​ನ ಜುನಾಗಢ್​ ತನ್ನದೆನ್ನಲು ಪಾಕಿಸ್ತಾನಕ್ಕೆ ಧೈರ್ಯ ನೀಡಿದ್ದು ಈ ವಿದ್ಯಮಾನ; ಜನರೇ ಬುದ್ಧಿ ಕಲಿಸಿದ್ದು ಹೇಗೆ? 

    ಸಿರಂ ಇನ್​ಸ್ಟಿಟ್ಯೂಟ್​ ಲಸಿಕೆ ಬೆಲೆ ಭಾರತದಲ್ಲಿ 1,000 ರೂ.ಗಳಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಗೇಟ್ಸ್ ಪ್ರತಿಷ್ಠಾನದ ನೆರವು ಈ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಿದಂತಾಗಿದೆ. ಅಂದಾಜು 10 ಕೋಟಿ ಡೋಸ್​ ಲಸಿಕೆಯನ್ನು ಈ ಬೆಲೆಯಲ್ಲಿ ನೀಡಲಿದೆ.

    ಕರೊನಾ ಲಸಿಕೆ ಬೆಲೆ ನಿಗದಿ ಪಡಿಸಿದ ಅಮೆರಿಕದ ಮಾಡೆರ್ನಾ; ಬಡವರು ಕೊಳ್ಳೋದು ಕಷ್ಟ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts