More

    ಅಲ್ಲಿಗೆ ಹೋಗಬೇಕು ಎಂದರೆ, ಹೋಗಲೇ ಬೇಕು: ಅದಕ್ಕೇ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು..!

    ಮ್ಯಾಸಚೂಸೆಟ್ಸ್: ನೀವು ಅಲ್ಲಿಗೆ ಹೋಗಬೇಕು ಎಂದರೆ, ಹೋಗಲೇ ಬೇಕು! ಇದೇ ಈ ಸುದ್ದಿಯ ಮುಖ್ಯಾಂಶ. ಪ್ರಕೃತಿ ಕರೆ ಎಂದರೆ ಹಾಗೆ, ಹೋಗಲೇಬೇಕು, ಅದೇನು ಹೇಳಿ ಕೇಳಿ ಬರುತ್ತದೆಯೇ?

    ಈಗಂತೂ ಯಾರೂ ಬಯಲಲ್ಲಿ, ಪೂದೆ ಹಿಂದೆ ಅಥವಾ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಮಾಡಲು ಇಷ್ಟ ಪಡುತ್ತಾರೆ ಹೇಳಿ. ಆದರೆ ಏನು ಮಾಡುವುದು ಕೆಲವೊಮ್ಮೆ ಹೀಗಾಗಿ ಬಿಡುತ್ತದೆ. ಹತ್ತಿರದಲ್ಲಿ ಎಲ್ಲೂ ಟಾಯ್ಲೆಟ್​ಗಳು ಇಲ್ಲದಾಗ ಬಂದು ಬಿಡುತ್ತದೆ. ಪ್ರಕೃತಿ ಕರೆಗೆ ಓಗೊಡಲೇಬೇಕಲ್ಲ.

    ಇಂಗ್ಲೆಂಡ್​ನ ಮ್ಯಾಸಚೂಸೆಟ್ಸ್ ನಿವಾಸಿ ಆ್ಯಂಡ್ರಿಯಾ ಗ್ರೊಸರ್​ ಎಂಬ 51 ವರ್ಷದ ಮಹಿಳೆಗೆ ಆಗಿದ್ದೇ ಇದು. ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಇಲ್ಲಿನ ಕ್ರೀಡಾ ವಸ್ತುಗಳು ದೊರೆಯುವ ಅಂಗಡಿಯ ವಾಹನ ನಿಲ್ಲಿಸುವ ಸ್ಥಳದಲ್ಲಿ ಆಕೆ ಮಲ ವಿಸರ್ಜನೆ ಮಾಡಿದ್ದೇ ಅಪರಾಧ ಎಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ನಾಟಿಕ್​ ಎಂಬ ಕ್ರೀಡಾ ವಸ್ತುಗಳ ಮಾರಾಟ ಮಳಿಗೆ ಮಾಲೀಕ ಹೆನ್ರಿ ಕೆನ್ನರ್​ ಎಂಬಾತ ಪೊಲೀಸರಿಗೆ ದೂರು ಕೊಟ್ಟವ. ಮೊದಲು ಪಾರ್ಕಿಂಗ್​ ಸ್ಥಳದಲ್ಲಿ ಅದನ್ನು ಕಂಡಾಗ ತಲೆಗೆ ಹಚ್ಚಿಕೊಂಡಿರಲಿಲ್ಲ. ನಂತರ ಇದೇ ಪುನಾರಾವರ್ತನೆಯಾಗಿದೆ. ಆದರೂ ಅದು ಯಾವುದೋ ಪ್ರಾಣಿಗಳದ್ದು ಇರಬೇಕು ಅಥವಾ ಬೇರೆ ಎಲ್ಲಿಂದಲೋ ಹರಿದು ಬಂದಿರಬೇಕು ಎಂದು ಸುಮ್ಮನಾಗಿದ್ದರು. ಆದರೆ ಯಾವಾಗ ಸ್ಥಳದಲ್ಲಿ ಟಾಯ್ಲೆಟ್​ ಪೇಪರ್​ ಮತ್ತು ಬಳಸಿದ ಪೇಪರ್​ ಕಂಡ ಮೇಲೆ ಆತನಿಗೆ ಮನವರಿಕೆಯಾಗಿದೆ.

    ದೂರು ಪಡೆದು ತನಿಖೆ ಕೈಗೊಂಡ ಪೊಲೀಸರು ಆ ಸ್ಥಳದಲ್ಲಿ ಕಾವಲನ್ನು ಹೆಚ್ಚಿಸಿದ್ದಾರೆ. ಈಗಲಾದರೂ ಅಪರಾಧಿ ಪತ್ತೆ ಸಾಧ್ಯ ಎನ್ನುವ ನಂಬಿಕೆ ಅವರದು. ನಂತರ ಗಸ್ತು ತಿರುಗುತ್ತಿದ್ದ ಅಧಿಕಾರಿಯೊಬ್ಬರು ರೆಡ್​ ಹ್ಯಾಂಡಾಗಿ ಆರೋಪಿಯನ್ನು ಹಿಡಿದಿದ್ದಾರೆ.

    ತನ್ನ ಕಾರನ್ನು ಚಲಾಯಿಸಿಕೊಂಡು ಆ ಸ್ಥಳಕ್ಕೆ ಬಂದ ಆಕೆ, ಕಾರಿನ ಬಾಗಿಲು ತೆರೆದು, ಪಾರ್ಕಿಂಗ್ ಸ್ಥಳದಲ್ಲಿ ಇಳಿದು ಮಲವಿಸರ್ಜನೆ ಮಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸ್​ ಪಕ್ಕನೆ ಹಿಡಿದಿದ್ದಾನೆ.

    ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆ್ಯಂಡ್ರಿಯಾ, ತನಗೆ ಸಣ್ಣ ಕರುಳಿನ ಸಮಸ್ಯೆ ಇರುವುದೇ ಈ ಅನಾಹುತಕ್ಕೆ ಕಾರಣ ಎಂದಿದ್ದಾಳೆ. ನಂತರ ಪೊಲೀಸರು ಜಾಮೀನು ಪಡೆಯದೇ ಆಕೆಯನ್ನು ಮನೆಗೆ ಕಳುಹಿಸಿದ್ದು, ಮಾರ್ಚ್​ 2ರಂದು ವಿಚಾರಣೆಗೆ ಕೋರ್ಟ್​ಗೆ ಬರಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts