More

    ಜೀತ ಪದ್ಧತಿ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ

    ಕೂಡ್ಲಿಗಿ: ಜೀತದಾಳುಗಳನ್ನು ಸಾಲಮುಕ್ತ ಮಾಡಿ, ಅವರಿಗೆ ಸೌಲಭ್ಯ ಒದಗಿಸಲು ಕಾನೂನುಗಳಲ್ಲಿ ಅವಕಾಶವಿದೆ. ಜೀತದಿಂದ ಮುಕ್ತರಾದವರಿಗೆ ಸರ್ಕಾರದ ಸೌಕರ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಸಿವಿಲ್ ನ್ಯಾಯಾಧೀಶೆ ಸಿ.ಮಹಾಲಕ್ಷ್ಮೀ ಹೇಳಿದರು.]

    ಪಟ್ಟಣದ ಕೋರ್ಟ್ ಆವರಣದಲ್ಲಿ ಶುಕ್ರವಾರ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆಡಳಿತ ಏರ್ಪಡಿಸಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೀತ ಪದ್ಧತಿ ರದ್ದತಿ ಕುರಿತು ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ಆಗ ಮಾತ್ರ ಇದನ್ನು ಪೂರ್ಣ ಪ್ರಮಾಣದಲ್ಲಿ ನಿಯಂತ್ರಣ ಮಾಡಲು ಸಾಧ್ಯ ಎಂದರು.

    ಇದನ್ನೂ ಓದಿ: ಸಂವಿಧಾನ ಜಾಗೃತಿ ಜಾಥ ರಥಕ್ಕೆ ಅದ್ದೂರಿ ಸ್ವಾಗತ, ಗಮನ ಸೆಳೆದ ಶಾಲಾ ಮಕ್ಕಳ ಸಂವಿಧಾನ ಜಾಗೃತಿ ನೃತ್ಯ

    ಜೀತ ಪದ್ಧತಿ ಹೋಗಲಾಡಿಸುವುದು ಒಬ್ಬರ ಕೆಲಸವಲ್ಲ, ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರದಿಂದ ಮಾತ್ರ ಸಾಧ್ಯ. ಜನರಲ್ಲಿ ಇಚ್ಛಾಶಕ್ತಿ ಇದ್ದರೆ ಜೀತ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗುತ್ತದೆ ಎಂದು ತಿಳಿಸಿದರು.

    ತಾಪಂ ಇಒ ವೈ.ರವಿಕುಮಾರ್, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಪಿಎಸ್‌ಐ ಎಂ.ಧನಂಜಯ, ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನ ಸ್ವಾಮಿ, ಉಪಾಧ್ಯಕ್ಷ ವೆಂಕಟೇಶ, ಪ್ಯಾನಲ್ ವಕೀಲ ಸಿ.ವಿರೂಪಾಕ್ಷಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts