More

    ಗ್ರಾಹಕರ ಹಕ್ಕುಗಳ ಜಾಗೃತಿ ಮೂಡಿಸಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸಮಾಜದಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಶಿವಶಂಕರ ಅಮರನ್ನವರ ಹೇಳಿದರು.

    ಕೆಎಲ್​ಇ ಸಂಸ್ಥೆಯ ಇಲ್ಲಿಯ ಜಿ.ಕೆ. ಕಾನೂನು ಮಹಾವಿದ್ಯಾಲಯ ಹಾಗೂ ಬೆಳಗಾವಿಯ ಕೆಎಲ್​ಇ ಕಾನೂನು ಅಕಾಡೆಮಿ ಸಹಯೋಗದೊಂದಿಗೆ ಭಾರತದಲ್ಲಿ ಗ್ರಾಹಕ ನ್ಯಾಯ: ಸಮಕಾಲೀನ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

    ರಾಂಚಿಯ ನ್ಯಾಷನಲ್ ಯುನಿವರ್ಸಿಟಿ ಆಫ್ ಸ್ಟಡಿ ಮತ್ತು ರಿಸರ್ಚ ಇನ್ ಲಾ ಕುಲಪತಿ ಡಾ. ಅಶೋಕ ಪಾಟೀಲ ಮಾತನಾಡಿ, ಗ್ರಾಹಕರ ಹಿತರಕ್ಷಣ ಕಾಯ್ದೆ-2019ರ ಅಡಿಯಲ್ಲಿ ಅಡಕವಾಗಿರುವ ವಿವಿಧ ವಿಷಯಗಳನ್ನು ರ್ಚಚಿಸಲು ಕರೆ ನೀಡಿದರು.

    ಕರ್ನಾಟಕ ರಾಜ್ಯ ಕಾನೂನು ವಿವಿಯ ಡಾ. ರಾಜೇಂದ್ರಕುಮಾರ ಹಿಟ್ಟಣಗಿ, ಕ್ರಿಯೇಟ್ ಎನ್​ಜಿಒ ಮುಖ್ಯಸ್ಥ ವೈ.ಜಿ. ಮುರಳೀಧರನ್, ಹೈಕೋರ್ಟ್ ವಕೀಲ ಡಾ. ಜಗದೀಶ ಹಾಲಶೆಟ್ಟಿ, ದಾವಣಗೆರೆ ಗ್ರಾಹಕರ ವ್ಯಾಜ್ಯಗಳ ಹಿತರಕ್ಷಣಾ ಆಯೋಗದ ಅಧ್ಯಕ್ಷ ಎಂ. ಐ. ಶಿಗ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. ವಿವಿಧ ಕಾನೂನು ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿ 18 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

    ಪ್ರಾಚಾರ್ಯ ಡಾ. ಜ್ಞಾನೇಶ್ವರ ಚೌರಿ ಅಧ್ಯಕ್ಷತೆ ವಹಿಸಿದ್ದರು. ರೋಹಿಣಿ ನರೇಂದ್ರ ಸ್ವಾಗತ ಗೀತೆ ಹಾಡಿದರು. ಡಾ. ಶಾರದಾ ಪಾಟೀಲ ಪರಿಚಯಿಸಿದರು. ಡಾ. ಸಂಜೀವ ಹುಲ್ಲೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts