More

    ಮತದಾರರ ಪಟ್ಟಿ ಪರಿಷ್ಕರಣೆ ಜಾಗೃತಿ ಮೂಡಿಸಿ: ವಿವಿಧ ಪಕ್ಷಗಳ ಮುಖಂಡರಿಗೆ ಡಿಸಿ ಸುಂದರೇಶ ಬಾಬು ಮನವಿ

    ಕೊಪ್ಪಳ: ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸಲು ಎಲ್ಲ ರಾಜಕೀಯ ಪಕ್ಷಗಳು ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮನವಿ ಮಾಡಿದರು.

    ಪಟ್ಟಿ ಪರಿಷ್ಕರಣೆ ನಿಮಿತ್ತ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಡನೆ ಸಭೆ ನಡೆಸಿ ಮಾತನಾಡಿದರು. ಬೂತ್ ಮಟ್ಟದ ಅಧಿಕಾರಿಗಳಿಗೆ ಸಹಕರಿಸಲು ಪಕ್ಷದಿಂದ ಬಿಎಲ್‌ಒಗಳನ್ನು ನೇಮಿಸಿ. ನಿಮಗೆ ಉಚಿತವಾಗಿ ನೀಡಿದ ಆಯಾ ಬೂತ್‌ನ ಮತದಾರರ ಪಟ್ಟಿಯನ್ನು ಅವರಿಗೆ ನೀಡಿ. ಮತದಾರರು ಯಾರಾದರೂ ಮರಣ ಹೊಂದಿದ್ದಲ್ಲಿ ಅಥವಾ ಸ್ಥಳಾಂತರವಾಗಿದ್ದರೆ, ಸೇರ್ಪಡೆಯಾಗದಿದ್ದಲ್ಲಿ ನಿಗದಿತ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ. ಈ ಬಗ್ಗೆ ಮತದಾರರಿಗೆ ತಿಳಿಸಿ. ಈ ಕಾರ್ಯದಲ್ಲಿ ಅಧಿಕಾರಿಗಳಿಗೆ ಅಗತ್ಯ ನೆರವು ನೀಡುವಂತೆ ತಿಳಿಸಿದರು.

    ಎಡಿಸಿ ಸಾವಿತ್ರಿ ಬಿ.ಕಡಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅಂತಿಮ ಕರಡು ಪಟ್ಟಿಯನ್ನು ಡಿ.26ರಂದು ಪ್ರಕಟಿಸಲಿದ್ದು, 2023ರ ಜನವರಿ 5ರೊಳಗೆ ಅಂತಿಮಗೊಳಿಸಲಾಗುವುದು. ನಿಯಮದಂತೆ ಜಿಲ್ಲೆಯಲ್ಲಿ 1307 ಮತ ಕೇಂದ್ರಗಳ ಜತೆಗೆ ಹೆಚ್ಚುವರಿಯಾಗಿ 15 ಸ್ಥಾಪಿಸಲಾಗಿದೆ. ಆನ್‌ಲೈನ್ ಮೂಲಕ ಸಾಧ್ಯವಾದಷ್ಟು ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡಬೇಕು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಮತದಾರರ ಪಟ್ಟಿ ಪರಿಷ್ಕರಣೆಗೆ ಸಕ್ರಿಯವಾಗಿ ಭಾಗವಹಿಸಲು ಬಿಎಲ್‌ಒಗಳನ್ನು ನೇಮಿಸಬಹುದು. ಪಕ್ಷದ ಅಧ್ಯಕ್ಷ ಅಥವಾ ಕಾರ್ಯದರ್ಶಿ ಪತ್ರದ ಮೂಲಕ ನೇಮಕ ಮಾಡಬಹುದು. ಆಯಾ ವಿಧಾನಸಭಾ ಕ್ಷೇತ್ರವಾರು ನ.16ರೊಳಗೆ ಬಿಎಲ್‌ಒಗಳ ಪಟ್ಟಿ ನೀಡುವಂತೆ ಸೂಚಿಸಿದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ರಾಜು ಬಾಕಳೆ, ಕೃಷ್ಣ ಇಟ್ಟಂಗಿ, ರಮೇಶ ನಾಡಗೇರ, ಮಂಜುನಾಥ ಸೊರಟೂರು, ಮೆಹಬೂಬ್ ಖಾನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts