More

    ಸಂವಿಧಾನ ಜಾಗೃತಿ ಜಾಥ ರಥಕ್ಕೆ ಅದ್ದೂರಿ ಸ್ವಾಗತ, ಗಮನ ಸೆಳೆದ ಶಾಲಾ ಮಕ್ಕಳ ಸಂವಿಧಾನ ಜಾಗೃತಿ ನೃತ್ಯ

    ಲಕ್ಕುಂಡಿ: ಭಾರತದ ಸಂವಿಧಾನ ಅಂಗೀಕಾರವಾಗಿ ೭೫ ವರ್ಷ ತುಂಬಿದ ಸಂಭ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆಯ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥ ರಥವನ್ನು ಗ್ರಾಮ ಪಂಚಾಯತ ನೇತೃತ್ವದಲ್ಲಿ ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.
    ಸAವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ರಥಕ್ಕೆ ಗ್ರಾಮ ಪಂಚಾಯತ ಅಧ್ಯಕ್ಷ ಕೆ.ಎಸ್.ಪೂಜಾರ ಅವರು ಹೂಮಾಲೆ ನಮನ ಸಲ್ಲಿಸಿ ಸ್ವಾಗತಿಸಿದರು. ಮುತೈದೆಯರು ಆರತಿ ಬೆಳಗಿ ನಮನ ಸಲ್ಲಿಸಿದರು.ಬಿ.ಆರ್. ಅಂಬೇಡ್ಕರ ನಗರದಿಂದ ಆರಂಭವಾದ ರಥದ ಮೆರವಣಿಗೆಯು ಅತ್ತಿಮಬ್ಬೆ ಮಹಾದ್ವಾರದ ಮೂಲಕ ಗ್ರಾಮ ಪಂಚಾಯತಿಯನ್ನು ತಲುಪಿತು. ಮೆರವಣಿಗೆಯಲ್ಲಿ ಬಾಲಕಿಯರ ಡೊಳ್ಳು ಕುಣಿತ, ಶಾಲಾ ಮಕ್ಕಳ ಲೇಜಿಮ್ ನೃತ್ಯವು ಗಮನ ಸೆಳೆಯಿತು. ನೂರಾರು ಯುವಕರು ಪಾಲ್ಗೊಂಡ ಮೆರವಣಿಗೆಯಲ್ಲಿ ಡಾ. ಅಂಬೇಡ್ಕರ ಅವರಿಗೆ ಜೈ ಘೋಷಗಳು ಮೊಳಗಿದವು. ಗ್ರಾಮ ಪಂಚಾಯತ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ದರು.

    ಡಾ. ಬಿ.ಆರ್. ಅಂಬೇಡ್ಕರ ಅವರು ಹಲವಾರು ದೇಶಗಳ ಸುತ್ತಿ ಎಲ್ಲರನ್ನು ಸಮಾನವಾಗಿ ಕಾಣುವಂತಹ ಸಂವಿಧಾನವು ನಮಗೆಲ್ಲಾ ಸ್ಪೂರ್ತಿಯಾಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ಕೆ.ಎಸ್.ಪೂಜಾರ ಹೇಳಿದರು. ಗ್ರಾಮ ಪಂಚಾಯತಿ ಆಶ್ರಯದಲ್ಲಿ ನಡೆದ ಸಂವಿಧಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂಬೇಡ್ಕರ ಅವರು ತಮ್ಮ ಮನೆಯ ವೈಯಕ್ತಿಕ ಸಮಸ್ಯೆಯಿದ್ದರೂ ಸಹ ಭಾರತಾಂಭೆಯ ಮಕ್ಕಳಿಗೆ ಉತ್ತಮ ಸಂವಿಧಾನವನ್ನು ನೀಡಬೇಕು ಎಂಬ ಸಂಕಲ್ಪ ತೊಟ್ಟು ಸಂವಿಧಾನವನ್ನು ರಚಿಸಿದ್ದಾರೆ.ಈ ಸಂವಿಧಾನದಿAದ ಇಂದು ಬಡವ,ಬಲಿದ, ಕೆಳವರ್ಗ, ಮೇಲ್ವರ್ಗ ಎಂಬ ತಾರತಮ್ಯವನ್ನು ಹೋಗಲಾಡಿಸಿ ಎಲ್ಲರನ್ನು ಸಮಾನರಾಗಿ ಕಾಣುವ ಬಾಗ್ಯ ಬಂದಿದೆ.ಎಲ್ಲ ಕ್ಷೇತ್ರಗಳಲ್ಲೂ ಎಲ್ಲರಿಗೂ ಸಮಾನವಾದ ಅವಕಾಶಗಳು ದೊರೆಯುತ್ತಿವೆ.೭೫ ವರ್ಷ ತುಂಬಿದ ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಮಹತ್ವ ಅರಿತುಕೊಳ್ಳಲು ಸರಕಾರ ಜಾಗೃತಿ ಮೂಡಿಸುತ್ತಿರುವುದು ಸ್ವಾಗತಾರ್ಯ ಎಂದರು.
    ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ನಡುವಿನಮನಿ ಅವರು ಮಾತನಾಡಿ ೬೦ ದೇಶಗಳ ಸಂವಿಧಾನವನ್ನು ಓದಿ ಅತ್ಯಂತ ಉತ್ಕೃಷ್ಠವಾದ ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. ಇದರಿಂದ ನಾವೆಲ್ಲರೂ ಸಮಾನವಾಗಿ ಬದುಕುತ್ತಿದ್ದೇವೆ.ನಿವೃತ್ತ ನ್ಯಾಯಮೂರ್ತಿ ನಾಗಮೂಹನದಾಸ ಅವರು ೨೦೧೮ ರಲ್ಲಿ ಸಂವಿಧಾನ ಸಂಕ್ಷಿಪ್ತ ಓದು ಎಂಬ ಪುಸ್ತಕವನ್ನು ಬರೆದಿದ್ದು ಅದರಲ್ಲಿ ಗರ್ಭದಲ್ಲಿರುವ ಭ್ರೂಣದಿಂದ ವೃದ್ಧರವರೆಗೂ ಈ ದೇಶದಲ್ಲಿ ಹಲವಾರು ಸಮಾನತೆಯ ಅವಕಾಶಗಳನ್ನು ಕೊಟ್ಟಿದ್ದು ೬೦ ಸಲ ಮರು ಮುದ್ರಣವನ್ನು ಕಂಡಿರುವ ಈ ಪುಸ್ತಕವನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಮತ್ತು ಸಂವಿಧಾನದ ಪುಸ್ತಕವನ್ನು ಇಂದು ನಾವೆಲ್ಲರೂ ದಿನ ನಿತ್ಯ ಪೂಜೆ ಮಾಡಬೇಕು ಎಂದು ವಿನಂತಿಸಿಕೊAಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts