More

    ಸೆನ್ಸೆಕ್ಸ್ 580 ಅಂಶ ಕುಸಿತ, ನಿಫ್ಟಿ 12,800ಕ್ಕಿಂತ ಕೆಳಕ್ಕೆ..

    ಮುಂಬೈ: ಸತತ ಏರುಗತಿಯಲ್ಲಿ ಸಾಗುತ್ತ ಮೂರು ದಿನಗಳಿಂದ ಹೊಸ ಹೊಸ ಸಾರ್ವಕಾಲಿಕ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಷೇರುಪೇಟೆಯ ಸೂಚ್ಯಂಕಗಳು ಇಂದು ಇಳಿಮುಖ ಕಂಡಿವೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ 580 ಅಂಶ ಕುಸಿದರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 12,800 ಅಂಶದಿಂದಲೂ ಕೆಳಕ್ಕೆ ಕುಸಿತ ಕಂಡಿದೆ.

    ಬೆಳಗ್ಗೆ ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್​ ಇಂದು ಕೂಡ ಸಾರ್ವಕಾಲಿಕ ಎತ್ತರಕ್ಕೆ ಅಂದರೆ 44,230 ಅಂಶ ತಲುಪಿತ್ತು. ಆದರೆ, ದಿನದ ಅಂತ್ಯದಲ್ಲಿ 580.09 ಅಂಶ (1.31%) ನಷ್ಟ ಅನುಭವಿಸಿದ್ದು, 43,599.96 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇದೇ ರೀತಿ ನಿಫ್ಟಿ ಕೂಡ ಇಂಟ್ರಾ ಡೇ ವಹಿವಾಟಿನಲ್ಲಿ ಗರಿಷ್ಠ 12,963 ಅಂಶಕ್ಕೇರಿ ಕೊನೆಗೆ ದಿನದ ಅಂತ್ಯದಲ್ಲಿ 166.55 ಅಂಶ (1.29%) ನಷ್ಟ ಅನುಭವಿಸಿದ್ದು, 12,771.70 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ.

    ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ನಾಗರಾಜ್ ಪುತ್ರಿ ಲಾವಣ್ಯ ಜತೆ ಎಂಎಲ್ಸಿ ಆಯನೂರು ಮಂಜುನಾಥ್ ಪುತ್ರನ ನಿಶ್ಚಿತಾರ್ಥ

    ಸೆನ್ಸೆಕ್ಸ್ ಪಟ್ಟಿಯಲ್ಲಿ ಎಸ್​ಬಿಐ ಷೇರು ಗರಿಷ್ಠ ಶೇಕಡ 5 ನಷ್ಟ ಅನುಭವಿಸಿದೆ. ಏಕ್ಸಿಸ್ ಬ್ಯಾಂಕ್​, ಐಸಿಐಸಿಐ ಬ್ಯಾಂಕ್​, ಅಲ್ಟ್ರಾಟೆಕ್​ ಸಿಮೆಂಟ್​, ಬಜಾಜ್​ ಪೈನಾನ್ಸ್, ಎಚ್​ಡಿಎಫ್​ಸಿ ಬ್ಯಾಂಕ್, ಭಾರ್ತಿ ಏರ್​ಟೆಲ್​ ಷೇರುಗಳು ನಷ್ಟ ಕಂಡಿವೆ. ಇನ್ನೊಂದೆಡೆ, ಪವರ್​ ಗ್ರಿಡ್​, ಐಟಿಸಿ, ಎನ್​ಟಿಪಿಸಿ, ಟಾಟಾ ಸ್ಟೀಲ್​, ಟೈಟಾನ್ ಷೇರುಗಳು ಲಾಭಗಳಿಸಿವೆ. (ಏಜೆನ್ಸೀಸ್)

    ಲಂಚಗುಳಿತನ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 77ನೇ ಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts