More

    ಸೆನ್ಸೆಕ್ಸ್ 120ಕ್ಕೂ ಹೆಚ್ಚು ಅಂಶ ಏರಿಕೆ, 13,000 ಗಡಿ ದಾಟಿದ ನಿಫ್ಟಿ

    ಮುಂಬೈ: ಷೇರುಪೇಟೆ ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಮತ್ತು ಎನ್​ಎಸ್​ಇ ನಿಫ್ಟಿಗಳು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಲಾಭಾಂಶ ದಾಖಲಿಸಿವೆ. ಸೆನ್ಸೆಕ್ಸ್ 120ಕ್ಕೂ ಹೆಚ್ಚು ಅಂಶ ಏರಿಕೆ ದಾಖಲಿಸಿದರೆ, ನಿಫ್ಟಿ 13,000 ದ ಗಡಿ ದಾಟಿದೆ. ಉತ್ತಮ ಜಿಡಿಪಿ ಡೇಟಾ ನಿರೀಕ್ಷೆ ಮತ್ತು ವಿದೇಶಿ ಬಂಡವಾಳದ ಒಳಹರಿವಿನ ಪ್ರಮಾಣ ಹೆಚ್ಚಾದ ಕಾರಣ ಈ ಏರಿಕೆ ಕಂಡುಬಂದಿದೆ.

    ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 126.62 ಅಂಶ ಏರಿದ್ದು 44,276.34 ಅಂಶದಲ್ಲಿ ವಹಿವಾಟು ನಡೆಸಿದೆ. ಇದೇ ವೇಳೆ, ನಿಫ್ಟಿ 32.45 ಅಂಶ ಏರಿ 13,001.40 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಸ್​ನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಷೇರು ಶೇಕಡ 2.5 ಏರಿಕೆಯೊಂದಿಗೆ ವಹಿವಾಟು ಮುಂದುವರಿಸಿದರೆ, ಇನ್​ಫೋಸಿಸ್​, ಸನ್​ಫಾರ್ಮಾ, ಬಜಾಜ್ ಆಟೋ, ಎಚ್​ಡಿಎಫ್​ಸಿ ಷೇರುಗಳು ಲಾಭಾಂಶದಲ್ಲಿ ವಹಿವಾಟು ನಡೆಸಿವೆ.

    ಇದನ್ನೂ ಓದಿ: ಕ್ರಾಂತಿಕಾರಿ ಬದಲಾವಣೆಗೆ ಸರ್ಕಾರ ಸನ್ನದ್ಧ: ಶಿಕ್ಷಣ ನೀತಿಯಲ್ಲಿ ಸಮಾನತೆ ಉತ್ತೇಜನ

    ಇನ್ನೊಂದೆಡೆ, ಒಎನ್​ಜಿಸಿ, ಎಂಆ್ಯಂಡ್ಎಂ, ನೆಸ್ಟ್ಲೆ ಇಂಡಿಯ, ಏಕ್ಸಿಸ್ ಬ್ಯಾಂಕ್​ ಮತ್ತು ಎಚ್​ಡಿಎಫ್​ಸಿ ಷೇರು ನಷ್ಟ ಅನುಭವಿಸಿವೆ. ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 110.2 ಅಂಶ ಇಳಿಕೆಯೊಂದಿಗೆ 44,149.72ರಲ್ಲಿ ಹಾಗೂ ನಿಫ್ಟಿ 18.05 ಅಂಶ ಇಳಿಕೆಯೊಂದಿಗೆ 12,9689.95 ಅಂಶದಲ್ಲಿ ದಿನದ ವಹಿವಾಟು ಮುಗಿಸಿದ್ದವು. (ಏಜೆನ್ಸೀಸ್)

    ಪುರುಷರೆಲ್ಲರೂ ಧರ್ಮ, ಉದ್ಯೋಗ, ಆದಾಯ ಘೋಷಿಸಿ ಮದುವೆ ಮಾತುಕತೆ ಮುಂದುವರಿಸಿ – ಅಸ್ಸಾಂ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts