More

    46,000 ದಾಟಿದ ಸೆನ್ಸೆಕ್ಸ್; 13,500 ದಾಟಿತು ನಿಫ್ಟಿ

    ಮುಂಬೈ: ಭಾರತೀಯ ಷೇರು ಸೂಚ್ಯಂಕಗಳಾದ ಬಿಎಸ್​ಇ ಸೆನ್ಸೆಕ್ಸ್ ಇದೇ ಮೊದಲ ಬಾರಿ 46,000ದ ಗಡಿದಾಟಿದರೆ, ನಿಫ್ಟಿ 13,500ರ ಮೇಲಕ್ಕೇರಿ ಬುಧವಾರದ ವಹಿವಾಟಿನಲ್ಲಿ ಮತ್ತೊಂದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಜಾಗತಿಕ ಮಾರುಕಟ್ಟೆಯ ಧನಾತ್ಮಕ ಬೆಳವಣಿಗೆ ಮತ್ತು ಸ್ಥಿರವಾದ ವಿದೇಶಿ ಬಂಡವಾಳದ ಒಳಹರಿಯುವಿಕೆಯ ಕಾರಣ ಈ ಏರಿಕೆ ಉಂಟಾಗಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

    ಬುಧವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 46,164.10 ಅಂಶ ತಲುಪಿದ್ದು, ದಿನದ ಕೊನೆಗೆ 494.99 ಅಂಶ ಏರಿಕೆಯೊಂದಿಗೆ 46,103.50 ಅಂಶದಲ್ಲಿ ವಹಿವಾಟು ಕೊನೆಗೊಳಿಸಿದೆ. ಇದೇ ರೀತಿ, ನಿಫ್ಟಿ ಇಂಟ್ರಾಡೇ ವಹಿವಾಟಿನಲ್ಲಿ 13,548.90 ಅಂಶ ತಲುಪಿದ್ದು, ದಿನದ ಅಂತ್ಯಕ್ಕೆ 136.15 ಅಂಶ ಏರಿಕೆಯೊಂದಿಗೆ 13,529.10 ಅಂಶದಲ್ಲಿ ವಹಿವಾಟು ಮುಗಿಸಿದೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧ ವಿಧೇಯಕದಲ್ಲಿವೆ ಈ 25 ಕಠಿಣಾತಿಕಠಿಣ ನಿಯಮಗಳು!

    ಸೆನ್ಸೆಕ್ಸ್​ನಲ್ಲಿ ಏಷ್ಯನ್ ಪೇಂಟ್ಸ್​ ಗರಿಷ್ಠ ಶೇಕಡ 3 ಲಾಭ ಗಿಟ್ಟಿಸಿಕೊಂಡರೆ, ಕೊಟಾಕ್​ ಬ್ಯಾಂಕ್​, ಏಕ್ಸಿಸ್ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಇನ್​ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್​, ಐಟಿಸಿ ಷೇರುಗಳು ಲಾಭ ಗಿಟ್ಟಿಸಿಕೊಂಡಿವೆ. ಇನ್ನೊಂದೆಡೆ ಅಲ್ಟ್ರಾಟೆಕ್ ಸಿಮೆಂಟ್​, ಟಾಟಾ ಸ್ಟೀಲ್, ಮಾರುತಿ, ಎಸ್​ಬಿಐ, ಬಜಾಜ್ ಆಟೋ ಕಂಪನಿ ಷೇರುಗಳು ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಯಾವೆಲ್ಲ ಉದ್ಯೋಗಿಗಳ ಇಪಿಎಫ್ ಅನ್ನು ಕೇಂದ್ರ ಸರ್ಕಾರ ಭರಿಸಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts