More

    ಷೇರುಪೇಟೆಯಲ್ಲಿ ಮಹಾಪತನದ ಶಾಕ್​ : ಸೆನ್ಸೆಕ್ಸ್ 2,713 ಅಂಶ ಕುಸಿತ, 9,200ರ ಕೆಳಕ್ಕೆ ಕುಸಿದ ನಿಫ್ಟಿ

    ಮುಂಬೈ: ಕರೊನಾ ವೈರಸ್​ Covid19 ಸೋಂಕು ಜಗತ್ತನ್ನು ವ್ಯಾಪಿಸಿದ್ದು, ಅರ್ಥವ್ಯವಸ್ಥೆ ತಲ್ಲಣಕ್ಕೆ ಒಳಗಾಗತೊಡಗಿದೆ. ಪರಿಣಾಮ, ಷೇರುಪೇಟೆಯಲ್ಲಿ ಮಹಾಪತನ ಶುರುವಾಗಿದ್ದು, ಸೋಮವಾರದ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​(ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್​ 2,700ಕ್ಕೂ ಹೆಚ್ಚು ಅಂಶ ಕುಸಿತ ಕಂಡರೆ, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ 9,200ರ ಕೆಳಕ್ಕೆ ಕುಸಿದಿದೆ.

    ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಪತ್ರಿಕಾಗೋಷ್ಠಿ ಕುರಿತ ಸುದ್ದಿ ಹೆಚ್ಚು ಸದ್ದುಮಾಡಿದ ಕಾರಣ, ಬಡ್ಡಿದರ ಇಳಿಕೆ ವಿಚಾರ ಹೆಚ್ಚು ಚರ್ಚೆಗೆ ಬಂದಿತ್ತು. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್​ 2,713.41 ಅಂಶ ಕುಸಿದು 31,390.07ರಲ್ಲೂ, ನಿಫ್ಟಿ 757.80 ಅಂಶ ಕುಸಿದು 9,197.40 ಅಂಶದಲ್ಲಿ ವಹಿವಾಟು ಮುಗಿಸಿವೆ.

    ಸೆನ್ಸೆಕ್ಸ್ ಪಟ್ಟಿಯಲ್ಲಿನ ಎಲ್ಲ ಷೇರುಗಳೂ ನಷ್ಟದಲ್ಲೆ ವಹಿವಾಟು ಮುಗಿಸಿವೆ. ಇಂಡಸ್​ಇಂಡ್ ಬ್ಯಾಂಕ್​ ಗರಿಷ್ಠ ನಷ್ಟ ಅನುಭವಿಸಿದ್ದು, ಟಾಟಾ ಸ್ಟೀಲ್​, ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​, ಏಕ್ಸಿಸ್​ ಬ್ಯಾಂಕ್​, ಇನ್​ಫೋಸಿಸ್​ ಮತ್ತು ಐಟಿಸಿ ಕಂಪನಿಗಳ ಷೇರುಗಳು ಕೂಡ ನಷ್ಟ ಅನುಭವಿಸಿವೆ.

    ಏಷ್ಯಾದಲ್ಲಿನ ಷೇರುಪೇಟೆಗಳ ಪೈಕಿ ಶಾಂಘೈ ಶೇಕಡ 3.4, ಹಾಂಕಾಂಗ್​ ಶೇಕಡ 4.03, ಸಿಯೋಲ್​ ಶೇಕಡ 3.19, ಟೋಕಿಯೋ ಶೇಕಡ 2.46 ಅಂಶ ನಷ್ಟ ಅನುಭವಿಸಿವೆ. ಯುರೋಪ್​ನ ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಶೇಕಡ 8 ನಷ್ಟ ಅನುಭವಿಸಿದೆ. (ಏಜೆನ್ಸೀಸ್) 

     

    ಯೆಸ್ ಬ್ಯಾಂಕ್​ ಪುನಶ್ಚೇತನಕ್ಕೆ ಹರಿದು ಬರುತ್ತಿದೆ ಬಂಡವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts