More

    ಇತಿಹಾಸ ಸೃಷ್ಟಿಸಿದ ಸೆನ್ಸೆಕ್ಸ್,ನಿಫ್ಟಿ – ಒಂದೇ ವಾರದಲ್ಲಿ 60ಕ್ಕೂ ಅಧಿಕ ಷೇರುಗಳ ಮೌಲ್ಯ ಶೇಕಡ 10-50 ಏರಿಕೆ

    ಮುಂಬೈ: ಭಾರತದ ಷೇರುಪೇಟೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಕಳೆದ ಒಂದು ವಾರದ ಅವಧಿಯಲ್ಲಿ 60ಕ್ಕೂ ಹೆಚ್ಚು ಕಂಪನಿಗಳ ಷೇರುಗಳ ಮೌಲ್ಯ ಶೇಕಡ 10ರಿಂದ ಶೇಕಡ 50ರ ತನಕ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 45,000ದ ಗಡಿ ದಾಟಿದರೆ, ನಿಫ್ಟಿ 13,100-13,200ರ ಮಟ್ಟದಲ್ಲಿ ವಹಿವಾಟು ನಡೆಸಿದೆ.

    ಡಿಸೆಂಬರ್ ನಾಲ್ಕಕ್ಕೆ ಅಂತ್ಯಗೊಂಡ ವಾರದ ವಹಿವಾಟಿನಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಶೇಕಡ 2.1 ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (ಎನ್ಎಸ್​ಇ) ಸೂಚ್ಯಂಕ ನಿಫ್ಟಿ50 ಶೇಕಡ 2.2 ಏರಿಕೆ ದಾಖಲಿಸಿವೆ. ಬಿಎಸ್​ಇ ಮಿಡ್​-ಕ್ಯಾಪ್​ ಸೂಚ್ಯಂಕ ಶೇಕಡ 2.8 ಏರಿಕೆ ದಾಖಲಿಸಿದರೆ, ಬಿಎಸ್​ಇ ಸ್ಮಾಲ್​ ಕ್ಯಾಪ್ ಇಂಡೆಕ್ಸ್ ಶೇಕಡ 2.6 ಏರಿಕೆ ಕಂಡಿದೆ.

    ಇತಿಹಾಸ ಸೃಷ್ಟಿಸಿದ ಸೆನ್ಸೆಕ್ಸ್,ನಿಫ್ಟಿ - ಒಂದೇ ವಾರದಲ್ಲಿ 60ಕ್ಕೂ ಅಧಿಕ ಷೇರುಗಳ ಮೌಲ್ಯ ಶೇಕಡ 10-50 ಏರಿಕೆ

    ಇದನ್ನೂ ಓದಿ:  ಯಾರು ಬೇಕಾದ್ರೂ ಪಕ್ಷ ಬಿಟ್ಟು ತೊಲಗಿ- ಹೋಗುವಾಗ ನನ್ನ ಸಾವಿಗೆ ಪ್ರಾರ್ಥಿಸಿ ಎಂದ ಮಮತಾ!

    ಬಿಎಸ್​ಇ500ರ 65 ಕಂಪನಿಗಳ ಷೇರುಗಳು ಕೇವಲ ನಾಲ್ಕು ಸೆಷನ್ಸ್ ನಲ್ಲೇ ಶೇಕಡ 10-50 ಏರಿಕೆಯಾಗಿವೆ. ಟಾಟಾ ಪವರ್​, ಅದಾನಿ ಎಂಟರ್​ ಪ್ರೈಸಸ್, ಮಾರುತಿ ಸುಜುಕಿ, ಸನ್​ಫಾರ್ಮಾ, ಹಿಂಡಾಲ್ಕೋ, ಒಬೆರಾಯ್ ರಿಯಾಲ್ಟಿ, ಸೈಲ್, ಸ್ಪೈಸ್ ಜೆಟ್​, ಟಾಟಾ ಕೆಮಿಕಲ್ಸ್, ಅದಾನಿ ಪವರ್ ಕಂಪನಿಯ ಷೇರುಗಳು ಈ ಪಟ್ಟಿಯಲ್ಲಿವೆ. (ಏಜೆನ್ಸೀಸ್)

    ಸೆನ್ಸೆಕ್ಸ್ 120ಕ್ಕೂ ಹೆಚ್ಚು ಅಂಶ ಏರಿಕೆ, 13,000 ಗಡಿ ದಾಟಿದ ನಿಫ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts