More

    ಹಿರಿಯ ಲೇಖಕ ಎಚ್.ಎಸ್. ಶಿವಪ್ರಕಾಶಗೆ ಅಂಬಿಕಾತನಯದತ್ತ ಪ್ರಶಸ್ತಿ

    ಧಾರವಾಡ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಅನುವಾದಕ, ಚಿಂತಕ ಪ್ರೊ. ಎಚ್.ಎಸ್. ಶಿವಪ್ರಕಾಶ ಭಾಜನರಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ತಿಳಿಸಿದರು.

    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021ನೇ ಸಾಲಿನ ಪ್ರಶಸ್ತಿಗೆ ಶಿವಪ್ರಕಾಶ ಭಾಜನರಾಗಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ಮೊತ್ತ, ಪ್ರಶಸ್ತಿ ಫಲಕ ಒಳಗೊಂಡಿದೆ. ಇದು ಬೇಂದ್ರೆ ಅವರ 125ನೇ ಜನ್ಮದಿನಾಚರಣೆ ಆಗಿರುವುದು ವಿಶೇಷ ಎಂದರು. ಆಯ್ಕೆ ಸಮಿತಿ ಅಧ್ಯಕ್ಷ ಡಾ. ಗುರುಪಾದ ಮರೆಗುದ್ದಿ ನೇತೃತ್ವದಲ್ಲಿ ಸದಸ್ಯರಾದ ಡಾ. ತಾರಿಣಿ ಶುಭದಾಯಿನಿ ಹಾಗೂ ಪ್ರೊ. ಶಿವಾನಂದ ಕೆಳಗಿನಮನಿ ತಂಡ ಒಟ್ಟು ಮೂವರ ಹೆಸರನ್ನು ಆಯ್ಕೆ ಮಾಡಿತ್ತು. ಟ್ರಸ್ಟ್ ಮಂಡಳಿ ಸಭೆಯಲ್ಲಿ ಎಚ್.ಎಸ್. ಶಿವಪ್ರಕಾಶ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಜ. 31ರಂದು ಸಾಧನಕೇರಿಯ ಬೇಂದ್ರೆ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

    ಇದನ್ನೂ ಓದಿ: ‘ಚಿಕನ್​, ಮೊಟ್ಟೆಯನ್ನ 3 ಸೆಕೆಂಡ್​ ಬೇಯಿಸಿದ್ರೂ ಸಾಕು, ಹಕ್ಕಿ ಜ್ವರ ಹತ್ತಿರಾನು ಸುಳಿಯಲ್ಲ’

    ದೆಹಲಿಯ ಜೆಎನ್‌ಯು ಕಲಾ ಮತ್ತು ಸೌಂದರ್ಯಶಾಸ್ತ್ರ ಅಧ್ಯಯನ ಕೇಂದ್ರದ ಡೀನ್ ಆಗಿ ಸೇವೆ ಸಲ್ಲಿಸಿರುವ ಶಿವಪ್ರಕಾಶ ಅವರು, ಬರ್ಲಿನ್‌ನ ಟ್ಯಾಗೋರ್ ಕೇಂದ್ರದ ಭಾರತೀಯ ಕಚೇರಿಯ ನಿರ್ದೇಶಕರಾಗಿ ಸಹ ಕೆಲಸ ನಿರ್ವಹಿಸಿದ್ದಾರೆ. ಹೀಗೆ ಶ್ರೇಷ್ಠ ಕವಿ, ನಾಟಕಕಾರ, ವಿಮರ್ಶಕರಾಗಿರುವ ಶಿವಪ್ರಕಾಶ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುಸುಮಾಗ್ರಜ ಕಾವ್ಯ ಪ್ರಶಸ್ತಿ, ರಾಜ್ಯೋತ್ಸವ ಸೇರಿ ಹತ್ತು, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ಮೊದಲ ನಾಟಕವಾಗಿ ಮಹಾಚೈತ್ರವನ್ನು ಪ್ರಕಟಿಸಿರುವ ಶಿವಪ್ರಕಾಶ, ನಂತರದಲ್ಲಿ ಷೇಕ್ಸ್‌ಪಿಯರ್ ಸ್ವಪ್ನ ನೌಕೆ, ಮಂಟೇಸ್ವಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ, ಮದುವೆ ಹೆಣ್ಣು ಸೇರಿ ಅನೇಕ ನಾಟಕಗಳ ಜತೆಗೆ ಕವನ ಸಂಕಲನಗಳನ್ನೂ ರಚಿಸಿದ್ದಾರೆ. ಇಂತಹವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಟ್ರಸ್ಟ್ ಮಂಡಳಿಗೆ ಸಂತಸ ತಂದಿದೆ ಎಂದರು.

    ಇದೇನಾದರೂ ಜಾರಿ ಆಯ್ತು ಅಂದ್ರೆ ನೀವು ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋಕೂ ಯೋಚ್ನೆ ಮಾಡ್ತೀರಿ!

    ‘ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!’ ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts