More

    ಮಕ್ಕಳಿಗೆ ಸಂಗೀತ ಕಲಿಕೆಗಾಗಿ ಪ್ರೋತ್ಸಾಹಿಸಿ

    ಕುಕನೂರು: ನಾಡಿನ ಜಾನಪದ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅಗತ್ಯವಿದೆ ಎಂದು ಹಿರಿಯ ಸಾಹಿತಿ ಡಾ. ಪಕೀರಪ್ಪ ವಜ್ರಬಂಡಿ ಹೇಳಿದರು.

    ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ

    ತಾಲೂಕಿನ ಗೊರ್ಲೆಕೊಪ್ಪ ಗ್ರಾಮದಲ್ಲಿ ವೈಷ್ಣೋದೇವಿ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ 50ನೇ ವರ್ಷದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಸುಗಮ ಸಂಗೀತ ಕಾರ್ಯಕ್ರಮ ಗುರುವಾರ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಸಂಗೀತ ಕಲೆಯ ಕಲಿಕೆಗಾಗಿ ಉತ್ತಮ ವಾತಾವರಣ ಸೃಷ್ಠಿಸುವ ಅಗತ್ಯವಿದೆ. ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ ಬೆಳೆಸಬೇಕಾಗಿದೆ ಎಂದರು.

    ಇದನ್ನೂ ಓದಿ: ಶಾಲೆಗಳಿಗೆ ಬಾಂಬ್​ ಬೆದರಿಕೆ ಬಗ್ಗೆ ಜಿ ಪರಮೇಶ್ವರ್​​ ಪ್ರತಿಕ್ರಿಯೆ

    ಪ್ರಮುಖರಾದ ಚನ್ನಪ್ಪಗೌಡ್ರು ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೊರ್ಲೆಕೊಪ್ಪ ಗ್ರಾಮದ ಜಾನಪದ ಕಲಾತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲೆಯನ್ನು ಪ್ರದರ್ಶಿಸಿ ಗ್ರಾಮಕ್ಕೆ ಮತ್ತು ನಾಡಿಗೆ ಗೌರವ ತಂದಿದ್ದಾರೆ ಎಂದರು.

    ಪ್ರಮುಖರಾದ ವೀರಯ್ಯ ಹಿರೇಮಠ, ಪ್ರಭು ಶಾಸ್ತ್ರಿ, ಶರಣಯ್ಯ ಇಟಿಗಿ, ಡಾ.ವಿರುಪಾಕ್ಷಯ್ಯ ಹಿರೇಮಠ, ಕಟ್ಟಿಬಸಯ್ಯ ಲಿಂಗಾಪುರ, ಶಾಂತಿವೀರಯ್ಯ ಜುಲ್ಪಿ, ಪತ್ರಕರ್ತ ಬಸವರಾಜ ಕೊಡ್ಲಿ ಇದ್ದರು. ಸೌಭಾಗ್ಯ ವಿರುಪಾಪುರ ಅವರು ಸಾಂಪ್ರದಾಯಕ ಜಾನಪದ ಗೀತೆ ಹಾಡಿದರು. ಮಹಾಂತಮ್ಮ ಸಂಗಡಿಗರು ಹಾಗೂ ಮಂಡಲಗಿರಿಯ ದಂಡೆಮ್ಮ ಸಂಗಡಿಗರು ಸಾಂಪ್ರದಾಯಿಕ ಸೋಬಾನೆ ಪದಗಳನ್ನು ಹಾಡಿದರು. ವೀರಯ್ಯ ಹಾಗೂ ಖಾದರ್ ಸಾಬ್ ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts